ಬೆಂಗಳೂರು : ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ರೈತ ವಿರೋಧಿ ಕಾಯ್ದೆಗಳ ವಿರುದ್ದ ರೈತರು ಬಾರುಕೋಲು ಚಳುವಳಿಯನ್ನು ಹಮ್ಮಿಕೊಂಡಿದ್ದಾರೆ.
ಕೃಷಿ ಸಮೂದೆಗಳನ್ನು ವಿರೋಧಿಸಿ ನಿನ್ನೆ ಭಾರತ್ ಬಂದ್ ನಡೆದಿದ್ದು ಅದರ ಮುಂದುವರೆದ ಭಾಗವಾಗಿ ಇಂದು ರೈತರು ಸಂಗೊಳ್ಳಿ ರಾಯಣ್ಣ ರೈಲ್ವೆನಿಲ್ದಾಣದಲ್ಲಿ ಬಾರುಕೋಲು ಹಿಡಿದು ಹಸಿರು ಶಾಲುಗಳನ್ನು ಬೀಸುತ್ತಾ ಕೇಂದ್ರ ಸರ್ಕಾರ ವಿರುದ್ದ ಘೋಷಣೆ ಕೂಗಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಮೆರವಣಿಗೆ ಹೊರಟಿದ್ದಾರೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರು ಸಿದ್ಧತೆ ನಡೆಸಿದ್ದು ಅದನ್ನು ತಡೆಯಲು ಪೊಲೀಸ್ ಸರ್ಪಗಾವಲನ್ನು ರಚಿಸಲಾಗಿದೆ.
ಈ ರೈತ ಚಳುವಳಿಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಬಯ್ಯಾಪುರ ಗ್ರಾಮದ 3 ವರ್ಷದ ಪುಟ್ಟ ಬಾಲಕ ಬಸ್ಸಯ್ಯ ಹಸಿರು ಶಾಲು ಹಾಗೂ ಬಾರು ಕೋಲು ಹಿಡಿದ ಚಳುವಳಿಯಲ್ಲಿ ಬಾಗವಹಿಸಿದ್ದು ವಿಶೇವಾಗಿತ್ತು.
ಕೃಷಿ ಸಮೂದೆಗಳನ್ನು ವಿರೋಧಿಸಿ ಕರವೇ ಸಂಘಟನೆಯು ಕೂಡ ಕಾರ್ಪೊರೇಷನ್ ವೃತ್ತದ ಕೆಂಪೇಗೌಡ ಪ್ರತಿಮೆ ಎದುರು ಪ್ರತಿಭಟನೆಯನ್ನು ನಡೆಸಿದೆ. ಪ್ರತಿಭಟನೆಯನ್ನು ಉದ್ದೇಶಿಸಿ ಕರವೇ ಸಂಘದ ಅಧ್ಯಕ್ಷ ನಾರಾಯಣಗೌಡ ಮಾತನಾಡುತ್ತಾ “ಇದೇನು ಸರ್ಕಾರನಾ ಅಥವಾ ಹಿಟ್ಲರ್ ಸರ್ವಾಧಿಕಾರನಾ? ಸರ್ಕಾರ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ, ಪೊಲೀಸರ ಮುಖಾಂತರ ರೈತರ ಮೇಲೆ ಗುಂಡಾಗಿರಿ ನಡೆಸುತ್ತಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.” ಹಳ್ಳಿಗಳಲ್ಲಿ ರೈತಮುಖಂಡರ ಮನೆಗೆ ಹೋಗಿ ಚಳುವಳಿ ತಡಿಯುವ ಯೋಜನೆ ಹಾಕಿದೆ. ರೈತ ಮುಖಂಡರ ಮನೆಗೆ ಹೋಗಿ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದಾರೆ. ಆದರು ಪಟ್ಟು ಬಿಡದೇ ರೈತರು ತೊಡೆ ತಟ್ಟಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು. ಕರವೇ ಸಂಘಟನೆಯೂ ಕಾರ್ಪೊರೇಷನ್ ವೃತ್ತದಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದು, ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ.