ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್ ಅಡ್ಡಗಟ್ಟಿ ದೌರ್ಜನ್ಯ ಎಸಗಿದ ಖಾಸಗಿ ಬಸ್‌ ಸಿಬ್ಬಂದಿ!

ದಾವಣಗೆರೆ: ದಾವಣಗೆರೆಯಿಂದ ಅರಸಿಕೇರಿ ಮಾರ್ಗವಾಗಿ ಬಳ್ಳಾರಿ ಸಂಚರಿಸುತ್ತಿದ್ದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯ ಬಸ್‌ ಪ್ರಯಾಣಕ್ಕೆ ಖಾಸಗಿ ಬಸ್‌ ಸಿಬ್ಬಂದಿ ತೊಂದರೆ ನೀಡಿದ್ದಲ್ಲದೆ, ಸರ್ಕಾರಿ ಬಸ್‌ ಅನ್ನು ಅಡ್ಡಗಟ್ಟಿ ಅದರ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಕಂಚಿಕೇರಿ ಸಮೀಪ ಸೋಮವಾರ ಬೆಳಿಗ್ಗೆ ನಡೆದಿದೆ. ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಇರುವುದರಿಂದ ತಮ್ಮ ಆದಾಯ ಆದಾಯ ಕಡಿತವಾಗುತ್ತಿದೆ ಎಂದು ಖಾಸಗಿ ಬಸ್‌ ಸಿಬ್ಬಂದಿ ಸರ್ಕಾರಿ ಬಸ್‌ ಚಾಲಕ ಮತ್ತು ಕಂಡಕ್ಟರ್‌ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮುಂಜಾನೆ ದಾವಣಗೆರೆಯಿಂದ ಅರಸಿಕೇರಿ ಮಾರ್ಗವಾಗಿ ಬಳ್ಳಾರಿಗೆ ಹೊರಟಿದ್ದ KSRTC ಬಸ್‌ ಕಂಚಿಕೇರಿ ದಾಟುತ್ತಿದ್ದಂತೆ ಅರಸೀಕೇರಿಗೆ ಹೊರಟಿದ್ದ KA-17 B 2038 ನಂಬರ್‌ನ ‘ಇಲಾಹಿ’ ಎಂಬ ಹೆಸರಿನ  ಖಾಸಗಿ ಬಸ್ಸಿನ ಡ್ರೈವರ್, ಕೆಎಸ್‌ಆರ್‌ಟಿಸಿ ಬಸ್‌ಗೆ ಅಡ್ಡಿಪಡಿಸುತ್ತಾ ಬಸ್ ಚಾಲಾಯಿಸಿದ್ದಾರೆ. ಇಷ್ಟೆ ಅಲ್ಲದೆ ಸುಮಾರು ಇಪ್ಪತ್ತು ನಿಮಿಷ KSRTC ಬಸ್ ಹೋಗಲು ದಾರಿ ಬಿಡದೆ ತೊಂದರೆ ನೀಡಿದ್ದಾಗಿ ಪ್ರತ್ಯಕ್ಷದರ್ಶಿಗಳು ಜನಶಕ್ತಿ ಮೀಡಿಯಾಗೆ ಹೇಳಿದ್ದಾರೆ.

ಇದನ್ನೂ ಓದಿ: ಸಮರ್ಪಕ ಬಸ್‌ ವ್ಯವಸ್ಥೆಗೆ ಆಗ್ರಹಿಸಿ ಎಸ್‌ಎಫ್‌ಐ ಬೃಹತ್‌ ಪ್ರತಿಭಟನೆ

ಸುಮಾರು 20 ನಿಮಿಷಗಳ ನಂತರ ಖಾಸಗಿ ಬಸ್‌ ಅನ್ನು ಕೆಎಸ್‌ಆರ್‌ಟಿಸಿ ಬಸ್‌ ಒವರ್ ಟೇಕ್ ಮಾಡಿತ್ತು. ಆದರೆ ಇದರಿಂದ ಕೆರಳಿದ ಖಾಸಗಿ ಬಸ್‌ನ ಡ್ರೈವರ್‌ ಮತ್ತು ಕಂಡಕ್ಟರ್‌ ಹಳ್ಳಿಯೊಂದರ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಅನ್ನು ಅಡ್ಡ ಹಾಕಿ ಬಸ್ ಚಲಾಯಿಸುತ್ತಿದ್ದ ಡ್ರೈವರ್ ಮತ್ತು ಕಂಡಕ್ಟರ್‌ಗೆ ಅವಾಚ್ಯ ನಿಂದಿಸಿ ದೌರ್ಜನ್ಯ ಎಸಗಿದ್ದಾರೆ.

ಎರಡೂ ಬಸ್‌ಗಳು ಹೋಗುವ ದಾರಿಯಲ್ಲಿ ಪ್ರಯಾಣಿಸುವ ಮಹಿಳೆಯರು ಸರ್ಕಾರದ ಉಚಿತ ಪ್ರಯಾಣ ಯೋಜನೆಯ ಕಾರಣಕ್ಕೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸದೆ, ಸರ್ಕಾರಿ ಬಸ್‌ ಅನ್ನು ಅವಲಂಬಿಸಿದ್ದೇ ಖಾಸಗಿ ಬಸ್‌ ಸಿಬ್ಬಂದಿಯ ಆಕ್ರೋಶಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ಈ ವೇಳೆ ಹಳ್ಳಿಯ ಜನರು ಮತ್ತು KSRTC ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಖಾಸಗಿ ಬಸ್ ಡ್ರೈವರ್ ಮತ್ತು ಕಂಡಕ್ಟರ್ ವರ್ತನೆ ಹಾಗೂ ದೌರ್ಜನ್ಯ ಖಂಡಿಸಿದ್ದು, ಈ ವೇಳೆ ಅವರು ಅವರು ಅಲ್ಲಿಂದ ತೆರಳಿದ್ದಾರೆ.

ಈ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾತೇಶ್, “ಕೂಡ್ಲಿಗೆ ವರೆಗೂ ಪ್ರಯಾಣಿಸಲು ನಾನು ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ್ದೆ. ಆದರೆ ಖಾಸಗಿ ಬಸ್‌ ಸಿಬ್ಬಂದಿಯ ವರ್ತನೆ ಕೆಟ್ಟದಾಗಿತ್ತು. ಹದಿನೈದು ನಿಮಿಷದ ಗಲಾಟೆ ನಡೆದು ಬಳಿಕ ಕೊನೆಯಲ್ಲಿ ಬಸ್ ಹತ್ತುವಾಗ ಆ ಖಾಸಗಿ ಬಸ್ ಕಂಡಕ್ಟರ್‌, ‘ನಮಗೆ ಡಿಪಾರ್ಟ್ಮೆಂಟ್ ಎಲ್ಲ ಚೆನ್ನಾಗಿ ಗೊತ್ತಿದೆ’ ಎಂದು ಜೋರಾಗಿಯೆ ಹೇಳಿದರು. ಇದರ ಅರ್ಥವೇನು ಎಂಬುವುದನ್ನು ಸಾರಿಗೆ ಇಲಾಖೆ ಅಧಿಕಾರಿಗಳೇ ಹೇಳಬೇಕು. ಖಾಸಗಿ ಬಸ್‌ಗಳ ಆಟೋಟಪಕ್ಕೆ ಸರ್ಕಾರ ಬ್ರೇಕ್ ಹಾಕಬೇಕು. ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲಿ KSRTC ಬಸ್‌ಗಳ ಸುಗಮ ಸಂಚಾರಕ್ಕೆ ಅವಕಾಶವನ್ನು ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು. ರಾಜ್ಯ ಸರ್ಕಾರ ಮತ್ತು ರಸ್ತೆ ಸಾರಿಗೆ ನಿಗಮವೂ ಗ್ರಾಮೀಣ ಪ್ರದೇಶಗಳಲ್ಲಿ ಜನರ ಪ್ರಯಾಣಕ್ಕಾಗಿ ಹಾಗು ಹೆಚ್ಚಿನ ಬಸ್ ಗಳನ್ನು ಹಾಕಬೇಕು” ಎಂದು ಹೇಳಿದರು.

ವಿಡಿಯೊ: ಪ್ರಯಾಣದ ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗೆ ತೊಂದರೆ ನೀಡುತ್ತಿರುವ ಖಾಸಗಿ ಬಸ್

ಜನರಿಗೆ ನೆಮ್ಮದಿ ನೀಡುವ ಕಾರ್ಮಿಕರ ಹಕ್ಕುಗಳ ಮೇಲೆನ ದಾಳಿ ನಿಲ್ಲಲಿ – ಎಸ್. ಬಾಲನ್, ವಕೀಲರು Janashakthi Media

Donate Janashakthi Media

Leave a Reply

Your email address will not be published. Required fields are marked *