ಬೆಳ್ತಂಗಡಿ | ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ಸಂಚರಿಸುವ ರಸ್ತೆಯ ಅವ್ಯವಸ್ಥೆಯ ಕೇಳುವವರಾರು? ಡಿವೈಎಫ್‌ಐ ಆರೋಪ

ಬೆಳ್ತಂಗಡಿ : ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ಸಂಚರಿಸುವ ರಸ್ತೆಯಿಂದಾಗಿ ದಿನೇ ದಿನೇ ಸಮಸ್ಯೆಗಳು ಎದುರಾಗುತ್ತಿದ್ದು, ಯಾವ ಅಧಿಕಾರಿಗಳು, ಮಂತ್ರಿಗಳು ಇದರತ್ತ ಗಮನಹರಿಸದಿರುವುದು ದುಸ್ಥಿತಿಗೆ ಕಾರಣವಾಗಿದೆ ಡಿವೈಎಫ್‌ಐ ಆರೋಪಿಸಿದೆ.

ಇಲ್ಲಿನ ರಸ್ತೆ ಹೊಂಡ -ಗುಂಡಿಗಳನ್ನು ಒಳಗೊಂಡು ಮರಣ ಬಾವಿಯಂತೆ ಬಾಯಿಬಿಡುತ್ತಿದೆ. ಇದೇ ಮಾರ್ಗದಲ್ಲಿ ಇತ್ತೀಚಿಗೆ ಬಂದ ನಮ್ಮ ಮೈಸೂರು ಮಹಾರಾಜರು ಅದು ಹೇಗೆ ಬಂದರೋ ಯಾರಿಗೂ ತಿಳಿದಿಲ್ಲ. ಇಲ್ಲಿನ ಜನರು ಇಲ್ಲಿನ ಗುಂಡಿಗಳಲ್ಲಿ ಬಾಳೆ ಗಿಡಗಳನ್ನು ನೆಟ್ಟು ತಮ್ಮ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಅದಲ್ಲದೆ ರಸ್ತೆ ಬದಿಯ ಅಂಗಡಿ ವ್ಯಾಪಾರಸ್ತರ ಪಾಡು ಯಾರಿಗೂ ಬೇಡ ಎಂದು ಅಳಲು ತೋಡಿಕೊಂಡರು.

ಇದನ್ನೂ ಓದಿ : ‘ಗಾಂಧಿ’ ಹತ್ಯೆಗೆ ಮತ್ತೊಮ್ಮೆ ‘ರಾಮ್’ ಬಳಕೆ – ಜಾನ್‍ ಬ್ರಿಟ್ಟಾಸ್‍

ತಮ್ಮಲ್ಲಿರುವ ವಸ್ತುಗಳನ್ನು ವ್ಯಾಪಾರ ಮಾಡಲು ಅವರಿಗೆ ಇದು ಹೊಸತು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಏಕೆಂದರೆ ಹದಗೆಟ್ಟ ರಸ್ತೆಯಿಂದಾಗಿ ಬಂದ ಅಷ್ಟು ದೂಳು ಮಣ್ಣುಗಳು ಲೇಪನವಾಗಿರುತ್ತದೆ. ಇಲ್ಲಿ ಸಂಚರಿಸುವ, ವಿದ್ಯಾರ್ಥಿಗಳು, ಇತರೆ ಜನಸಾಮಾನ್ಯರು ಹಾಗೆಯೇ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಕೂಡ ಮಣ್ಣು, ದೂಳುಗಳನ್ನು ಉಸಿರಾಡಿ ಸೇವಿಸುವಂತಾಗಿದೆ ಎಂದು ದೂರಿದರು.

ಇದನ್ನು ಮನಗಂಡು ಬೆಳ್ತಂಗಡಿ ತಾಲೂಕಿನ ಡಿವೈಎಫ್‌ಐ ಯುವಜನ ಸಂಘಟನೆ ಇಂದು ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕರಿಗೆ ಇಂಜಿನಿಯರ್ ಗೆ ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕೆಂದು ಮನವಿ ಮಾಡಲಾಯಿತು. ಇಲ್ಲವಾದಲ್ಲಿ ಕುಪ್ಪೆಟ್ಟಿಯಲ್ಲಿ ಈ ತಿಂಗಳ ಅಂತ್ಯದೊಳಗೆ ಪ್ರತಿಭಟನೆಯನ್ನು ಕೈಗೊಳ್ಳುವುದಾಗಿ ತಿಳಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯಪಾಲಕರಾದ ಶ್ರೀ ಬಕ್ಕಪ್ಪ ರವರು ಈಗಾಗಲೇ ಸರಕಾರದಿಂದ ತಮಗೆ, “ಪ್ಯಾಚ್ ವರ್ಕ್ ” ಮಾಡಲು ಮಾತ್ರ ಅನುದಾನ ಬಂದಿರುವುದು, ರಸ್ತೆ ಕಾಮಗಾರಿಗೆ ಹಣ ಇನ್ನೂ ಬಂದಿಲ್ಲ ಮುಂದಿನ ಎರಡು-ಮೂರು ತಿಂಗಲೊಳಗೆ ಬರಬಹುದು ಎಂದು ತಿಳಿಸಿದ್ದಾರೆ. ಆದರೆ ಈ ಪ್ಯಾಚ್ ವರ್ಕ್ ಕೆಲಸವನ್ನು ಆದಷ್ಟು ಬೇಗ ಪ್ರಾರಂಭಿಸುವುದಾಗಿ ಮಾಹಿತಿ ನೀಡಿರುತ್ತಾರೆ.

ಈ ಸಂಧರ್ಭದಲ್ಲಿ ಡಿವೈಎಫ್‌ಐ ಬೆಳ್ತಂಗಡಿ ತಾಲೂಕು ಅಧ್ಯಕ್ಷೆ ಅದಿತಿ ಕೊಯ್ಯುರು , ಕಾರ್ಯದರ್ಶಿ ಅಭಿಷೇಕ್ ಪದ್ಮುಂಜ, ಸಹಕಾರ್ಯದರ್ಶಿಗಳಾದ ವಿನುಷರಮಣ ಪಟ್ರಮೆ, ಅಶ್ವಿತಾ ಕುತ್ಲೂರು, ಸದಸ್ಯರಾದ ಈಶ್ವರಿ ಪದ್ಮುಂಜ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ನೋಡಿ : ಉದ್ಯೋಗ ಖಾತ್ರಿ | ಮನರೇಗಾ ಬದಲು ‘ವಿ.ಬಿ-ಜಿ ರಾಮ್ ಜಿ’ ಯಾಕೆ? 125 ದಿನ ಕೆಲಸ ಸಾಧ್ಯವೆ? Janashakthi Media

 

 

Donate Janashakthi Media

Leave a Reply

Your email address will not be published. Required fields are marked *