ಬೆಂಗಳೂರು: ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕೆಲವು ಸಾಹಿತಿಗಳ ಹೆಸರು ಉಲ್ಲೇಖಿಸಿ ಕೊಲೆ ಬೆದರಿಕೆ ಪತ್ರವೊಂದನ್ನು ಸಂಜಯನಗರದಲ್ಲಿನ ಡಾ.ಬಿ.ಟಿ.ಲಲತಾನಾಯಕ್ ನಿವಾಸಕ್ಕೆ ಕೊಲೆ ಬೆದರಿಕೆ ಪತ್ರ ಬರೆದಿದ್ದಾರೆ. ಕೊಲೆ ಬೆದರಿಕೆ ಪತ್ರ ಹಿನ್ನೆಲೆ ಬಿ.ಟಿ.ಲಲಿತನಾಯಕ್ ಅವರು ಸಂಜಯ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಪತ್ರದಲ್ಲಿ ಪಠ್ಯದಲ್ಲಿ ದೇಶ ಪ್ರೇಮ, ದೇಶ ಭಕ್ತಿ, ದೇಶ ರಕ್ಷಣೆ ಪಾಠ ಸೇರಿಸಿದ್ದಕ್ಕೆ ನಿಮಗೆಲ್ಲ ಭಯವಾಗಿದೆ. ನೀವೂ ನಿಜವಾದ ದೇಶ ದ್ರೋಹಿಗಳು. ನಮ್ಮ ದೇಶವನ್ನು ನಾಶ ಮಾಡಲು ಹೊಂಚು ಹಾಕುತ್ತಿದ್ದೀರಾ..? ಭಯೋತ್ಪಾದಕರು, ನಕ್ಸಲೇಟ್ ಗಳು, ಮಾವೋವಾದಿಗಳು, ದೇಶದ್ರೋಹಿ (ಅಲ್ಪಸಂಖ್ಯಾತ ಸಮುದಾಯದ ಹೆಸರು ಉಲ್ಲೇಖ) ಬೆಂಬಲವಾಗಿ ನಿಂತಿದ್ದೀರಿ. ಸಂಘಟನೆಯೊಂದರ (ಪಿಎಫ್ಐ) ಕಾರ್ಯಕ್ರಮದಲ್ಲಿ ನಮ್ಮ ವೀರ ಸೈನಿಕರ ಬಗ್ಗೆ ಅಗೌರವವಾಗಿ ಮಾತನಾಡಿದ್ದೀರಿ..? ನೀವು ಕ್ಷಮೆ ಕೇಳಬೇಕು. ದಯವಿಟ್ಟು ನೀವು ಎಚ್ಚರಿಕೆಯಿಂದ ಇರಿ ಎಂದು ಕಿಡಿಗೇಡಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ʼಜೈಹಿಂದೂ ರಾಷ್ಟ್ರ, ಭಾರತ ಮಾತೆಗೆ ಜೈ, ಜೈ ಕರ್ನಾಟಕ ಮಾತೆ, ಸಹಿಷ್ಣು ಹಿಂದೂ ಎಂದು ಬರೆದಿದ್ದು, ಶ್ರೀರಾಮ್ ಎಂದು ಉಲ್ಲೇಖಿತ ಹೆಸರಿನ ರಾಜಾಜಿನಗರ ವಿಭಾಗ ಮುದ್ರೆ ಇರುವ ಪತ್ರ ಬಂದಿದೆ.
ಅಲ್ಲದೆ, ಬರಗೂರು ರಾಮಚಂದ್ರಪ್ಪ ಅವರ ಹೆಸರನ್ನು ಉಲ್ಲೇಖಿಸಿ, ʻಈ ಎಡಪಂಥಿ ಲಜ್ಜೆಗೆಟ್ಟ ಚಿಂತಕ, ಬಂಜಕ ಬರಗೂರು ರಾಮಚಂದ್ರ ನನಗೆ ನನ್ನ ಅಭಿವ್ಯಕ್ತಿ ಸ್ವತಂತ್ರ್ಯದಿಂದ ಇವನನ್ನು ಏನು ಮಾಡುಬೇಕು ಅಂದ್ರೇ. ಇವನಿಗೂ ಇವನನ್ನ ಬೆಂಬಲಿಸುವ 61+ ಸಾಹಿತಿಗಳನ್ನು ಗಲ್ಲು ಶಿಕ್ಷೆ ಕೊಡಬೇಕು ಅಥವಾ ದೇಶಬಿಟ್ಟು ಪಾಶ್ಚತ ರಾಷ್ಟ್ರಕ್ಕೆ ಓಡಿಸಬೇಕು ಅಥವಾ ಗುಂಡು ಹಿಕ್ಕಿ ಹೊಡೆಯಬೇಕು ಅಂತ ಹೇಳುತ್ತೆ ನನ್ನ ಅಭಿವಕ್ತಿ ಸ್ವತಂತ್ಯ ನಿಮ್ಮ ಬಿಟ್ಟು ಲಲಿತಾ ನಾಯ್ಕರವರೆʼ ಎಂದು ಕೊನೆಯದಾಗಿ ಬರೆಯಲಾಗಿದೆ.
ಅತ್ಯಂತ ವ್ಯಂಗ್ಯವಾಗಿ ಬರೆಯಲಾಗಿರುವ ಪತ್ರದಲ್ಲಿ ಜಿ.ಎಸ್. ಸಿದ್ದರಾಮಯ್ಯಮ, ಡಾ. ಹಂಪ ನಾಗರಾಜಯ್ಯ, ಬರಗೂರು ರಾಮಚಂದ್ರಪ್ಪ, ದೇವನೂರು ಮಹದೇವ, ಕುಂ ವೀರಭದ್ರಪ್ಪ, ಬಂಜಗೆರೆ ಜಯಪ್ರಕಾಶ್ ಮತ್ತು 61 ಮಂದಿ ಎಂದು ಉಲ್ಲೇಖಿಸಲಾಗಿದೆ.