ಡಿ. 24 ಕ್ಕೆ, ಕಿತ್ತೂರು ಚನ್ನಮ್ಮ ಮೆಗಾ ನಾಟಕ ಪ್ರದರ್ಶನ

  • ಡಿ. 24, 25ರಂದು ಧಾರವಾಡದ ಕೆಸಿಡಿ ಮೈದಾನದಲ್ಲಿ ನಾಟಕದ ಮೊದಲ ಪ್ರದರ್ಶನ.
  • ಧ್ವನಿ- ಬೆಳಕಿನ ತಂತ್ರಜ್ಞಾನವನ್ನು ಬಳಸಿಕೊಂಡು ವಿಶಾಲ ವೇದಿಕೆ ಮೇಲೆ ನಾಟಕ ಕಟ್ಟಿಕೊಡಲು ಪ್ರಯತ್ನ.
  • ಆನೆ, ಕುದುರೆ, ನೂರಾರು ಸೈನಿಕರು ದೃಶ್ಯಗಳನ್ನು ಧ್ವನಿ- ಬೆಳಕಿನ ತಂತ್ರಜ್ಞಾನದ ನಾಟಕ

ಧಾರವಾಡ: ‘ವೀರ ರಾಣಿ ಕಿತ್ತೂರು ಚೆನ್ನಮ್ಮ ಜೀವನ ಆಧಾರಿತ ಮೆಗಾ ನಾಟಕವನ್ನು ಇದೆ ಪ್ರಥಮ ಬಾರಿಗೆ ಧಾರವಾಡ ರಂಗಾಯಣದಿಂದ ಪ್ರದರ್ಶನಕ್ಕೆ ಸಿದ್ದಗೊಳಿಸಲಾಗಿದೆ. ಡಿ. 24 ಹಾಗೂ 25ರಂದು ನಾಟಕ ಪ್ರದರ್ಶನಗೊಳ್ಳಲಿದೆ’ ಎಂದು ಧಾರವಾಡ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಹೇಳಿದರು.

‘ಕರ್ನಾಟಕ ಕಾಲೇಜು ಆವರಣದಲ್ಲಿ ಡಿ. 24ರಂದು ಪ್ರದರ್ಶನಗೊಳ್ಳಲಿರುವ ಪ್ರಥಮ ಪ್ರದರ್ಶನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಸಚಿವರು, ಶಾಸಕರು, ವಿವಿಧ ಗಣ್ಯರು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಇದನ್ನೂ ಓದಿನಾಟಕ ಬೆಂಗ್ಳೂರು-23: ಹದಿನೈದನೇ ವರ್ಷದ ರಂಗ ಸಂಭ್ರಮ

‘ಸ್ವಾತಂತ್ರ್ಯ ಸಮರದ ಬೆಳ್ಳಿ ಚುಕ್ಕಿ ವೀರ ರಾಣಿ ಕಿತ್ತೂರು ಚೆನ್ನಮ್ಮ ಜೀವನಾಧಾರಿತ ನಾಟಕ ಪ್ರಸ್ತುತಪಡಿಸುವಲ್ಲಿ ಅನೇಕ ಸಂಶೋಧಕರ, ವಿದ್ವಾಂಸರ ಸಲಹೆ, ಮಾರ್ಗದರ್ಶನ ಪಡೆಯಲಾಗಿದೆ. ಅವರ ವಿಮರ್ಶೆಯಿಂದ ಬಂದ ಅಂಶಗಳನ್ನು ನಾಟಕದಲ್ಲಿ ಅಳವಡಿಸಲಾಗಿದೆ. ಬೃಹತ್ ವೇದಿಕೆಯಲ್ಲಿ ನೈಜ ಆನೆ, ಕುದುರೆ, ನೂರಾರು ಜನ ಕಲಾವಿದರನ್ನು ಸಂಯೋಜಿಸಿ, ನಾಟಕವನ್ನು ವಿಭಿನ್ನವಾಗಿ ಪ್ರದರ್ಶನ ಮಾಡಲಾಗುತ್ತದೆ’ ರಂಗದಲ್ಲಿ150 ಕಲಾವಿದರು, 50 ತಂತ್ರಜ್ಞರು, ನಾಲ್ಕು ನಿರ್ದೇಶಕರು ಹೀಗೆ ಒಟ್ಟು 250ಕ್ಕೂ ಹೆಚ್ಚು ಜನ ತೊಡಗಿಕೊಂಡಿದ್ದಾರೆ. ಕಲ್ಲಪ್ಪ ಪೂಜೇರ, ಸೂರ್ಯಕಲಾ ಎಸ್‌. ಹಾಗೂ ವಿಶ್ವರಾಜ ಪಾಟೀಲ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಬ್ರಿಟಿಷರ ವಿರುದ್ಧ ಹೋರಾಡಿದ ವೀರ ರಾಣಿ ಕಿತ್ತೂರು ಚೆನ್ನಮ್ಮರ ವೀರಗಾಥೆಯನ್ನು ಮನೆ ಮನೆಗೂ ತಲುಪಿಸಲು ಧಾರವಾಡದ ರಂಗಾಯಣ ಮುಂದಾಗಿದೆ. ರಂಗಾಯಣ  ದೊಡ್ಡ ಸಾಹಸಕ್ಕೆ ಕೈ ಹಾಕಿದೆ. 150 ಜನರು ಚೆನ್ನಮ್ಮನ ನಾಟಕಕ್ಕೆ ಕಳೆದ ಎರಡು ತಿಂಗಳಿನಿಂದ ಹಗಲು–ರಾತ್ರಿ ತಾಲೀಮು ನಡೆಸಿದ್ದಾರೆ. ಈ ಮೆಗಾ ನಾಟಕ ವೀರ ರಾಣಿ ಕಿತ್ತೂರು ಚೆನ್ನಮ್ಮ ಅವರ ತ್ಯಾಗ, ಬಲಿದಾನಗಳನ್ನು ಸ್ಮರಿಸಿ, ಗೌರವಿಸುವ ದ್ಯೋತಕವಾಗಿದೆ’ ಎಂದು ಅವರು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *