ಕೆ.ಪಿ.ಪೂರ್ಣಚಂದ್ರ ತೇಜಸ್ವಿ ನೆನಪು

ಓದು ಅಭಿಯಾನ

“ನಾನು ನಿನ್ನಂತಯೇ ಅನ್ನ ತಿನ್ನುವ ಸಾಮಾನ್ಯ ಸರಳ ಮನುಷ್ಯ. ನನ್ನ ದೈನಂದಿನ ಅನುಭವಗಳನ್ನು ಇತರರಿಗೆ ತಿಳಿಸುವ ಕಲೆಗಾರಿಕೆಯನ್ನು ಬರೆದು, ತಿದ್ದಿ, ಕಲಿತವನು. ಉತ್ತಮ ಬರಹಗಾರನಾಗಲೂ ಪ್ರತಿಭೆ ಸ್ವೂರ್ತಿ ಎಲ್ಲ ಬೇಕಾದರೂ ಎಲ್ಲಕ್ಕಿಂತ ಮುಖ್ಯವಾಗಿ ಶ್ರದ್ಧೆ, ಕಷ್ಟಪಟ್ಟು ಕೆಲಸ ಮಾಡುವ ತಾಳ್ಮೆ ಅತ್ಯಂತ ಮುಖ್ಯ.” ಎಂದು ಯುವ ಬರಹಗಾರರಿಗೆ ಸ್ಪೂರ್ತಿಯಾಗಿರುವ ನಮ್ಮೆಲ್ಲರ  ನೆಚ್ಚಿನ ಸಾಹಿತಿ, ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿರವರು ಜನ್ಮದಿನವಿಂದು.

ಚಿತ್ರ: ಶಿಲ್ಪಾ

ತೇಜಸ್ವಿಯವರು ಸೆಪ್ಟೆಂಬರ್ 8, 1938 ರಂದು ಶಿವಮೊಗ್ಗ ಜಿಲ್ಲೆಯ  ಕುಪ್ಪಳಿಯಲ್ಲಿ ಜನಿಸಿದರು. ತಂದೆಯ ಆದರ್ಶಗಳನ್ನು ಬೆಳೆಸಿಕೊಂಡು ಬಂದ  ತೇಜಸ್ವಿಯವರು ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹೊಲವನ್ನು ಹೊಂದಿದ್ದ ಇವರು ಪ್ರಕೃತಿಯ ವಿಸ್ಮಯ ಕುರಿತು ಹಲವಾರು ಕೃತಿಗಳನ್ನು ನೀಡಿದ್ದಾರೆ. “ಕರ್ವಾಲೋ” ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಕೂಡ ಮೂಡಿ ಬಂದಿವೆ.

ತೇಜಸ್ವಿಯವರು  “ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ.” ಎಂದು ರಾಜಕೀಯ ಪಲ್ಲಟಗಳ ಕುರಿತು ಜನರನ್ನು ಎಚ್ಚರಿಸಿದ್ದಾರೆ.

ತೇಜಸ್ವಿಯವರ ಇಂತಹ ಅಚ್ಛರಿ ಮತ್ತು ಕುತೂಹಲ ಮುಡಿಸುವ ಪುಸ್ತಕಗಳನ್ನುಕೈಗೆತ್ತಿಕೊಂಡು ಯುವಜನರಿಗೆ  ಓದಿನ ಮೂಲಕ ವಿಚಾರಪರ ತಿಳುವಳಿಕೆಯನ್ನು ಮೂಡಿಸಲು ‘ಕೋಶ ಓದು ದೇಶ ನೋಡು’ ಅರಿವಿನ ಪಯಣದ ಅಭಿಯಾನದಲ್ಲಿ ಈ ಬಾರಿ ತೇಜಸ್ವಿಯವರ ‘ಚಿದಂಬರ ರಹಸ್ಯ’, ‘ಕರ್ವಾಲೋ’, ‘ಜುಗಾರಿ ಕ್ರಾಸ್’ ಮತ್ತು ‘ಕಿರಗೂರಿನ ಗಯ್ಯಾಳಿ’ಗಳನ್ನು ಕೈಗೆತ್ತಿಕೊಂಡಿದ್ದಾರೆ.

ಒಂದು ಒಳ್ಳೆಯ ಪುಸ್ತಕ ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತದೆ. ಅತಂಹ ಪುಸ್ತಕಗಳ ಓದುವುದು ಮತ್ತು ಓದಿಸುವುದರ ಮೂಲಕ ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡುವುದು ಮತ್ತು ಯುವಕರನ್ನು ಓದಿನ ಮೂಲಕ ಎಚ್ಚರಿಸುವ ಪ್ರಯತ್ನ ನಮ್ಮದು ಎಂದು  ಓದು ಅಭಿಯಾನದ ಆಯೋಜಕರಾದ ಮುನೀರ್ ಕಾಟಿಪಾಳ್ಯ ತಿಳಿಸಿದ್ದಾರೆ.

   

Donate Janashakthi Media

Leave a Reply

Your email address will not be published. Required fields are marked *