ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನದ ಕೈಗಾರಿಕೆಯಲ್ಲಿ ನೀಡಿರುವ ಕೈಗಾರಿಕಾ ಉದ್ಯೋಗ (ಜಾರಿಯಲ್ಲಿರುವ ಆದೇಶ) ಕಾನೂನಿನ ವಿನಾಯತಿ ತಕ್ಷಣವೇ ರದ್ದುಗೊಳಿಸುವಂತೆ ಆಗ್ರಹಿಸಿ ಕೆಐಟಿಯು ಸಂಘಟನೆ ಪ್ರತಿಭಟನೆ ನಡೆಸಿತು. ಮಾಹಿತಿ
ನೂರಾರು ಮಾಹಿತಿ ತಂತ್ರಜ್ಞಾನ ಕಾರ್ಮಿಕರು ಕರ್ನಾಟಕ ರಾಜ್ಯ ಐ.ಟಿ ಎಂಪ್ಲೋಯೀಸ್ ಯೂನಿಯನ್ (ರಿ) (KITU) ನ ಧ್ವಜವನ್ನು ಹಿಡಿದು ಕಾರ್ಮಿಕ ಆಯುಕ್ತರ ಕಛೇರಿ (ಕಾರ್ಮಿಕ ಭವನ) ಎದರು ಪ್ರತಿಭಟನೆ ನಡೆಸಿದರು. ಬಳಿಕ ಹಿರಿಯ ಕಾರ್ಮಿಕ, ಕೆಐಟಿಯು ಸಂಘಟನೆಯ ಅಧ್ಯಕ್ಷ ವಿಜೆಕೆ ನಾಯರ್ ಮತ್ತು ಪ್ರದಾನ ಕಾರ್ಯದರ್ಶಿ ಸೂರಜ್ ನಿದಿಯಂಗ ನೇತೃತ್ವದಲ್ಲಿ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಮಾಹಿತಿ ತಂತ್ರಜ್ಞಾನದ ಕೈಗಾರಿಕೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸುಮಾರು 20 ಲಕ್ಷ ಕಾರ್ಮಿಕರು ಕೆಲಸಮಾಡುತ್ತಿದ್ದು, ಈ ಮೊದಲು ನಾಲ್ಕು ಬಾರಿ ಮಾಹಿತಿ ತಂತ್ರಜ್ಞಾನದ ಕೈಗಾರಿಕೆದಲ್ಲಿ ಕಾರ್ಮಿಕ ಕೈಗಾರಿಕಾ ಉದ್ಯೋಗ (ಜಾರಿಯಲ್ಲಿರುವ ಆದೇಶ) ಕಳೆದ ಬಾರಿ ಅಂದರೆ 2019 ರ ಮೇ25ರಂದು ಸರ್ಕಾರ ವಿನಾಯತಿ ನೀಡಿ ಸುತ್ತೋಲೆ ಹೊರಡಿಸಿರುತ್ತದೆ. ಈ ವಿನಾಯಿತು ಇದೇ ಮೇ 25 ಕ್ಕೆ ಕೊನೆಗೊಳ್ಳಲಿದೆ. ಕರ್ನಾಟಕ ರಾಜ್ಯ ಐ.ಟಿ ಎಂಪ್ಲೋಯೀಸ್ ಯೂನಿಯನ್ (ರಿ) (KITU) ವು ಮಾಹಿತಿ ತಂತ್ರಜ್ಞಾನದ ಕೈಗಾರಿಕೆಯಲಿನ ನೋಂದಯಿತ ಏಕ ಕಾರ್ಮಿಕ ಸಂಘಟನೆಯಾಗಿದೆ. ಹತ್ತು ಸಾವಿರಕ್ಕಿಂತ ಮೇಲ್ಪಟ್ಟು ಸದಸ್ಯರು ಇದರಲ್ಲಿ ನೋಂದಾಯಿತರಾಗಿದ್ದು, ಮಾಹಿತಿ ತಂತ್ರಜ್ಞಾನದ ಮಾಲಿಕರು ಸರ್ಕಾರ ವಿನಾಯತಿಯ ಮೇರೆಗೆ ನೀಡಿರುವ ನಾಲ್ಕು ಷರತ್ತಗಳನ್ನು ಪಾಲಿಸಿರುವುದಿಲ್ಲ ಹಾಗಾಗಿ ಮಾಹಿತಿ ತಂತ್ರಜ್ಞಾನದ ಕೈಗಾರಿಕೆಗೆ ಸರ್ಕಾರ ನೀಡಿರುವ ವಿನಾಯಿತಿಯನ್ನು ರದ್ದುಗೊಳಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಕಚೇರಿಯ ವೇಳೆಯಲ್ಲಿ, ಕಾರ್ಮಿಕರು ಕೆಲಸಮಾಡುವ ಪ್ರದೇಶದಲ್ಲಿ ಮಹಿಳಾ ಕಾರ್ಮಿಕರಿಗೆ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಅಂತರಿಕ ಸಮಿತಿಗಳನ್ನು ನೇಮಕ ಮಾಡಲು ಮತ್ತು ಕುಂದುಕೊರತೆ ಪರಿಹಾರ ಸಮಿತಿಯನ್ನು ನೇಮಕ ಮಾಡಬೇಕು.ಕಾರ್ಮಿಕ ಇಲಾಖೆಗಳಿಗೆ ಈ ವಿಭಾಗದಲ್ಲಿ ದುಡಿಯುವ ಕಾರ್ಮಿಕರ ಮೇಲೆ ತೆಗೆದುಕೊಂಡಿರುವ ಹಿಂಬಡ್ತಿ, ವಜಾ ಮಾಡುವುದು ಮತ್ತು ಶಿಸ್ತು ಕ್ರಮದಂತಹ ಸಂದರ್ಭಗಳ ಮಾಹಿತಿ ನೀಡಬೇಕಾಗಿದೆ ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಕೈಗಾರಿಕಾ ವಿವಾದ ಕಾಯಿದಡಿ ಸರಕಾರದ ಅನುಮತಿಯಿಲ್ಲದೆ ಸಾವಿರಗಟ್ಟಲೆ ಕಾರ್ಮಿಕರನ್ನು ಯಾವುದೇ ಮಾಹಿತಿ ಅಥವಾ ತನಿಖೆ ಮತ್ತು ತಿಳುವಳಿಕೆ ನೀಡದೆ ಕಾನೂನು ಬಾಹಿರ ವಜಾ ಮಾಡಬಾರದು. ಆದರೆ,ಮಾಹಿತಿ ತಂತ್ರಜ್ಞಾನದ ಕೈಗಾರಿಕೆಯಲ್ಲಿ ಕಾರ್ಮಿಕ ಕಾನೂನುಗಳಿಗೆ ಸಾರ್ಕಾರ ವಿನಾಯತಿ ನೀಡುವಾಗ ಮಾಡಿರುವ ಯಾವುದೇ ಷರತ್ತುಗಳನ್ನು ಮಾಲಿಕರು ಪಾಲನೆ ಮಾಡದೆ ಕೆಲಸದಿಂದ ವಜಾ ಮಾಡುವಿಕೆ ನಿರಂತರವಾಗಿ ನಡೆಯುತ್ತದೆ. ಕೈಗಾರಿಕಾ ವಿವಾದ ಕಾನೂನಿಡಿಯಲ್ಲಿ ನಮ್ಮ ಸಂಘಟನೆ ಹಲವಾರು ಪ್ರಕರಣಗಳನ್ನು ಕಾರ್ಮಿಕ ಇಲಾಖೆಯ ಗಮನಕ್ಕೆ ತಂದಿದೆ. ಆದರೆ ಅವುಗಳನ್ನೂ ಪರಹಿರಿಸುವ ಕೆಲಸ ಆಗಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ಸೂರಜ್ ನಿದಿಯಂಗ್ ಆರೋಪಿಸಿದರು.
ಕಾರ್ಮಿಕ ಕಾನೂನಿನಡಿಯಲ್ಲಿ ಬರುವ ಎಲ್ಲಾ ಸೇವೆಯ ಷರತ್ತುಗಳ ನಿಯಮಗಳನ್ನು ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಅನುಭಂದಿತ ಸೇವೆಗಳ ಕೈಗಾರಿಕೆಗಳಲ್ಲಿ ಇದರ ವ್ಯಕ್ತ ವ್ಯಾಖ್ಯಾನಗಳನ್ನು ಕಾರ್ಮಿಕ ಮತ್ತು ಮಾಲಿಕರ ಸಹಭಾಗಿತ್ವ ದಲ್ಲಿ ನಿರ್ಣಯಿಸಬೇಕಿದೆ. ಇದು ರಾಜ್ಯ ಸರ್ಕಾರವು ಮಾಹಿತಿ ತಂತ್ರಜ್ಞಾನದ ಕೈಗಾರಿಕೆಯಲ್ಲಿ ನೀಡಿರುವ ವಿನಾಯತಿಯನ್ನು ರದುಗೊಳಿಸಿ ಕೈಗಾರಿಕೆಗೆ ಸೂಕ್ತವಾದಂತೆ ಕೈಗಾರಿಕಾ ಉದ್ಯೋಗ (ಜಾರಿಯಲ್ಲಿರುವ ಆದೇಶ) ಜಾರಿ ಮಾಡಿದರೆ ಮಾತ್ರ ಸಾದ್ಯ ಎಂದು ಕೆಐಟಿಯು ಒತ್ತಾಯಿಸಿದೆ. ಕೈಗಾರಿಕೆಯಲ್ಲಿ ನೀಡಿರುವ ವಿನಾಯಿತಿ ರದ್ದತಿಗೆ ಕರ್ನಾಟಕ ಉಚ್ಚ ನ್ಯಾಯಾಲದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.