ಕೊಪ್ಪಳ: 2023-24 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕ ಹೆಚ್ಚಳ ಮಾಡಿರುವುದನ್ನು ಭಾರತ ವಿದ್ಯಾರ್ಥಿ ಫೆಡೆರೇಷನ್ (ಎಸ್.ಎಫ್.ಐ) ಗಂಗಾವತಿ ತಾಲೂಕು ಸಮಿತಿಯು ವಿರೋಧಿಸಿದ್ದು, ಅದನ್ನು ಖಂಡಿಸಿ ಬುಧವಾರ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಅವರಿಗೆ ಪ್ರತಿಭಟನಾ ಮನವಿ ಸಲ್ಲಿಸಿದೆ. ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಜಿಲ್ಲೆಯನ್ನು ಬರಗಾಲ ಜಿಲ್ಲೆಯೆಂದು ಸರ್ಕಾರವೆ ಘೋಷಿಸಿರುವಾಗ ಏಕಾಏಕಿ ಶುಲ್ಕ ಏರಿಸಿದ್ದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಎಸ್‌ಎಫ್‌ಐ ಹೇಳಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡುರುವ ಎಸ್‌ಎಫ್‌ಐ, “2023-24 ನೇ ಸಾಲಿನ ಕೊಪ್ಪಳ ವಿಶ್ವವಿದ್ಯಾಲಯದ ಕುಲ ಸಚಿವರು ಸ್ನಾತಕೋತ್ತರ ವಿಭಾಗಗಳ ಕೋರ್ಸಿನ ಪ್ರವೇಶಾತಿಯ ಶುಲ್ಕವನ್ನು ಭಾರಿ ಹೆಚ್ಚಳ ಮಾಡಿದ್ದಾರೆ. ರಾಜ್ಯದಲ್ಲಿ ಒಂದಡೆ ಬರಗಾಲ ತೀವ್ರವಾಗಿ ಆವರಿಸಿದ್ದು. ಹಿಂದುಳಿದ ನಮ್ಮ ಕೊಪ್ಪಳ ಜಿಲ್ಲೆಯು ಬರಗಾಲ ಜಿಲ್ಲೆಯೆಂದು ಘೋಷಣೆಯಾಗಿದೆ” ಎಂದು ಹೇಳಿದೆ.
ಇದನ್ನೂ ಓದಿ: ಸಾಕ್ಷಿ ಮಲಿಕ್‌ಗೆ ಬೆಂಬಲಿಸಿ ಪದ್ಮಶ್ರೀ ಹಿಂದಿರುಗಿಸಲಿರುವ ‘ಗೂಂಗಾ ಪೈಲ್ವಾನ್’ ವೀರೇಂದ್ರ ಸಿಂಗ್!
“ಈಗಿರುವ ಪರಿಸ್ಥಿತಿಯಲ್ಲಿ ಉನ್ನತ ಶಿಕ್ಷಣ ಅಭ್ಯಾಸ ಮಾಡುವವರು ಸಂಖ್ಯೆ ತುಂಬಾ ವಿರಳವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹೊಸ ವಿಶ್ವವಿದ್ಯಾಲಯ ಕೊಪ್ಪಳ ಸುಮಾರು 20,800 ರೂ. ಶುಲ್ಕವನ್ನು ಏಕಾಏಕಿ ಮಾಡಿದ್ದು ಸರಿಯಲ್ಲ. ಕೂಡಲೇ ಈ ಶುಲ್ಕದ ಸುತ್ತೋಲೆಯನ್ನು ವಾಪಸ್ಸು ಪಡೆದು ಬೇರೇ ಬೇರೆ ವಿವಿಗಳ ಶುಲ್ಕಗಳನ್ನು ಪರಿಗಣಿಸಿ ಅವಲೋಕನ ಮಾಡಿ ಕೊಪ್ಪಳ ವಿವಿಯ ಪ್ರವೇಶಾತಿ ಶುಲ್ಕ ನಿಗದಿಗೊಳಿಸುವಂತೆ ಒತ್ತಾಯ ಮಾಡಬೇಕು” ಎಂದು ಎಸ್‌ಎಫ್‌ಐ ಶಾಕರಿಗೆ ಮನವಿ ಮಾಡಿದೆ.
ಈ ಬಗ್ಗೆ ಶಾಸಕರು ಮಧ್ಯ ಪ್ರವೇಶ ಮಾಡಬೇಕು ಎಂದು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ಅವರಿಗೆ ಎಸ್‌ಎಫ್‌ಐ ಕೇಳಿಕೊಂಡಿದೆ. ಶುಲ್ಕ ಹೆಚ್ಚಳವನ್ನು ಕಡಿತಗೊಳಿಸಿವಂತೆ ಶಾಕಸರು ಒತ್ತಡ ಹೇರುವಂತೆ ವಿದ್ಯಾರ್ಥಿ ಸಂಘಟನೆ ಕೇಳಿಕೊಂಡಿದೆ.
ಇದನ್ನೂ ಓದಿ:ಗುಜರಾತ್ | ಶಾಲಾ ಪಠ್ಯಕ್ರಮಕ್ಕೆ ‘ಭಗವದ್ಗೀತೆ’ ಸೇರ್ಪಡೆ
“ಬಳ್ಳಾರಿ, ದಾರವಾಡ, ಗುಲಬುರ್ಗಾ ವಿಶ್ವ ವಿದ್ಯಾಲಯಗಳ ಶುಲ್ಕವು 8.000 ರೂ. ಮೀರದಂತೆ ಶುಲ್ಕ ಇದೆ. ಆದೆರೆ ಕೊಪ್ಪಳ ವಿಶ್ವ ವಿದ್ಯಾಲಯವು 20,800 ರೂ. ಮಾಡಿರುವುದು ವಿಪರ್ಯಾಸವಾಗಿದೆ” ಎಂದು ಹೇಳಿದೆ.
“ಅಲ್ಲದೆ, ಎಎಸ್‌ಸಿ/ಎಸ್‌ಟಿ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೂ ಯಾವುದೇ ರೀತಿಯ ರಿಯಾಯಿತಿ ನೀಡಿಲ್ಲ. ಆದ್ದರಿಂದ ಕೂಡಲೇ ಶುಲ್ಕ ಕಡಿತ ಮಾಡಲು ಶಿಪಾರಸ್ಸು ಮಾಡಬೇಕು” ಎಂದು ಜರ್ನಾರ್ಧನ ರೆಡ್ಡಿ ಅವರಿಗೆ ಎಸ್‌ಎಫ್‌ಐ ಗಂಗಾವತಿ ತಾಲೂಕು ಸಮಿತಿ ಮನವಿ ಮಾಡಿದೆ.
ಶಾಸಕರಿಗೆ ಪ್ರತಿಭಟನಾ ಮನವಿ ನೀಡುವ ವೇಳೆ ಎಸ್‌ಎಫ್‌ಐ ಗಂಗಾವತಿ ತಾಲೂಕು ಸಮಿತಿಯ ಅಧ್ಯಕ್ಷರಾದ ಗ್ಯಾನೇಶ್ ಕಡಗದ, ಉಪಾಧ್ಯಕ್ಷರಾದ ನಾಗರಾಜ ಯು., ಮುಖಂಡರಾದ ಮೌನೇಶ, ರಾಜಭಕ್ಷಿ, ಶಂಕರ, ಬಾಳಪ್ಪ ಸೇರಿದಂತೆ ಇತರರು ಇದ್ದರು.
ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ