ಲಖಿಂಪುರ ಪ್ರಕರಣ: ಆಶಿಶ್ ಮಿಶ್ರಾಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ

ಲಕ್ನೋ: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಹಾಗೂ ಲಖಿಂಪುರ ಖೇರಿ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಮೃತಪಟ್ಟ ರೈತರ ಕುಟುಂಬದವರು ಇಂದು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಫೆಬ್ರವರಿ 15ರಂದು, ಅಲಹಾಬಾದ್ ಹೈಕೋರ್ಟ್ ಆಶಿಶ್ ಮಿಶ್ರಾಗೆ ಷರತ್ತುಬದ್ಧ ಜಾಮೀನು ನೀಡಿತ್ತು. ನಂತರ ಆಶಿಶ್ ಮಿಶ್ರಾ ಮಂಗಳವಾರ ಸಂಜೆ ಜೈಲಿನಿಂದ ಬಿಡುಗಡೆಯಾದರು. ಜಿಲ್ಲೆಯ ಟಿಕೋನಿಯಾದಲ್ಲಿ ಅಕ್ಟೋಬರ್‌ 3ರಂದು ರೈತರ ಆಂದೋಲನದ ವೇಳೆ ಭುಗಿಲೆದ್ದದ ಸಂದರ್ಭದಲ್ಲಿ ಮೆರವಣಿಗೆ ನಡೆಸುತ್ತಿದ್ದ ವೇಳೆ ನಾಲ್ವರು ರೈತರ ಹತ್ಯೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶಿಶ್ ಮಿಶ್ರಾ ಕಳೆದ ವರ್ಷ ಅಕ್ಟೋಬರ್ 10 ರಿಂದ ಜೈಲಿನಲ್ಲಿದ್ದರು.

ವಿಶೇಷ ತನಿಖಾ ತಂಡವು(ಎಸ್‌ಐಟಿ) ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ರೈತರನ್ನು ಹೊಡೆದುರುಳಿಸಿದ ಘಟನೆಯಲ್ಲಿ ಆಶಿಶ್ ಮಿಶ್ರಾ ಪ್ರಮುಖ ಆರೋಪಿ ಎಂದು ಹೆಸರಿಸಿದೆ. ಕಳೆದ ವರ್ಷ ಅಕ್ಟೋಬರ್ 3 ರಂದು ಅಜಯ್ ಮಿಶ್ರಾ ಸ್ಥಳೀಯ ಬನ್ಬೀರ್ ಗ್ರಾಮಕ್ಕೆ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಭೇಟಿ ನೀಡಿದ್ದನ್ನು ವಿರೋಧಿಸಿ ಟಿಕೋನಿಯಾ ವಿಯಾಜ್‌ನಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ರೈತರ ಮೇಲೆ ಕಾರೊಂದು ಹರಿದಿತ್ತು. ಈ ವೇಳೆ ಒಟ್ಟು ಎಂಟು ಮಂದಿ ರೈತರು ಮರಣ ಹೊಂದಿದರು.

ಈ ಪ್ರಕರಣದಲ್ಲಿ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದು ಅವರನ್ನು ಬಂಧಿಸಲಾಗಿತ್ತು. ಆದರೀಗ ಅವರಿಗೆ ಜಾಮೀನು ನೀಡಲಾಗಿದ್ದು ಅವರು ಬಿಡುಗಡೆಯಾಗಿ ಹೊರಬಂದಿದ್ದಾರೆ. ಇದನ್ನು ಪ್ರಶ್ನಿಸಿ ಮೃತ ರೈತ ಕುಟುಂಬಗಳು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

ವಿಶೇಷವಾಗಿ ಉತ್ತರ ಪ್ರದೇಶ ರಾಜ್ಯದಲ್ಲಿ ಚುನಾವಣಾ ಸಮಯದಲ್ಲಿ ಆಶಿಶ್ ಮಿಶ್ರಾಗೆ ಜಾಮೀನು ಮಂಜೂರಾಗಿದ್ದು ಆಡಳಿತಾರೂಢ ಬಿಜೆಪಿ ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವುದು ಸಾಬೀತಾಗುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳಿದ್ದರೂ ಕಡೆಗಣಿಸಿರುವುದು ಈ ನಿರ್ಧಾರ ರೈತರಿಗೆ ಬೇಸರ ತಂದಿದೆ.

Donate Janashakthi Media

Leave a Reply

Your email address will not be published. Required fields are marked *