ಭೂಗಳ್ಳ ಸರಕಾರದ ವಿರುದ್ಧ ರೈತರ ಹೋರಾಟ ತೀವ್ರಗೊಳ್ಳಬೇಕು – ನವೀನ್ ಕುಮಾರ್

ಮೈಸೂರು : ಕೇಂದ್ರ, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ದ ಸಂಘಟಿತ ಹೋರಾಟಕ್ಕೆ ಕರ್ನಾಟಕ ಪಾಂತ ರೈತ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್ ಕರೆ ನೀಡಿದರು.

ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ 2ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಶ್ರೀಮಂತ ಕಾರ್ಪೋರೆಟ್ ಕಂಪನಿಗಳ ಸಾಲ ಮನ್ನ ಮಾಡುವಲ್ಲಿ ತೋರುವ ಆಸಕ್ತಿಯನ್ನು ರೈತರ ಸಾಲ ಮನ್ನಾ ಮಾಡುವಲ್ಲಿ ಆಸಕ್ತಿ ತೋರುತ್ತಿಲ್ಲ‌, ಇದು ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ತೋರಿಸುತ್ತದೆ. ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿ ಮಾಡುತ್ತೇನೆಂದು ಹೇಳಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ರೈತರಿಗೆ ಮೋಸಮಾಡಿ ವರದಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಅಫಿಡೇವಿಟ್ ಸಲ್ಲಿಸಿದೆ ಎಂದು ಆರೋಪಿಸಿದರು.

ಕಾರ್ಪೊರೇಟ್ ಕಂಪನಿಗಳಿ ಅನುಕೂಲ ಮಾಡಿಕೊಡಲು ಕರಾಳ ಕೃಷಿ ಕಾನೂನನ್ನು ತಂದಿತ್ತು ಅದನ್ನು ಧೀರೋದಾತ್ತ ಹೋರಾಟದ ಮೂಲಕ ತಡೆಹಿಡಿಯಲಾಯಿತು. ಆದರೆ ಮೋದಿ ಸರ್ಕಾರ ಪುನಃ ಕರಾಳ ಕಾಯಿದೆಯನ್ನು ತರಲು ಹುನ್ನಾರ ನಡೆಸುತ್ತಿದೆ. ಇದನ್ನು ಹಿಮ್ಮೆಟ್ಟಿಸಲು ಸಂಘಟಿತರಾಗಬೇಕು,ಅಲ್ಲದೆ ಭೂಮಿಗಾಗಿ 50-60 ವರ್ಷಗಳಿಂದ ಸಾಗುವಳಿ ಪತ್ರಕ್ಕೆ ಅರ್ಜಿ ಸಲ್ಲಿಸಿ ಹಕ್ಕು ಪತ್ರಕ್ಕೆ ಕಾಯುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡದೆ,ಕಾನೂನಿನ ನೆಪ ಹೇಳಿ ಸಾಗುವಳಿ ನಿರಾಕರಿಸುತ್ತಿದ್ದಾರೆ. ಆದರೆ ಅದೇ ಸಾಗುವಳಿ ಭೂಮಿಯನ್ನು ಸಂಘ ಸಂಸ್ಥೆಗಳಿಗೆ ನೀಡಲು ಕಂದಾಯ ಸಚಿವರ ನೇತೃತ್ವದಲ್ಲಿ ಸಮಿತಿ ಮಾಡಿ ಖಾಸಗಿ ಸಂಘ ಸಂಸ್ಥೆಗಳಿಗೆ ನೀಡುತ್ತಿದ್ದಾರೆ ಈ ಭೂಗಳ್ಳ ಸರ್ಕಾರದ ವಿರುದ್ಧ ತೀವ್ರ ಹೋರಾಟಕ್ಕೆ ಅಣಿನೆರೆಸಬೇಕಿದೆ ಎಂದರು.

ವೇದಿಕೆಯಲ್ಲಿ ಅಥಿತಿಗಳಾಗಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಯರಾಂ, ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ‌್ಯ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ನೂರಾಣಿ, ಜಿಲ್ಲಾ ಅಧ್ಯಕ್ಷ ಚಿಕ್ಕಣ್ಣೇಗೌಡ, ಮುಖಂಡರಾ ಕೆಂಪಯ್ಯ, ಚಂದ್ರಶೇಖರ್ ಮುಂತಾದವರು ಇದ್ದರು. ಇದಕ್ಕೂ ಮುಂಚೆ ರಾಮಸ್ವಾಮಿ ವೃತ್ತದಿಂದ ಬುದ್ದ ವಿಹಾರದ ವರೆಗೆ ಮೆರವಣಿಗೆ ನಡೆಸಲಾಯಿತು.

Donate Janashakthi Media

Leave a Reply

Your email address will not be published. Required fields are marked *