ಮತೀಯ ಶಕ್ತಿಗಳ ವಿರುದ್ಧ ಹೋರಾಡಿ – ಕೆ.ಎಸ್.ಭಗವಾನ್

ಮೈಸೂರು :ಅಂಬೇಡ್ಕರ್ ಅವರನ್ನು ಇಡೀ ಜಗತ್ತೇ ಅತ್ಯಂತ ಪ್ರತಿಭಾವಂತ ಎಂದು ಗುರುತ್ತಿಸುತ್ತದೆ.ಅದಕ್ಕಾಗಿ ವಿಶ್ವ ಜ್ಞಾನದ ದಿನ ಎಂದು ಆಚರಿಸಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಅವರನ್ನು ಒಂದು ಜಾತಿಗೆ ಸೀಮಿತವಾಗಿ ಗುರುತ್ತುಸುತ್ತಿರುವುದು ದುರಂತ ಎಂದು ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯ ಪಟ್ಟಿದ್ದಾರೆ.

ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಅಂಬೇಡ್ಕರ್ ನೀಡಿದ ಸಂವಿಧಾನದಿಂದಾಗಿಯೇ ಇಂದು ಮಹಿಳೆಯರು ಗೌರವ ಜೀವನ ನಡೆಸಲು ಸಾಧ್ಯವಾಗುತ್ತಿದೆ. ಆದರೆ ಮನುವಾದಿಗಳು ಇದನ್ನು ಸಹಿಸದೇ ಮನುವಾದವನ್ನು ಜಾರಿ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಮತೀಯ ಶಕ್ತಿಗಳು ಇಂದು ಜನರನ್ನು ಜಾತಿ ಧರ್ಮದ ಹೆಸರಿನಲ್ಲಿ ಒಡೆಯುತ್ತಾ ಸಂವಿಧಾನ ನಾಶಕ್ಕೆ ಮುಂದಾಗಿದ್ದಾರೆ ಅದರ ವಿರುದ್ಧ ಯುವ ಜನತೆ ಎಚ್ಚರದಿಂದ ಇರಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪ್ರಾಧ್ಯಾಪಕರಾದ ಡಾ. ಸೀನಾ ನಾಯಕ್, ರಂಗಕರ್ಮಿ ಕೆ ಆರ್ ಗೋಪಾಲಕೃಷ್ಣ, ಸಾಹಿತಿಗಳಾದ ನಾ ದಿವಾಕರ್, SFI ಜಿಲ್ಲಾ ಸಂಚಾಲಕರಾದ ವಿಜಯ್ ಕುಮಾರ್ ಟಿ ಎಸ್, SFI ನ ಮುಖಂಡರಾದ ಚಂದನ ಆರ್.ವಿ, ಯತೀಶ್, ಭಾರತಿ ಲಿಖಿತ, ಶಿವು ಮತ್ತಿತರರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *