ಬೆಂಗಳೂರು : ಕೊಡಗಿನ ಸುರ್ಲಬ್ಬಿ ಗ್ರಾಮದಲ್ಲಿ ನಡೆದ ಅತ್ಯಂತ ದುರ್ಭರ ಘಟನೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ತೀವ್ರವಾಗಿ ಖಂಡಿಸಿದೆ. ಕೊಡಗು
ಈ ಕುರಿತು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ, ರಾಜ್ಯ ಕಾರ್ಯದರ್ಶಿ ದೇವಿ ಪತ್ರಿಕಾ ಹೇಳಿಕೆ ನೀಡಿದ್ದು, 16 ವಯಸ್ಸಿನ ಹತ್ತನೆ ತರಗತಿಯ ಬಾಲಕಿ ಮೀನಾಳನ್ನು ಪ್ರಕಾಶ್ ಅಲಿಯಾಸ್ ಓಂಪ್ರಕಾಶ್ ಹತ್ಯೆ ಮಾಡಿದ್ದಾನೆ. ಇದು ಅತ್ಯಂತ ಹೇಯ ಕೃತ್ಯ ಎಂದು ಜನವಾದಿ ಮಹಿಳಾ ಸಂಘಟನೆ ಖಂಡಿಸಿದೆ.ಈ ಹಂತಕ ಆ ಪುಟ್ಟ ಬಾಲಕಿಯ ರುಂಡ ಕತ್ತರಿಸಿ ಹಾಕಿದ್ದಾನೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದಿದ್ದಾರೆ. ಕೊಡಗು
ಅಪ್ರಾಪ್ತ ವಯಸ್ಕಳಾದ ಆಕೆಯನ್ನು 35 ವರ್ಷದ ವ್ಯಕ್ತಿಯೊಂದಿಗೆ ಮದುವೆ ಮಾಡಲು ಹೊರಟ ಪೋಷಕರಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಾಲ್ಯ ವಿವಾಹ ಕಾನೂನು ಬಾಹಿರವೆಂದು ಮನವರಿಕೆ ಮಾಡಿಕೊಟ್ಟ ನಂತರ ಮದುವೆಯನ್ನು ಮುಂದೂಡಲಾಗಿತ್ತು. ಮದುವೆಯಾಗಬೇಕಿದ್ದ ಆ ವ್ಯಕ್ತಿಯೇ ರೋಷದಿಂದ ಆ ಬಾಲಕಿಯನ್ನು ಕೊಲೆಗೈದಿದ್ದಾನೆ.
ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು ಈ ಬಾಲಕಿ ನೂರಕ್ಕೆ ನೂರು ಅಂಕ ಗಳಿಸಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾಳೆ. ಮಗು ಸಂತೋಷದಲ್ಲಿರುವಾಗಲೇ ವಿಕೃತ ಮನಸ್ಸಿನ ಓಂಕಾರಪ್ಪ ಅಲಿಯಾಸ್ ಪ್ರಕಾಶ ಅವಳನ್ನು ಎಳೆದೊಯ್ದು ನಿರ್ದಯವಾಗಿ ರುಂಡ ಕತ್ತರಿಸಿ ಮುಂಡವನ್ನು ಬೇರೆ ಮಾಡಿ ಅಕ್ಷರಶಃ ರಾಕ್ಷಸನಂತೆ ಅಟ್ಟಹಾಸಗೈದಿದ್ದಾನೆ.
ಈ ಘಟನೆ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಕರ್ನಾಟಕವೇ ತಲೆ ತಗ್ಗಿಸುವಂತೆ ಆಗಿದೆ. ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಪ್ರಕರಣ ರಾಜಕೀಯ ಕೆಸರೆರೆಚಾಟಕೆ ನಲುಗುತ್ತಿರುವಾಗಲೆ ಕೊಡಗಿನ ಬಾಲಕಿಯ ಈ ಘಟನೆ ಸಂಭವಿಸಿದೆ. ಕೊಡಗು
ಇದೇ ಈಗ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ವರದಿಗಳು ಬರುತ್ತಿವೆ. ಇಂತಹ ವಿಕೃತ ವ್ಯಕ್ತಿಗಳು ಈ ಸಮಾಜದ ಉತ್ಪನ್ನಗಳು. ರಾಜ್ಯದಲ್ಲಿ ಹಿಂಸೆ ದೌರ್ಜನ್ಯ ಗಳು ಅನಿಯಂತ್ರಿತವಾಗಿ ನಡೆಯುತ್ತಿದ್ದು ಇವುಗಳ ಬಗ್ಗೆ ಸರಕಾರ ಇನ್ನಷ್ಟು ಗಂಭೀರವಾಗಿ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಒತ್ತಾಯಿಸಿದೆ.
ಮಹಿಳೆಯರ ವಿರುದ್ದ ನಡೆಯುತ್ತಿರುವ ಹಿಂಸೆ ದೌರ್ಜನ್ಯಗಳನ್ನು ತಡೆಗಟ್ಟಲು ರಾಜ್ಯದಲ್ಲಿ ಉಗ್ರಪ್ಪ ಸಮಿತಿ ನೀಡಿದ ವರದಿಯನ್ನು ಈಗಲಾದರೂ ಕೈಗೆತ್ತಿಕೊಂಡು ಜಾರಿಗೆ ಅಗತ್ಯವಾದ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರಕಾರವನ್ನು ಸಂಘಟನೆ ಆಗ್ರಹಿಸಿದೆ. ಕೊಡಗು