ಸಂಸದ ಅನಂತಕುಮಾರ ಹೆಗಡೆ ಕಾಣೆಯಾಗಿದ್ದಾರೆ : ಹುಡುಕಿಕೊಡುವಂತೆ ಕಿತ್ತೂರ ಕ್ಷೇತ್ರದಲ್ಲಿ ಜನಾಗ್ರಹ

ಬೆಂಗಳೂರು: ಇಡೀ ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆ, ಮರಣ ಮೃದಂಗ ಭಾರಿಸುತ್ತಿದ್ದು, ಜನರು ಸಾವು, ನೋವುಗಳ ಮಧ್ಯ ಹೋರಾಟ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಬಾರದ ಸಂಸದ ಅನಂತಕುಮಾರ ಹೆಗಡೆ ಅವರನ್ನು ಹುಡುಕಿ ಕೊಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತಿ ಪತ್ರಗಳು ಹಾಗೂ ಮನವಿ ಪತ್ರ ಹರಿದಾಡುತ್ತಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಜನರ ಕಷ್ಟಗಳಿಗೆ ಧ್ವನಿಯಾಗದೇ ಕೊರೊನಾ ಕುರಿತು ಒಂದು ಸಭೆಗೂ ಹಾಜರಾಗದೆ ಜನರ ನೆರವಿಗೂ ಬಾರದೆ, ಸಂಸದ ಅನಂತ ಕುಮಾರ್​ ಹೆಗಡೆ ಕಾಣೆಯಾಗಿದ್ದಾರೆ. ಹುಡುಕಿ ಕೊಡುವಂತೆ ತಹಶಿಲ್ದಾರರಿಗೆ ಮನವಿ ಪತ್ರ ಬರೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಿತ್ತೂರು ಬೆಳಗಾವಿಗೆ ಸೇರುತ್ತದೆ. ಬೆಳಗಾವಿ ಸಂಸದರನ್ನು ಬಿಟ್ಟು ಇವರನ್ನು ಯಾಕೆ ಕೇಳುತ್ತಿದ್ದಾರೆ ಅಂತಾ ಯೋಚಸ್ತಾ ಇದ್ದೀರಿ,  ಕಿತ್ತೂರು ಉತ್ತರ ಕನ್ನಡ ಲೊಕಸಭಾ ಕ್ಷೇತ್ರಕ್ಕೆ  (ಕೆನರಾ ಲೋಕಸಭೆ) ಸೇರ್ಪಡೆಗೊಂಡ ಮತಕ್ಷೇತ್ರ. ಹಾಗಾಗಿ ಅವರು ಸಂಸದ ಅನಂತಕುಮಾರ್‌  ಹೆಗೆಡೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ಬೆಡ್ ಬ್ಲಾಕಿಂಗ್ ಕೇಸ್ – ಸತೀಶ್ ರೆಡ್ಡಿ ಆಪ್ತ ಅರೆಸ್ಟ್

ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಸಂಸದ ಅನಂತಕುಮಾರ ಹೆಗಡೆ ಅವರು ನೊಂದ ಜನರ ನೆರವಿಗೆ ಬಾರದು, ವ್ಯಾಪಕ ಟೀಕೆ ಕೇಳಿ ಬರುತ್ತಿದೆ. ಕಿತ್ತೂರು ನಾಡಿನ ಜನ ತಮ್ಮ ಮತ ನೀಡಿ ಜನಸೇವೆ ಮಾಡಲು ಆರಿಸಿ ಕಳಿಸಿದ್ದಾರೆ. ಜನರ ನೆರವಿಗೆ ಬನ್ನಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲವು ವರ್ಷಗಳಿಂದ ನಾಪತ್ತೆಯಾಗಿರುವ ಹೆಗಡೆ ಅವರನ್ನ‌ ಹುಡುಕಿ ಕೊಡಿ ಎಂದು ತಹಶಿಲ್ದಾರರಿಗೆ, ಮನವಿ ಪತ್ರದಲ್ಲಿ ಬರೆಯಲಾಗಿದೆ.

ಇನ್ನೋಂದು ಪೋಸ್ಟರ್‌ ನಲ್ಲಿ ನಮ್ಮ ಸಂಸದರು ಕಾಣೆಯಾಗಿದ್ದಾರೆ,  ಹೆಸರು : ಅನಂತಕುಮಾರ ಹೆಗಡೆ,  ಧರ್ಮ : ಹಿಂದು, ಜಾತಿ : ಬ್ರಾಹ್ಮಣ,  ಕೆಂಪು ಬಣ್ಣ, ಗುಂಗುರು ಕೂದಲು, ಎತ್ತರ ಸುಮಾರು 6 ಅಡಿ,  ಉದ್ದನೆಯ ಮೂಗು , ಆದರ್ಶ ವ್ಯಕ್ತಿಗಳು:  ದೇಶದ್ರೋಹಿ ನಾಥೂರಾಮ್‌ಗೋಡ್ಸೆ, ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೋಸ್ಟರ್‌ ನಲ್ಲಿ ಬರೆಯಲಾಗಿದೆ. ಈ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದೆ.

Donate Janashakthi Media

Leave a Reply

Your email address will not be published. Required fields are marked *