ಲೈಂಗಿಕ ದೌರ್ಜನ್ಯದ ವಿರುದ್ಧ ರಾಜ್ಯ ಮಟ್ಟದ ಸಮಾವೇಶ

ಬೆಂಗಳೂರು: ಲೈಂಗಿಕ ದೌರ್ಜನ್ಯದ ವಿರುದ್ಧ ಕರ್ನಾಟಕ ವತಿಯಿಂದ ಬೆಂಗಳೂರು ನಗರದ ಸೈಂಟ್ ಜೋಸೆಫ್ಸ್ ಕಾಲೇಜಿನಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಯಿತು.

ಅತ್ಯಾಚಾರದ ರಾಜಕೀಯ- ಭಯ ರಹಿತತೆ, ನ್ಯಾಯ ಹೊಣೆಗಾರಿಕೆ ಮತ್ತು ಪುನಃಶ್ಚೇತನ ಸಾರ್ವಜನಿಕ ಹೊಣೆಗಾರಿಕೆಯ ಕುರಿತು ವಿವಿಧ ವಿಭಾಗಗಳ ಅನುಭವಿಗಳ, ತಜ್ಞರ ಹೋರಾಟಗಾರರ ಅಭಿಪ್ರಾಯ ಮಂಡನೆ ಮತ್ತು ಚರ್ಚೆ ನಡೆಸಲಾಯಿತು.

ಕರ್ನಾಟಕದ ಇಬ್ಬರು ಸಂತ್ರಸ್ತರು ಬಂದು ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದು, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳ ಕಲಾಕಾರರು ರಚಿಸಿದ ಲೈಂಗಿಕ ಹಿಂಸೆಯಿಂದ ನೊಂದ ಬದುಕುಳಿದವರ ಲೋಕದೃಷ್ಟಿಗಳು, ಆಕಾಂಕ್ಷೆಗಳು ಮತ್ತು ಆಸೆಗಳನ್ನು ಪ್ರತಿಬಿಂಬಿಸುವ ‘ಕನ್ನಡಿ’ ಹೆಸರಿನ ಸಂಕಂಥನದ‌ ಪ್ರದರ್ಶನದ ಮೂಲಕ ಅಧಿವೇಶನ ಆರಂಭಗೊಂಡಿತು.

ಇದನ್ನು ಓದಿ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಮುರುಘಾ ಸ್ವಾಮೀಜಿ ಬಂಧನ

ವಿದ್ಯಾರ್ಥಿಗಳು ಮತ್ತು ಸಂತ್ರಸ್ಥರು ದಿನದ ಘೋಷಣೆ ‘ಲೈಂಗಿಕ ಹಿಂಸಾ ಮುಕ್ತ ಬದುಕು ನಮ್ಮದಾಗಲಿ’ ಯ ಬ್ಯಾನರ್ ಬಿಡುಗಡೆ ಮಾಡುವ ಮೂಲಕ ಉದ್ಘಾಟನೆ ನಡೆಯಿತು.

ಮೊದಲ ಗೋಷ್ಠಿಯಲ್ಲಿ ಭಯ ರಹಿತವಾಗಿರುವ ರಾಜಕೀಯ (ಅಪರಾಧಿಗಳಿಗೆ) ಕರ್ನಾಟಕದ ಸಂದರ್ಭದಲ್ಲಿ ಎಂಬ ವಿಷಯದ ಕುರಿತು ಡಾ.ಮೀನಾಕ್ಷಿ ಬಾಳಿ, ಸ್ಟ್ಯಾನ್ಲಿ, ಗೀತಾ ಮೆನನ್, ಗೀತಾ, ಇಷ್ರತ್ ನಿಸಾರ್, ಜ್ಯೋತಿ ಇಟ್ನಾಳ್, ರವರು ತಮ್ಮ ಅನುಭವ ಮುಂದಿಟ್ಟರು.

 

ಅತ್ಯಾಚಾರದ ರಾಜಕೀಯದ ಧಾರ್ಮಿಕ ಮಗ್ಗುಲನ್ನು ತೆರೆದಿಟ್ಟ ಡಾ.‌ಮೀನಾಕ್ಷಿ ಬಾಳಿ, ಆರೋಪಿ ಮತ್ತು ಸಂತ್ರಸ್ಥರು ಯಾವ ವರ್ಗ ಯಾವ ಜಾತಿ ಯಾವ ಧರ್ಮದ ಹಿನ್ನೆಲೆಯವರು ಎನ್ನುವುದರ ಮೇಲೆ  ಪ್ರತಿಕ್ರಿಯೆ ಮತ್ತು ಶಿಕ್ಷೆಯಾಗುವ ಕುರಿತು ಕರ್ನಾಟಕದ ಕೆಲವು ಪ್ರಕರಣಗಳನ್ನು ಉಲ್ಲೇಖಿಸಿ ವಿವರಿಸಿದರು. ಮುರುಘಾಮಠದ ಸ್ವಾಮಿ ಜೈಲುವಾಸ ಮತ್ತು ವೈರುಧ್ಯಗಳು ಬಗ್ಗೆ. ರಾಘವೇಶ್ವರ ಒಮ್ಮೆಯೂ ಪೊಲೀಸ್‌ ಠಾಣೆಗೆ ಕೂಡಾ ಹೋಗದೇ, ಸಿ.ಐ‌.ಡಿ.ಗೆ ಆರೋಪ ಪಟ್ಟಿ ಹಾಕಲು ಅವಕಾಶವಿಲ್ಲವೆಂಬ ಕಾರಣಕ್ಕೆ ಆರೋಪಮುಕ್ತವಾದ ವೈರುಧ್ಯಕ್ಕೆ ಕಾರಣ ರಾಘವೇಶ್ವರ ಬ್ರಾಹ್ಮಣರಲ್ಲಿ ಹವ್ಯಕ ಸಮುದಾಯಕ್ಕೆ ಸೇರಿದ ಕಾರಣ ಎಂಬುದನ್ನು ವಿವರಿಸಿದರು.

ಇದನ್ನು ಓದಿ: ಫೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯಕ್ಕೆ ʻಚರ್ಮದಿಂದ ಚರ್ಮ ಸ್ಪರ್ಶಿಸಿದ್ದರೆ ಮಾತ್ರʼ ಎಂಬ ಅಂಶ ಪರಿಗಣನೆಯಲ್ಲ: ಸುಪ್ರೀಂಕೋರ್ಟ್

ಸ್ಟ್ಯಾನ್ಲಿಯವರು ಮುರುಘಾಮಠದ ಪ್ರಕರಣದಲ್ಲಿ ಎದುರಿಸಬೇಕಾದ ಪ್ರಸಂಗಗಳನ್ನು ವಿವರಿಸಿ ಗರ್ಭ ಚೀಲ ಕಳೆದುಕೊಂಡಿರುವ ಮಹಿಳೆಯರ ಪರಿಸ್ಥಿತಿ ವಿವರಿಸಿದರು.

ಗೀತಾ ಮೆನನ್ ಅಸಂಘಟಿತ ವಲಯದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ವಿವರಿಸಿದರೆ, ಜ್ಯೋತಿ ಇಟ್ನಾಳ್ ತಮ್ಮ ಅನುಭವದ ನೆಲೆಯ ಅಂಶಗಳನ್ನು ಮುಂದಿಟ್ಟರು.

ಇಷ್ರತ್ ನಿಸಾರ್ ಬೆಂಕಿ ಮತ್ತು ಬಾಣಲೆಯ ಮಧ್ಯೆ ಬೇಯುತ್ತಿರುವ ಅಲ್ಪಸಂಖ್ಯಾತ ಮಹಿಳೆಯರ ಪರಿಸ್ಥಿತಿಯನ್ನು ವಿವರಿಸಿದರು.

ಸಭಾಂಗಣದಲ್ಲಿ ತುಂಬಿದ್ದ ಯುವ ಸಮೂಹ ತಮಗೆ ಭವಿಷ್ಯದ ಬಗ್ಗೆ ಭರವಸೆ ಮಾಡುತ್ತಿದೆ ಎಂದು ಆಶಾವಾದಿಗಳಾದರು. ಅತ್ಯಾಚಾರವೆಂಬುದು ಅಧಿಕಾರ ರಾಜಕಾರಣದ ಭಾಗವಾಗಿರುವುದನ್ನು ವಿವಿಧ ಗೋಷ್ಠಿಯಲ್ಲಿ ಚರ್ಚೆಗಳು ನಡೆಯಿತು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

 

Donate Janashakthi Media

Leave a Reply

Your email address will not be published. Required fields are marked *