ದೇವದುರ್ಗ:ತಾಲೂಕಿನ ಪಲಕನಮರಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಸಮರ್ಪಕವಾಗಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಲು ಒತ್ತಾಯಿಸಿ, ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ, ಪಲಕನಮರಡಿ ಗ್ರಾಮ ಪಂಚಾಯತಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ ಪಲಕನಮರಡಿ ಗ್ರಾಮ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಇದನ್ನೂ ಓದಿ:ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಆಗ್ರಹಿಸಿ ಪ್ರಾಂತ ರೈತ ಸಂಘ ಪ್ರತಿಭಟನೆ
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಪಲಕನಮರಡಿ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಸರಿಯಾದ ಸೌಲಭ್ಯಗಳನ್ನು ನೀಡುವಲ್ಲಿ ತಾಲೂಕ ಆಡಳಿತ ಮಂಡಳಿ ಸಂಪೂರ್ಣವಾಗಿ ವಿಫಲವಾಗಿದೆ ಎಂದರು. ಉದ್ಯೋಗ ಖಾತ್ರಿ ಯೋಜನೆಯ ಎಂಬುದು ಬಡ ಕೂಲಿಕಾರರಿಗೆ ರೈತರಿಗೆ ಸಿಗದೆ ಬರಿ ಗುತ್ತೇದಾರರ ಪಾಲಾಗುತ್ತಿದೆ, ಇದಕ್ಕೆ ತಕ್ಕಂತೆ ಸ್ಥಳಿಯ ಅಧಿಕಾರಿಗಳು ಕೂಡ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದರು. ಇಲ್ಲಿರುವ ಸಮಸ್ಯಗಳ ಬಗ್ಗೆ ತಾಲೂಕ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಹಂತದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೆ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಹನುಮಂತ ಗುರಿಕಾರ್,ಮುಖಂಡರಾದ ಶಬ್ಬೀರ ಜಾಲಹಳ್ಳಿ, ಮಲ್ಲಪ್ಪ ಮುಂಡರಗಿ,ಶಾಂತಪ್ಪ ಮೇಸ್ತ್ರಿ ಗಾಣದಾಳ, ಚಾಂದ್ ಪಾಷ, ಹುಸೇನ್ ಭಾಷ,ಮೂರ್ತಿ ನಾಯಕ,ಭಿಮಣ್ಣ ಸೈದಾಪೂರ ಮುಂತಾದವರು ಭಾಗವಹಿಸಿದ್ದರು.