ಲಕನೌ: ಕೋಪ ಬರಿಸಿದಕ್ಕೆ ಶಿಕ್ಷಕನ ಮೇಲೆಯೇ ಗುಂಡು ಹಾರಿಸಿ ವಿದ್ಯಾರ್ಥಿಯೊಬ್ಬ ಓಡಿ ಹೋಗಿರುವ ಘಟನೆ ಲಕ್ನೌ ನಲ್ಲಿ ನಡೆದಿದೆ.
ಸಹಪಾಟಿಯೊಂದಿಗೆ 10ನೇ ತರಗತಿಯ ಹುಡುಗ ಜಗಳವಾಡುತ್ತಿದ್ದನ್ನು ಗಮನಿಸಿ ಶಿಕ್ಷಕ ಗಧರಿಸಿದಕ್ಕಾಗಿ ಸಿಟ್ಟಿಗೆದ್ದ ಹುಡುಗ ,ನಾಡ ಬಂದೂಕಿನಿಂದ ಶಿಕ್ಷಕನ ಮೇಲೆ ಮೂರು ಗುಂಡುಗಳನ್ನು ಹಾರಿಸಿ ಬಂದೂಕಿನೊಂದಗೆ ಪರಾರಿಯಾಗಿದ್ದಾನೆ.
ಈ ಪ್ರಕರಣವು ಉತ್ತರ ಪ್ರದೇಶದ ಸೀತಾಪುರದ ಪೋಲೀಸರು ದಾಖಿಲಿಸಿ ಕೊಂಡಿದ್ದಾರೆ. ಗುಂಡೆಟಿನಿಂದ ಗಾಯಗೊಂಡ ಶಿಕ್ಷಕನು ಅಪಾಯದಿಂದ ಪಾರಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೌನ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಹುಡುಗ ಎಸಗಿರುವ ಕೃತ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಅವನು ಬದೂಕಿನ ಹಿಡಿಯಿಂದ ಶಿಕ್ಷಕನಿಗೆ ಒಡೆದಿದ್ದಾನೆ. ಸ್ಥಳೀಯರ ಹುಡುಗನ ಕೈಯಿಂದ ಆಯುಧವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಬೈದಿದಕ್ಕೆ ಬಾಲಕ ಇಷ್ಟೊಂದು ಸಿಟ್ಟಿಗದ್ದಿದಾನೆ ಎಂದು ನನಗೆ ತಿಳಿದೇ ಇರಲಿಲ್ಲ ಎಂದು ಶಿಕ್ಷಕರು ಹೇಳಿದ್ದಾರೆ.