ಕೊರೊನಾ ಕಾಲದಲ್ಲಿ ಕಾಡಿದ ಕವನ, ಮೂಡಿದ ಕತೆ : ಯುವಜನರಿಗೆ ಕತೆ ಮತ್ತು ಕವನ ಸ್ಪರ್ಧೆ:

ಕರ್ನಾಟಕ 2020 : ಕೊರೊನಾ ಕಾಲದಲ್ಲಿ ಮತ್ತು ನಂತರ ಕುರಿತ ಬರಹ ಮತ್ತು ವೆಬಿನಾರುಗಳ ಸರಣಿಯ ಮೂಲಕ

ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ವರೆಗೆ ವೆಬ್ ಪತ್ರಿಕೆ ಲೋಕಾರ್ಪಣೆಯ ಭಾಗವಾಗಿ

www.janashakthimedia.com

ಯುವಜನರಿಗೆ ಕತೆ ಮತ್ತು ಕವನ ಸ್ಪರ್ಧೆ : ಕೊರೊನಾ ಕಾಲದಲ್ಲಿ ಕಾಡಿದ ಕವನ, ಮೂಡಿದ ಕತೆ

ಮೊದಲ   ಬಹುಮಾನ : ರೂ. 3000

ಎರಡನೆಯ ಬಹುಮಾನ : ರೂ. 2000

ಮೂರನೆಯ ಬಹುಮಾನ : ರೂ. 1000

 

ಕೊನೆಯ ದಿನಾಂಕ 20 ಸೆಪ್ಟೆಂಬರ್ 2020

ಸ್ಪರ್ಧೆಯ ನಿಯಮಗಳು

* ಸ್ಪರ್ಧೆಯಲ್ಲಿ ಭಾಗವಹಿಸುವವರು 18 ರಿಂದ 35 ವರ್ಷ ವಯಸ್ಸಿನೊಳಗಿನವರು ಆಗಿರಬೇಕು.

* ಕತೆ ಕವನಗಳು ಸ್ವತಂತ್ರ ರಚನೆಗಳಾಗಿರಬೇಕು. ಒಬ್ಬರು ತಲಾ ಒಂದು ಕತೆ ಮತ್ತು/ಅಥವಾ ಕವನ ಮಾತ್ರ ಕಳಿಸಬಹುದು

* ಕತೆ 2000 ಪದಗಳನ್ನು ಮೀರಬಾರದು

* ಕತೆ ಕವನಗಳು (ಸಾಮಾಜಿಕ ಜಾಲತಾಣ ಹೊರತುಪಡಿಸಿ) ಎಲ್ಲೂ ಪ್ರಕಟಿತವಾಗಿರಬಾರದು

* ಕತೆ ಕವನಗಳು ನುಡಿ ಅಥವ ಯುನಿಕೋಡ್ ತಂತ್ರಾ0ಶದಲ್ಲಿರಬೇಕು

* ಕತೆ, ಕವನ, ಕಿರುಪರಿಚಯಗಳನ್ನು ಪ್ರತ್ಯೇಕ ಫೈಲುಗಳಲ್ಲಿ ಈ ಮೈಲ್ ನಲ್ಲಿ ಮಾತ್ರ ಕಳಿಸಬೇಕು.

* ಕತೆ ಕವನ ಬರೆದಿರುವ ಫೈಲಿನಲ್ಲಿ ನಿಮ್ಮ ಹೆಸರು ಮತ್ತು ವಿಳಾಸ ಬರೆಯುವಂತಿಲ್ಲ.

* ಪ್ರತ್ಯೇಕ ಫೈಲಿನಲ್ಲಿ ಹೆಸರು ಅಂಚೆ ವಿಳಾಸ, ಫೋನ್ ನಂಬರ್, ಈ ಮೇಲ್ ವಿಳಾಸ ಒದಗಿಸಬೇಕು. ಇತ್ತೀಚೆಗಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ನೂರು ಪದ ಮೀರದಂತೆ ಕಿರು ಪರಿಚಯವನ್ನು ಕಳುಹಿಸಬೇಕು. ವಯಸ್ಸು ಸೂಚಿಸುವ ಐಡಿ ಒಂದರ ಪ್ರತಿಯನ್ನು ಕಳಿಸಬೇಕು.

* ಕತೆಯ ಸ್ಪರ್ಧೆಗೆ ಕತೆ ಮತ್ತು ಕಿರುಪರಿಚಯವನ್ನು [email protected]  ಗೆ ಈ ಮೈಲ್ ನಲ್ಲಿ ಕಳಿಸಬೇಕು

* ಕವನದ ಸ್ಪರ್ಧೆಗೆ ಕವನ ಮತ್ತು ಕಿರುಪರಿಚಯವನ್ನು [email protected] ಗೆ ಈ ಮೈಲ್ ನಲ್ಲಿ ಕಳಿಸಬೇಕು

* ಜನಶಕ್ತಿ ಮಿಡಿಯಾದ ಸಿಬ್ಬಂದಿ ಹಾಗೂ ಕುಟುಂಬದವರು ಭಾಗವಹಿಸುವಂತಿಲ್ಲ.

* ಸ್ಪರ್ಧೆಗೆ ಕಳುಹಿಸಿದ ರಚನೆಗಳನ್ನು ಹಿಂದಿರುಗಿಸುವುದಿಲ್ಲ.

* ಬಹುಮಾನಿತ ಕತೆ ಕವನಗಳನ್ನು ಯಾವುದೇ ಸ್ವರೂಪದಲ್ಲಿ ಯಾವಾಗ ಬೇಕಾದರೂ ಬಳಸುವ ಹಕ್ಕನ್ನು ಜನಶಕ್ತಿ ಮೀಡಿಯಾ ಹೊಂದಿರುತದೆ.

* ಸಂಪಾದಕರ ತೀರ್ಮಾನವೇ ಅಂತಿಮ

* ಸ್ಪರ್ಧೆಗೆ ರಚನೆಗಳನ್ನು ಕಳಿಸಲು ಕೊನೆಯ ದಿನಾಂಕ 20 ಸೆಪ್ಟೆಂಬರ್ 2020. ನಂತರ ಬಂದವುಗಳನ್ನು ಮತ್ತು ಮೇಲೆ ಹೇಳಿದ ನಿಯಮಗಳನ್ನು ಉಲ್ಲಂಘಿಸುವ ಕತೆ ಕವನಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

 

 

Donate Janashakthi Media

Leave a Reply

Your email address will not be published. Required fields are marked *