ಬಲಾಢ್ಯರ ಬಜೆಟ್ – ಕೂಲಿಕಾರರನ್ನು ಸಂಪೂರ್ಣವಾಗಿ ಕಡೆಗಣಿಸಿದೆ : ನಿತ್ಯಾನಂದಸ್ವಾಮಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಮಂಡಿಸಿದ 2021-2022ರ ಸಾಲಿನ ಬಜೆಟ್ ನಲ್ಲಿ ಸರ್ಕಾರವು ಕೃಷಿ ಕೂಲಿಕಾರರನ್ನು ಕಡೆಗಣಿಸಿದ್ದು ಖಂಡನಾರ್ಹವಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯೂಯು) ವು  ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.

ಸಂಘದ ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ ಹಾಗೂ ರಾಜ್ಯ ಕಾರ್ಯದರ್ಶಿ ಚಂದ್ರಪ್ಪ ಹೋಸ್ಕೇರಾರವರು ಜಂಟಿ ಹೇಳಿಕೆ ನೀಡಿದ್ದು,  ʻʻಕಳೆದ ಫೆಬ್ರವರಿ 25 ರಂದು ರಾಜ್ಯಾದ್ಯಂತ ಗ್ರಾಮೀಣ ಕೆಲಸಗಾರರು ಪ್ರತಿಭಟನೆ ಮಾಡುವ ಮೂಲಕ ಕೇರಳ, ತ್ರಿಪುರ, ತಮಿಳುನಾಡು ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಕೃಷಿಕೂಲಿಕಾರರಿಗೆ ಸಮಗ್ರ ಕಾನೂನೊಂದನ್ನು ಅಂಗೀಕರಿಸಿ ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು ಮೊದಲಾದವರಿಗೆ ಇರುವಂತೆ ಕೃಷಿ ಕೂಲಿಕಾರರಿಗೂ ಕಲ್ಯಾಣ ನಿಧಿಯೊಂದನ್ನು ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ಸರಕಾರಕ್ಕೆ ಮನವಿ ಪತ್ರಗಳನ್ನು ಕಳುಹಿಸಲಾಗಿತ್ತುʼʼ ಎಂದು ಉಲ್ಲೇಖಿಸಿದ್ದಾರೆ.

ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಬಡ ಕೂಲಿಕಾರರು ಬಹುತೇಕ ದಲಿತರಾಗಿದ್ದು ಅವರಿಗೆ ಕಾಯಂ ಕೆಲಸದ ಭರವಸೆ ಇಲ್ಲ, ಖಚಿತ ಆದಾಯವಿಲ್ಲ, ವಾಸಕ್ಕೆ ಮನೆ ಇಲ್ಲ, ಕನಿಷ್ಠ ವೇತನ, ತುಟ್ಟಿಭತ್ಯೆ, ಇಎಸ್ಐ, ಪಿಎಫ್ ಮೊದಲಾದ ಕಾರ್ಮಿಕ ಹಕ್ಕುಗಳನ್ನು ನೀಡುವುದು ಸಮಗ್ರಹ ಕಾನೂನನ್ನು ಬಜೆಟ್ ನಲ್ಲಿ ಘೋಷಿಸಬೇಕೆಂದು ಸಲ್ಲಿಸಿದ್ದ ಮನವಿಯನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳದೆ ಅನ್ಯಾಯ ಮಾಡಿದೆ.

ಈ ಸಾಲಿನ ಯಡಿಯೂರಪ್ಪರವರ ಬಜೆಟ್ ಸಂಪೂರ್ಣವಾಗಿ ಬಡ, ದಲಿತ ಕೂಲಿಕಾರರ ವಿರೋಧಿಯಾಗಿದೆ ಎಂದು ಕೃಷಿ ಕೂಲಿಕಾರ ಸಂಘಟನೆ ತಿಳಿಸಿದೆ.

 

Donate Janashakthi Media

Leave a Reply

Your email address will not be published. Required fields are marked *