ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ರಂಗೇರುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸಿವೆ. ಇದರ ನಡುವೆಯೇ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮೊದಲ ಪಟ್ಟಿಯಲ್ಲಿ 47 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. ಈಗ 72 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಒಟ್ಟು 119 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಪಕ್ಷವು ಕಳೆದ ಒಂದು ವರ್ಷದಿಂದ ನಿರಂತರವಾಗಿ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದು, ಇಲ್ಲಿಯವರೆಗೆ ಪಕ್ಷವು 300 ಕ್ಕೂ ಹೆಚ್ಚು ಆಕಾಂಕ್ಷಿಗಳ ಸಂದರ್ಶನ ನಡೆಸಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ ರವಿಕೃಷ್ಣಾರೆಡ್ಡಿ ಹೇಳಿದ್ದಾರೆ.
ಉಳಿದ ಕ್ಷೇತ್ರಗಳಿಗೆ ಸದ್ಯದಲ್ಲಿಯೆ ಅಭ್ಯರ್ಥಿಗಳನ್ನು ಘೋಷಿಸಲಾಗುವುದು. ಅಭ್ಯರ್ಥಿಗಳ ಆಯ್ಕೆಗೆ ಪಕ್ಷವು ಪ್ರಕ್ರಿಯೆ ರೂಪಿಸಿದ್ದು, ಆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಪಕ್ಷದ ನೀತಿ ನಿಯಮಗಳ ಅನುಸಾರವಾಗಿ ನಡೆದುಕೊಂಡು ಪಕ್ಷ ನೀಡಿರುವ ಗುರಿಗಳನ್ನು ತಲುಪಿರುವರನ್ನು ಈ ಆಯ್ಕೆಗೆ ಪರಿಗಣಿಸಲಾಗಿದೆ. ಅದರ ಜೊತೆ ರಾಜ್ಯದ ಜನರ ಹಿತಕ್ಕಾಗಿ ಪ್ರ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎನ್ನುವುದು ಸೇರಿ ಇತರ ಪ್ರತಿಜ್ಞೆ ತೆಗೆದುಕೊಂಡ ನಂತರವಷ್ಟೆ ಅಭ್ಯರ್ಥಿಗಳಿಗೆ ಬಿ-ಫಾರಂ ನೀಡಲಾಗುತ್ತದೆ ಎಂದು ರವಿಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ : ವಿಧಾನಸಭಾ ಚುನಾವಣೆ : ಕೆಆರ್‌ಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಕೆಆರ್‌ಎಸ್ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿ
1. ಕೋಲಾರ / ಶ್ರೀನಿವಾಸಪುರ – ಇಂದಿರಾ ರೆಡ್ಡಿ ಎ
2. ಹಾವೇರಿ – ಪ್ರೇಮ ಕಲಕೇರಿ
3. ಭದ್ರಾವತಿ – ಸುಮಿತ್ರಾ ಬಾಯಿ
4. ಮಸ್ಕಿ- ಗಂಗ
5. ಹೊಸದುರ್ಗ – ತನುಜಾ
6. ಸಂಡೂರು – ವೇಬ ಕುಮಾರಿ
7. ಮಂಗಳೂರು ನಗರ ಉತ್ತರ – ಪಿ ಯಶೋದಾ
8. ಮಂಗಳೂರು ನಗರ ದಕ್ಷಿಣ – ವಿನ್ನಿ ಪಿಂಟೊ
9. ಜಮಖಂಡಿ – ಸುರೇಶ್ ಹಂಚಿನಾಳ್
10. ಹುನಗುಂದ – ದೇಸಾಯಗೌಡ ಎಮ್. ಗೌಡರ
11. ಮುಧೋಳ – ಮುತ್ತಪ್ಪ ಸಿದ್ರಾಮ ಮರನೂರ
12 . ಬೀಳಗಿ – ಧರೆಪ್ಪ ಡಾಕಪ್ಪ ದಾನಗೌಡ
13. ಬಳ್ಳಾರಿ ನಗರ – ಕೆ. ಶ್ರೀನಿವಾಸ ರೆಡ್ಡಿ
14. ಸಿರಗುಪ್ಪ – ದೊಡ್ಡ ಯಲ್ಲಪ್ಪ
15 . ಸವದತ್ತಿ ಯಲ್ಲಮ್ಮ – ಪರಪ್ಪ ಶಂ. ಅಂತಕ್ಕನವರ್
16. ಅರಭಾವಿ – ಶಿವಾನಂದ ದೇಸಾಯಿ
17. ಅಥಣಿ ಸಾಗರ ಕುಂಬಾರ
18. ಕಾಗವಾಡ – ವಿನೋದ್ ಸುಖದೇವ್ ನಂಗರೆ
19. ದೊಡ್ಡಬಳ್ಳಾಪುರ – ಬಿ. ಶಿವಶಂಕರ್
20. ರಾಜಾಜಿನಗರ – ಅಕ್ಷಯ್ ಕೆ.
21. ಪದ್ಮನಾಭನಗರ – ದೀಪಕ್ ಆರ್ ವಿ
22 . ಚಿಕ್ಕಪೇಟೆ – ನವೀನ್ ಹೊಳೆಬಸಪ್ಪ ಕುಬಸದ್
23 . ಬ್ಯಾಟರಾಯನಪುರ – ಪ್ರತಾಪ್
24. ಸರ್ವಜ್ಞನಗರ – ಎಸ್. ಉಮಾಶಂಕರ್
25 . ಚಾಮರಾಜನಗರ – ಸಿ. ಎಲ್. ಶ್ರೀನಿವಾಸ್
26 . ಗುಂಡ್ಲುಪೇಟೆ – ಗಿರೀಶ್ ಕೆ
27 . ಹನೂರು – ಸುರೇಶ್
28 . ಗೌರಿಬಿದನೂರು – ಶ್ರೀನಿವಾಸ್
29 . ಬಾಗೇಪಲ್ಲಿ – ಸಿ. ತಿಪ್ಪಣ್ಣ
30 . ಶಿಡ್ಲಘಟ್ಟ – ಕೆಂಪೇಗೌಡ
31. ಚಳ್ಳಕೆರೆ – ಭೋಜರಾಜ ಸಿ
32 . ಚಿತ್ರದುರ್ಗ – ಚಂದ್ರಣ್ಣ
33 . ಮೂಡಬಿದರೆ – ದಯಾನಂದ
34 . ದಾವಣಗೆರೆ ಉತ್ತರ – ಮಲ್ಲಪ್ಪ ಕೆ.
35 . ಮಾಯಕೊಂಡ – ಸೋಮಶೇಖರ ಬಿ.
36 . ದಾವಣಗೆರೆ ದಕ್ಷಿಣ – ಹೆಚ್. ಕೆ. ದಾವುಲ್ ಸಾಬ್
37 . ಚನ್ನಗಿರಿ – ಮಂಜುನಾಥ್ ಜಿ. ಎಂ.
38 . ಹುಬ್ಬಳ್ಳಿ ಧಾರವಾಡ ಪಶ್ಚಿಮ – ಮಲ್ಲಿಕಾರ್ಜುನ್ ರೊಟ್ಟಿಗವಾಡ
39 . ಗದಗ – ಆನಂದ್ ಬಸವರಾಜ್ ಹಂಡಿ
40. ನರಗುಂದ – ವೀರನಗೌಡ ಮೂಗನೂರು
41. ಬೇಲೂರು – ಆದೇಶ್ ಸಿ. ಎಲ್.
42. ಹೊಳೆನರಸೀಪುರ – ಬಿ. ಕೆ. ನಾಗರಾಜ್
43. ಸಕಲೇಶಪುರ – ಪ್ರದೀಪ್ ಬಿ. ವಿ.
44 . ರಾಣಿಬೆನ್ನೂರು – ಚನ್ನವೀರಯ್ಯ ಹೊಳಗುಂದಿಮಠ
45 . ಶಿಗ್ಗಾಂವ್ – ಶಂಭುಲಿಂಗ
46. ಬ್ಯಾಡಗಿ – ವಿಶ್ವನಾಥ್ ರೆಡ್ಡಿ ರಡ್ಡೇರ
47. ಸೇಡಂ – ಶಿವಕುಮಾರ್ ಕೋಡ್ಲಿ
48. ಮಡಿಕೇರಿ – ಸಜೀರ್ ನೆಲಾಟ್
49. ಮಾಲೂರು – ಮಹೇಶ್
50 . ಕುಷ್ಟಗಿ – ಸುರೇಶ್ ಬಲಕುಂದಿ
51. ಮಳವಳ್ಳಿ – ನಂದೀಶ್ ಕುಮಾರ್ ಎಂ.
52 . ನಂಜನಗೂಡು – ವಿಜಯ್ ಕುಮಾರ್ ಎಂ. ಪಿ.
53. ಕೃಷ್ಣರಾಜ – ಸೋಮಸುಂದರ್ ಕೆ. ಎಸ್.
54. ಚಾಮರಾಜ – ಡಿ ಪಿ ಕೆ ಪರಮೇಶ್
55. ಲಿಂಗಸುಗೂರು – ವಿಜಯ ಕುಮಾರ್ ಪೊಳ್
56. ರಾಯಚೂರು – ರಾಮಣ್ಣ R H J
57. ಮಾನ್ವಿ – ಬಸವಪ್ರಭು
58. ಶಿವಮೊಗ್ಗ – ರಾಜೇಂದ್ರ ಡಿ.
59. ಸೊರಬ – ಟಿ ಮಂಜುನಾಥ್ ಉಪ್ಪಳ್ಳಿ
60. ತುಮಕೂರು ಗ್ರಾಮಾಂತರ – ಆನಂದ್ ವಿ ಎ
61. ಚಿಕ್ಕನಾಯಕನಹಳ್ಳಿ – ಮಲ್ಲಿಕಾರ್ಜುನಯ್ಯ ಬಿ. ಎಸ್.
62. ಗುಬ್ಬಿ – ಪ್ರವೀಣ್ ಗೌಡ ಚೇಳೂರು
63 . ಮಧುಗಿರಿ – ಜಯಂತ್ ಡಿ. ಸಿ.
64 . ಪಾವಗಡ – ಗೋವಿಂದಪ್ಪ
65 . ಉಡುಪಿ – ರಾಮದಾಸ್ ಭಟ್
66. ಭಟ್ಕಳ – ಶಂಕರ ಗಣಪಯ್ಯ ಗೌಡ
67. ಹರಪ್ಪನಹಳ್ಳಿ – ಈಡಿಗರ ಕರಿಬಸಪ್ಪ
68. ಬಬಲೇಶ್ವರ – ಸುನೀಲ್ ರಾಠೋಡ್
69. ಸಿಂದಗಿ – ಪುಂಡಲೀಕ ಬಿರಾದಾರ್
70. ದೇವರ ಹಿಪ್ಪರಗಿ – ಶಿವಾನಂದ ಯಡಹಳ್ಳಿ
71. ಗುರ್ಮಿಠಕಲ್ – ಎಸ್. ನಿಜಲಿಂಗಪ್ಪ ಪೂಜಾರಿ
72. ಯಾದಗಿರಿ – ಶರಣಬಸವ ಅಂಬ್ರಪ್ಪ
ಎರಡನೇ ಪಟ್ಟಿಯಲ್ಲಿ 8 ಮಹಿಳೆಯರು ಸೇರಿ ಇದುವರೆಗೂ 11 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. ಅಭ್ಯರ್ಥಿಗಳ ಪ್ರಾಮಾಣಿಕತೆ, ಪಕ್ಷ ಸಂಘಟನೆಗಾಗಿ ಮಾಡಿರುವ ಕೆಲಸ, ಅವರು ಜನಪರವಾಗಿ ಪಕ್ಷದ ವತಿಯಿಂದ ಮಾಡಿರುವ ಹೋರಾಟ ಮತ್ತು ಜನಪರ ಕಾಳಜಿಗಳನ್ನು ಮಾತ್ರ ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದು ಕೆಆರ್‌ಎಸ್ ಪಕ್ಷದ ಮುಖ್ಯಸ್ಥ ರವಿಕೃಷ್ಣಾರೆಡ್ಡಿ ವಿವರಿಸಿದ್ದಾರೆ.