ವರದಿ: ಆನಂದ್ ಕುಮಾರ್
ಕೋಲಾರ: ಇಲ್ಲಿನ ಐತಿಹಾಸಿಕ ಕೆರೆಯಾದ ಕೋಲಾರಮ್ಮ ಕೆರೆಯ ತುಂಬಾ ಮುಳ್ಳು ಗಿಡಗಳು ಹಾಗು ಗಿಡ ಗಂಟಿಗಳಿಂದ ತುಂಬಿದ್ದು ಮಳೆ ನೀರು ನಿಲ್ಲದಂತಾಗಿದೆ. ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ದಾಖಲೆಯ ಮಳೆಯಿಂದಾಗಿ ಜಿಲ್ಲೆಯ ಬಹಳಷ್ಟು ಕೆರೆಗಳು ಭರ್ತಿಯಾಗಿವೆ.
ಕೋಲಾರಮ್ಮ ಕೆರೆ ಸುಮಾರು 789 ಎಕರೆ ವಿಸ್ತೀರ್ಣವಿದ್ದು ಇದರಲ್ಲಿ ಈಗಾಗಲೇ ಹೆಚ್ಚಿನ ಭಾಗದ ಭೂ ಪ್ರದೇಶ ಸರ್ಕಾರದ ಕಟ್ಟಡಗಳಿಗೆ ಹಾಗು ಕೆಲವರು ಅಕ್ರಮ ಒತ್ತುವರಿ ಮಾಡಿಕೊಂಡಿರುವ ಕಾರಣ ಕೆರೆಯ ವಿಸ್ತೀರ್ಣ ಕುಗ್ಗಿ ಹೋಗಿದೆ.
ಅಧಿಕಾರಿಗಳು ಇಂತಹ ಐತಿಹಾಸಿಕ ಕೆರೆಯನ್ನು ಜೀರ್ಣೋದ್ದಾರ ಮಾಡದೇ ನಿರ್ಲಕ್ಷ್ಯ ವಹಿಸಿರುವ ಕಾರಣದಿಂದಾಗಿಯೇ ಕೆರೆಯ ತುಂಬಾ ಗಿಡ ಗಂಟಿಗಳಿಂದ ತುಂಬಿಕೊಂಡಿದೆ. 20 ವರ್ಷಗಳ ನಂತರ ಈ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮಳೆ ಆಗಿದೆ ಇದರಿಂದ ಬರುವ ನೀರು ಕೆರೆಯಲ್ಲಿ ನಿಲ್ಲದೆ ವ್ಯರ್ಥವಾಗುತ್ತಿದೆ.
ಈ ದೊಡ್ಡ ಕೆರೆಗೆ ಸಂಪರ್ಕಿಸುವ ರಾಜ ಕಾಲುವೆಗಳು ಕೂಡ ಪೊದೆಗಳಿಂದ ಹಾಗೂ ಜಾಲಿ ಮರಗಳಿಂದ ತುಂಬಿ ತನ್ನ ದಿಕ್ಕನ್ನೇ ಬದಲಿಸಿದೆ. ಇದರಿಂದ ಕೆರೆಗೆ ನೀರು ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ ಆದ ಕಾರಣ ನೀರು ನಿಲ್ಲದೆ ವ್ಯರ್ಥವಾಗುತ್ತಿದೆ ಎಂದು ಅಲ್ಲಿನ ಜನರು ಅಧಿಕಾರಿಗಳ ವಿರುದ್ಧ ತುಂಬಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೋಲಾರಮ್ಮ ಕೆರೆಯು ತುಂಬಾ ಹಳೆಯದಾಗಿದ್ದು ಕೆರೆಯ ಕಟ್ಟೆಯನ್ನು ಸರಿಪಡಿಸದ ಕಾರಣ ನೀರು ಸೋರಿಕೆ ಆಗುತ್ತಿದೆ. ಕೆರೆಯ ಮುಂಭಾಗದಲ್ಲಿರುವ ಗಾಂಧಿನಗರ, ಪೆಟ್ರೋಲ್ ಬಂಕ್ ಹಾಗು ಸ್ಮಶಾನ ಮತ್ತು ಕಾಲೇಜು ಇವೆ. ಈ ಕೆರೆ ಏನಾದರೂ ಬಿರುಕು ಬಿಟ್ಟರೆ ಹೆಚ್ಚಿನ ಸಂಖ್ಯೆಯಲ್ಲಿ ಜೀವಹಾನಿ ಉಂಟಾಗುತ್ತದೆ.
ಕೂಡಲೇ ಅಧಿಕಾರಿಗಳು ಹೆಚ್ಚೆತ್ತುಕೊಂಡು ಮುಂಜಾಗೃತ ಕ್ರಮಗಳು ಕೈಗೊಂಡು ಅದನ್ನು ಸರಿಪಡಿಸುವುದು ತುಂಬಾ ಒಳ್ಳೆಯದು. ಇಲ್ಲದವಾದರೆ ಅದರ ಪರಿಣಾಮ ತುಂಬಾ ಭಯಂಕರವಾಗುತ್ತದೆ.