ಕೊರಗ ತನಿಯ ದೇವರು ಅಲ್ಲ, ದೈವವೂ ಅಲ್ಲ – ಧರ್ಮದ ರಾಜಕೀಯ ನಿಲ್ಲಿಸಿ – ಶ್ರೀಧರ ನಾಡ

ಉಡುಪಿ : ಕೊರಗ ತನಿಯನಿಗೆ ಸಂಬಂಧಿಸದೆ ಇರುವ ವೇಷವನ್ನು ಕೊರಗ ತನಿಯನ ವೇಷವೆಂದು ಬಣ್ಣಿಸಿ ಜನರ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ಪದೇ ಪದೇ ಕೊರಗಜ್ಜ ಮತ್ತು ಕೊರಗ ಸಮುದಾಯವನ್ನು ಅಪಮಾನ ಮಾಡಲಾಗುತ್ತಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊರಗ ತನಿಯ ಯಾವತ್ತೂ ಕೂಡ ಹಿಂದು ಧರ್ಮದ ಸಂಕೇತವಲ್ಲ. ಆತನನ್ನು ಕರಾವಳಿ ಜಿಲ್ಲೆಗಳ ಕೊರಗ ಸಮುದಾಯ ಮತ್ತು ಆದಿಮ ಸಂಸ್ಕೃತಿಯ ಪ್ರತೀಕ. ಕೊರಗರು ಆಗಲಿ ಕೊರಗ ತನಿಯನ ಕುರಿತು ಮಾತನಾಡುವ ಮೊದಲು ನಿಮ್ಮವರು ಹಾಗೂ ನೀವು ಮಾಡಿದ, ಮಾಡುತ್ತಿರುವ ಮಹಾ ಮೋಸಗಳ ಬಗ್ಗೆ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕೊರಗ ತನಿಯ ದೇವರು ಅಲ್ಲ, ದೈವವೂ ಅಲ್ಲ. ನಮ್ಮ ಸಮುದಾಯದ ಒಬ್ಬ ಗುರಿಕಾರ. ನಿಮ್ಮ ಮಡಿವಂತಿಕೆಯ ಮೋಸ ಕುತಂತ್ರಕ್ಕೆ ಬಲಿಯಾದವನು. ಕೊರಗ ತನಿಯ ಸಾಮಾಜಿಕ ನ್ಯಾಯದ ಪ್ರತಿಕಾ. ಹುಭಾಶಿಕನ್ನು ನೇರವಾಗಿ ಎದುರಿಸಲು ಸಾಧ್ಯವಾಗದೆ ಮೊಸದಿಂದ ಸಾಯಿಸಿ ಇಡೀ ಸಮುದಾಯವನ್ನು ನಿರ್ಗತಿಕ ಪರಿಸ್ಥಿತಿಗೆ ದೂಡಲಾಗಿದೆ. ಹಾಗೆ ಕೊರಗ ತನಿಯನ ಬದುಕು ಸಹ ದುರಂತ ಕಥೆಯಾಗಿದೆ ಎಂದು ಅವರು ಹೇಳಿಕೆಯಲ್ಲಿ ದೂರಿದ್ದಾರೆ.

ಇದನ್ನೂ ಓದಿ : ಕೊರಗಜ್ಜನದ್ದಲ್ಲದ ವೇಷಕ್ಕೆ ಮತೀಯ ಬಣ್ಣ ಬಳಿಯಬೇಡಿ

ಕೊರಗ ತನಿಯನಿಗೆ ಸಂಬಂಧಿಸದೆ ಇರುವ ವೇಷವನ್ನು ಕೊರಗ ತನಿಯನ ವೇಷವೆಂದು ಬಣ್ಣಿಸಿ ಜನರ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ಪದೇ ಪದೇ ಕೊರಗಜ್ಜ ಮತ್ತು ಕೊರಗ ಸಮುದಾಯವನ್ನು ಅಪಮಾನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಹಿಂದೂ ಇರಲಿ ಮುಸ್ಲಿಂ ಇರಲಿ ಮದುವೆ, ಜಾತ್ರೆ, ತಂಬಿಲದಲ್ಲಿ ನಮ್ಮ ಗುರಿಕಾರ ಕೊರಗ ತನಿಯನ ವೇಷ ಹಾಕಲು ನಿಮಗೆ ಒಪ್ಪಿಗೆ ಕೊಟ್ಟವರು ಯಾರು. ಕೊರಗರ ವೇಷದಲ್ಲಿ ಕೊರಗ ಸಮುದಾಯದ ಘನತೆ ಗೌರವದ ಬದುಕಿಗೆ ಅವಮಾನ ಮಾಡಿ ಪದ ಪ್ರಯೋಗ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಯಕ್ಷಗಾನದಲ್ಲಿ ಬ್ರಾಹ್ಮಣ ವೇಷ, ಮುಸ್ಲಿಂ ವೇಷ ಹಾಕಿದಕ್ಕೆ ತಾವೆಲ್ಲರೂ ಬಹಳ ಪ್ರತಿಕ್ರಿಯೆ ನೀಡುವವರು, ವಿರೋಧಿಸುವವರು, ಕೊರಗರ ವೇಷ ಹಾಕಿ ನಮ್ಮನ್ನು ಹಿಯಾಳಿಸುವಿರಲ್ಲ ಆಗ ನಿಮ್ಮ ಹಿಂದೂ ಧರ್ಮದಲ್ಲಿ ಮತ್ತು ಈ ಪ್ರಜಾಪ್ರಭುತ್ವದ ನ್ಯಾಯಯುತ ಸಮಾಜದಲ್ಲಿ ಕೊರಗರು ಇರುವುದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಇಡೀ ಕೊರಗ ಸಮುದಾಯದ ಅಸ್ತಿತ್ವವನ್ನು ಬುಡಮೇಲು ಮಾಡಿದವರು ಕೊರಗ ತನಿಯನನ್ನು ದೈವ, ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ವಿನಾಶದಂಚಿಗೆ ಬಂದಿರುವ ಕೊರಗ ಸಮುದಾಯದ ಉಳಿಯುವಿಗೆ ನಿಮ್ಮ ಕೊಡುಗೆ ಏನು ಎಂಬುದು ತಿಳಿಸಬೇಕು. ಕೊರಗ ತನಿಯ ಮತ್ತು ಕೊರಗ ಸಮುದಾಯವನ್ನು ರಾಜಕೀಯಕ್ಕೆ ಬಳಸಿ ಅಪಮಾನ ಮಾಡಿರುವುದನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಖಂಡಿಸುತ್ತದೆ. ಹಾಗೆ ಎಲ್ಲರೂ ಸಾಲೆತ್ತೂರಿನ ಕೊರಗಜ್ಜ ವೇಷದ ವಿವಾದಕ್ಕೆ ಸಂಬಂಧಿಸಿದಂತೆ ದ್ವೇಷ ಹರಡಲು ಮಾಡಿರುವ ಹುನ್ನಾರಗಳನ್ನು ವಿಫಲಗೊಳಿಸಿ ಶಾಂತಿ ಸೌಹಾರ್ದತೆ ಕಾಪಾಡಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಒಂದು ಪಾಡ್ದಾನದ ಪ್ರಕಾರ ಮೈರಕ್ಕನ ಆಶ್ರಮದಲ್ಲಿ ಬೆಳೆದ ತನಿಯ ದೊಡ್ಡವನಾದ ಬಳಿಕ ಎಣಸೂರು ಬಾಳಿಕೆಯ ರಾಜ ದೈವಗಳ ನೇಮಕ್ಕೆ ತೆಂಗಿನ ಎಳೆ ಗರಿ, ಸೀಯಾಳ, ಬಾಳೆದಿಂಡು, ಸಿಂಗಾರ ಇತ್ಯಾದಿ ಹೊರೆಯನ್ನು ಹೊರಲು ಏಳು ಮಂದಿ ಕೆಲಸದವರು ಬರದೆ ಇದ್ದಾಗ ತನಿಯ ಒಬ್ಬನೇ ತಂದು ಕೊಡುತ್ತಾನೆ. ಆದರೆ ಕಾಡು ಕೊರಗ ಎನ್ನುವ ಕಾರಣಕ್ಕೆ ಅವನನ್ನು ದೇವಸ್ಥಾನದ ಒಳಗೆ ಬರಲು ನಿರಾಕರಿಸಲಾಗಿದೆ. ಇದನ್ನು ತನಿಯ ಪ್ರತಿಭಟಿಸುತ್ತಾನೆ. ತಾನು ತಂದ ವಸ್ತುಗಳು ಆಗುತ್ತದೆ, ಆದರೆ ನಾನು ಆಗುವುದಿಲ್ಲವೆ ಎಂದು ಪ್ರಶ್ನಿಸುತ್ತಾನೆ. ಅಲೆ ಪಕ್ಕದಲ್ಲಿ ಇರುವ ಮರದಿಂದ ತನ್ನ ಹೆಂಡತಿಗೆ ಮಾಪಲ ಹಣ್ಣು ಕೊಯ್ಯುತ್ತಾನೆ. ಆಗ ಅಲ್ಲಿನ ಮೈಸಂದಾ ಮತ್ತು ಕೊಡಂಗೆನಾರ್ ದೈವಗಳ ಕೆಂಗಣ್ಣಿಗೆ ಗುರಿಯಾಗಿ ಮಾಯವಾದನು. ಈಗಲೂ ಆ ದೈವಗಳು ಶ್ರೇಣೀಕಣದಲ್ಲಿ ಕೊರಗ ತನಿಯನಿಗಿಂತ ಮೇಲಿವೆ ಎಂಬುದನ್ನು ಗಮನಿಸಬೇಕು. ಹಾಗೆ ಇನ್ನೊಂದು ಪಾಡ್ದಾನದಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿ ಇರುವ ಮಾಫಲ ಹುಳಿ ಕೊಯ್ಯಲು ಹೋಗುವಾಗ ಆತನನ್ನು ಬ್ರಾಹ್ಮಣರು ಕಡಿದು ಕೊಲ್ಲುತ್ತಾರೆ’ ಎಂದು ಶ್ರೀಧರ ನಾಡ ತಿಳಿಸಿದ್ದಾರೆ.

Donate Janashakthi Media

One thought on “ಕೊರಗ ತನಿಯ ದೇವರು ಅಲ್ಲ, ದೈವವೂ ಅಲ್ಲ – ಧರ್ಮದ ರಾಜಕೀಯ ನಿಲ್ಲಿಸಿ – ಶ್ರೀಧರ ನಾಡ

  1. Well said. But had these people not done what they had done, people like you would not have got the opportunity to carry forward the message that you have put forth, a tribute to the great soul who refuted popular claims of Sanctity (madi) which prohibits the dying even the much needed water the nectar the source of life that when it is very much needed

    Thank you sir

Leave a Reply

Your email address will not be published. Required fields are marked *