ನವದೆಹಲಿ : ಅಕ್ಟೋಬರ್ 3, 2021 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರು ಮತ್ತು ಒಬ್ಬ ಪತ್ರಕರ್ತನ ಪ್ರಮುಖ ಹಂತಕ ಆಶಿಶ್ ಮಿಶ್ರಾ ತೆನಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿರುವುದು ತೀವ್ರ ಆಘಾತಕಾರಿ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಹೇಳಿದೆ. ಆತ ಮತ್ತು ಆತನ ಬಿಜೆಪಿ ಗೂಂಡಾಗಳು ತಮ್ಮ ಕಾರುಗಳಡಿಯಲ್ಲಿ ಐದು ಜನರನ್ನು ಜಜ್ಜಿಹಾಕಿ ಕಗ್ಗೊಲೆ ನಡೆಸಿದ್ದರು. ಆಶಿಶ್ ಮಿಶ್ರಾ ಮತ್ತು ಇತರರ ವಿರುದ್ಧ ಐಪಿಸಿಯ ಸೆಕ್ಷನ್ 302 (ಕೊಲೆ), ಸೆಕ್ಷನ್ 307 (ಕೊಲೆ ಯತ್ನ) ಮತ್ತು ಇತರ ಅತ್ಯಂತ ಗಂಭೀರವಾದ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಈ ಅತ್ಯಂತ ದುರದೃಷ್ಟಕರ ಹೈಕೋರ್ಟಿನ ತೀರ್ಪು ನ್ಯಾಯದ ಘೋರ ಗರ್ಭಪಾತ ಮಾತ್ರವಲ್ಲ, ಪ್ರತಿ ಮಾನ್ಯತೆ ಪಡೆದ ನ್ಯಾಯದ ವಿಧಿ-ವಿಧಾನಗಳಿಗೆ ವಿರುದ್ಧವಾಗಿದೆ.
ಈ ಘೋರ ಅಪರಾಧದ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನೇಮಿಸಿದ ಎಸ್‌ಐಟಿ ಇದು ಅಪಘಾತವಲ್ಲ, ಸ್ಪಷ್ಟವಾದ ಪಿತೂರಿ ಎಂದು ತೀರ್ಮಾನಿಸಿತು. ಎಸ್‌ಐಟಿಯ ಈ ತೀರ್ಮಾನದ ನಡುವೆಯೂ ಇಂದು ಬಂದಿರುವ ತೀರ್ಪು ಜನರಲ್ಲಿ ತೀವ್ರ ಬೇಸರ ಮೂಡಿಸಿದೆ.
ಲಖೀಂಪುರ ಖೇರಿ ಹತ್ಯಾಕಾಂಡದ ನಂತರ, ಎಸ್‌ಕೆಎಂ ಮತ್ತು ಎಐಕೆಎಸ್ ತಕ್ಷಣವೇ ಈ ಹತ್ಯಾಕಾಂಡದ ಕ್ರಿಮಿನಲ್ ಮಾಸ್ಟರ್‌ಮೈಂಡ್ ಮತ್ತು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿಯನ್ನು ಸಂಪುಟದಿಂದ ವಜಾಗೊಳಿಸುವಂತೆ ಮತ್ತು ಕೊಲೆ ಮತ್ತು ಪಿತೂರಿಯ ಆರೋಪದಡಿಯಲ್ಲಿ ಇತರ ಎಲ್ಲ ಕ್ರಿಮಿನಲ್‌ಗಳನ್ನು ಬಂಧಿಸುವಂತೆ ಕರೆ ನೀಡಿದ್ದವು.
ಈ ಭೀಕರ ಹತ್ಯಾಕಾಂಡ ನಡೆದು ನಾಲ್ಕು ತಿಂಗಳು ಕಳೆದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಎಲ್ಲಾ ರಾಜಕೀಯ ನೈತಿಕತೆಯನ್ನು ಗಾಳಿಗೆ ತೂರಿದ್ದಾರೆ ಮತ್ತು ನಾಚಿಕೆಯಿಲ್ಲದೆ ಕೊಲೆಗಾರ ಮತ್ತು ಸಂಚುಕೋರ ಅಜಯ್ ಮಿಶ್ರಾ ತೆನಿಯನ್ನು ಕೇಂದ್ರ ಸಚಿವರನ್ನಾಗಿ ಉಳಿಸಿಕೊಂಡಿದ್ದಾರೆ. ಅದರ ಮೇಲೆ ಇಂದು ಆಶಿಶ್ ಮಿಶ್ರಾ ತೆನಿಗೆ ಜಾಮೀನು ನೀಡುವ ತೀರ್ಪು ಬಂದಿದೆ.
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದ ರೈತರು ಮತ್ತು ಜನರು ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಜನವಿರೋಧಿ, ಕಾರ್ಪೊರೇಟ್ ಪರ, ಕೋಮುವಾದಿ, ಸರ್ವಾಧಿಕಾರಶಾಹಿ ಮತ್ತು ಅನೈತಿಕ ಬಿಜೆಪಿಯನ್ನು ದೊಡ್ಡ ಪ್ರಮಾಣದಲ್ಲಿ ಸೋಲಿಸುವ ತಮ್ಮ ಸಂಕಲ್ಪವನ್ನು ದ್ವಿಗುಣಗೊಳಿಸಬೇಕು ಮತ್ತು ಈ ದಿಕ್ಕಿನಲ್ಲಿ ತಮ್ಮ ಪ್ರಯತ್ನಗಳನ್ನು ಅಗಾಧವಾಗಿ ಹೆಚ್ಚಿಸಬೇಕು ಎಂದು ಎಐಕೆಎಸ್ ಕರೆ ನೀಡಿದೆ..