ನಿಗದಿಗಿಂತ ಅಧಿಕ ಮೊತ್ತದ ಬಸ್ ಟಿಕೆಟ್ ಪಡೆದ ಕೆ.ಎಸ್.ಆರ್.ಟಿ.ಸಿ

ಬೆಂಗಳೂರು: ಟಿಕೆಟ್ ಮೊತ್ತಕ್ಕಿಂತಲೂ ಹೆಚ್ಚಿನ ಹಣ ಪಡೆದ ವಿಚಾರಕ್ಕೆ ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ಎಲ್ಲೆಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ನಿಗದಿ

ಪ್ರಯಾಣಿಕರೊಬ್ಬರು ಜುಲೈ 2ರ ರಾತ್ರಿ 9 ಗಂಟೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಿಂದ ಅಲಂಗಾರು ಕಡೆಗೆ ಸ್ಲೀಪರ್‌ ಬಸ್ಸಿನಲ್ಲಿ ಹೊರಟ್ಟಿದ್ದಾರೆ. ಟಿಕೆಟ್‌ ದರ 46 ರೂ. ಆಗಿದ್ದರೂ ನಿರ್ವಾಹಕ 50 ರೂ. ಪಡೆದಿದ್ದಾನೆ. ಸದ್ಯ ಆ ಟಿಕೆಟ್ ಫೋಟೋ ಎಲ್ಲೆಡೆ ಹರಿದಾಡಿದ್ದೂ, ಇದೀಗ ಟೀಕೆ ವ್ಯಕ್ತವಾಗಿದೆ.

ನಿಗದಿಗಿಂತ ಅಧಿಕ ಮೊತ್ತದ ಬಸ್ ಟಿಕೆಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಇದೇ ಫೋಟೋ ಶೇರ್ ಮಾಡಿ ಶಾಸಕ ಸುರೇಶ್ ಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ . ಅಲ್ಲದೆ ಸಂಬಂಧ ಪಟ್ಟ ಅಧಿಕಾರಿ ಸ್ಪಷನೆ ನೀಡಬೇಕಾಗಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಆನ್ ಲೈನ್ ಗೇಮ್ ನಲ್ಲಿ 18 ಲಕ್ಷ ರೂ ಕಳೆದುಕೊಂಡ ಯುವಕ ಆತ್ಮಹತ್ಯೆ

KSRTC ಸ್ಪಷ್ಟನೆ ಏನು?

ಶಾಸಕ ಸುರೇಶ್ ಕುಮಾರ್ ಪ್ರಶ್ನೆಗೆ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.ಪ್ರತಿಷ್ಠಿತ ಸಾರಿಗೆಗಳಲ್ಲಿ ಪ್ರೀಮಿಯಂ ಸೇವೆ ಜಾರಿಯಲ್ಲಿದೆ. ಪ್ರಯಾಣಿಕರು ಟಿಕೆಟ್‌ ಕಾಯ್ದಿರಿಸಲು ಪಿಒಎಸ್‌ ಯಂತ್ರಗಳನ್ನು ಹಾಗೂ ಇಟಿಎಂ ಯಂತ್ರಗಳಲ್ಲಿ ಯಪಿಐ ವ್ಯವಸ್ಥೆ ಒದಗಿಸಲಾಗಿದೆ.

ETM ಮತ್ತು ಅವತಾರ್ ಕೌಂಟರ್ ಗಳಲ್ಲಿ ಮತ್ತು ಇಟಿಎಂ ಯಂತ್ರಗಳಲ್ಲಿ ಚಿಲ್ಲರೆ ಸಮಸ್ಯೆಯಿಂದ ಪ್ರಯಾಣ ದರವನ್ನು ರೌಂಡ್‌ ಆಫ್‌ ಮಾಡಲು ಆದೇಶಿಸಲಾಗಿತ್ತು. ಇದರ ಪರಿಣಾಮ ಹೀಗಾಗಿದೆ. ಸದ್ಯಕ್ಕೆ ಆ ಸೇವೆಯನ್ನೇ ಹಿಂಪಡೆದಿದ್ದು, ತಂತ್ರಾಂಶ ಸುಧಾರಿಸುವ ಪ್ರಯತ್ನ ಆಗುತ್ತಿದೆ ಎಂದುಕೆಎಸ್‌ಆರ್‌ಟಿಸಿ ಹೇಳಿದೆ.

ಇದನ್ನೂ ನೋಡಿ: ನಮ್ಮನ್ನು ಬೆಳೆಯಲು ಬಿಡಿ : ಸಿಎಂ ಸಭೆಗೆ ಹೊರಟ ತರಕಾರಿ, ಹೂ, ಹಣ್ಣುJanashakthi Media

Donate Janashakthi Media

Leave a Reply

Your email address will not be published. Required fields are marked *