ಸರ್ಕಾರಿ ಬಾಲ ಮಂದಿರಗಳಲ್ಲಿ ನಾಪತ್ತೆಯಾಗಿರುವ 119 ಮಕ್ಕಳು ಎಲ್ಲಿ ?

ಬೆಂಗಳೂರು: ರಾಜ್ಯದ ಬಾಲಮಂದಿರಗಳಲ್ಲಿ 5 ವರ್ಷಗಳಲ್ಲಿ ನಾಪತ್ತೆಯಾಗಿರುವ 484 ಮಕ್ಕಳ ಪೈಕಿ 119 ಮಕ್ಕಳು ಇನ್ನೂ ಪತ್ತೆಯಾಗಿಲ್ಲ! ಎಂಬ ಮಾಹಿತಿ ಹೊರ ಬಿದ್ದಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯದ ವಿವಿಧ ಬಾಲ ಮಂದಿರಗಳಲ್ಲಿ 2017ರಿಂದ 2022ರ ವರೆಗೆ ಒಟ್ಟು 484 ಮಕ್ಕಳು ಕಾಣೆಯಾಗಿದ್ದರು. ಈ ಪೈಕಿ 365 ಮಕ್ಕಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ ಉಳಿದವರ ಪತ್ತೆ ಇನ್ನೂ ಆಗಿಲ್ಲ. ನಾಪತ್ತೆಯಾಗಿರುವ ಮಕ್ಕಳ ಪೈಕಿ ಬೆಂಗಳೂರು ನಗರ, ಮೈಸೂರು, ಧಾರವಾಡ, ಬಳ್ಳಾರಿ ಬಾಲ ಮಂದಿರದವರೇ ಹೆಚ್ಚು. ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ಬಹುತೇಕ ಪ್ರಕರಣಗಳಲ್ಲಿ ಮಕ್ಕಳನ್ನು ಪತ್ತೆ ಹಚ್ಚುವ ಕೆಲಸ ನಡೆದಿಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ.

ಆರ್​.ಟಿ.ಐ ಹಾಗೂ ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ರಾಜ್ಯದಲ್ಲಿನ ಬಾಲಮಂದಿರಗಳಿಂದ ನಾಪತ್ತೆಯಾಗಿರುವ ಮಕ್ಕಳನ್ನು ಪತ್ತೆ ಮಾಡಲು ಕೋರಿ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕರ್ನಾಟಕದ ರಾಜ್ಯಪಾಲರಿಗೆ ಹಾಗೂ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಮತ್ತು ಪೊಲೀಸ್​ ಮಹಾನಿರ್ದೇಶಕರು, ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ಇದರಿಂದಾಗಿ ಈ ಅಂಕಿ ಅಂಶಗಳು ಈಗ ಲಭ್ಯವಾಗಿವೆ.

ಬಾಲ ಮಂದಿರದ ಕೆಲಸ ಏನು:ರಾಜ್ಯದಲ್ಲಿ ದೌರ್ಜನ್ಯಕ್ಕೊಳಗಾಗಿರುವ ಮಕ್ಕಳು, ತಿಳಿದೋ, ತಿಳಿಯದೆಯೋ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಮಕ್ಕಳು, ತಂದೆ-ತಾಯಿ ಹಾಗೂ ಪೋಷಕರಿಂದ ದೂರವಾದ ಮಕ್ಕಳು, ತಂದೆ-ತಾಯಿಗಳಿಗೆ ಹಾಗೂ ಪೋಷಕರಿಗೆ ಬೇಡವಾದ ಮಕ್ಕಳು ಸರ್ಕಾರಿ ಬಾಲಮಂದಿರದಲ್ಲಿ ಇರುತ್ತಾರೆ. 16-18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳು ಇಲ್ಲಿರುತ್ತಾರೆ. ಈ ಬಾಲಮಂದಿರದಲ್ಲಿ ಮಕ್ಕಳಿಗೆ ಪುನರ್ವಸತಿ ಜೊತೆಗೆ ಮಕ್ಕಳಿಗೆ ಬೇಕಾದ ಶಿಕ್ಷಣ, ಸೌಲಭ್ಯಗಳನ್ನು ಕೊಟ್ಟು ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ಕೆಲಸವನ್ನು ಬಾಲಮಂದಿರ ಮಾಡುತ್ತವೆ.

ಮಕ್ಕಳ ಪತ್ತೆಗೆ ನಿರ್ಲಕ್ಷ್ಯ : ಬಾಲಮಂದಿರದಿಂದ ತಪ್ಪಿಸಿ ಕೊಂಡವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಆದ ಬಳಿಕ ಪೊಲೀಸರು ಪತ್ತೆ ಬಗ್ಗೆ ತಲೆಕೆಡಿಸಿ ಕೊಳ್ಳುವುದಿಲ್ಲ. ಬಾಲ ಮಂದಿರದ ಅಧಿಕಾರಿಗಳೂ ದೂರು ಕೊಟ್ಟು ತಣ್ಣಗಾಗುತ್ತಾರೆ. ನಾಪತ್ತೆಯಾಗಿ ಸಿಕ್ಕಿ ಬಿದ್ದ ಶೇ.85ರಷ್ಟು ಮಕ್ಕಳು ಹೊರ ರಾಜ್ಯಗಳಲ್ಲಿ ಬಾಲ ಕಾರ್ಮಿಕರಾಗಿದ್ದರು. ಸದ್ಯ ನಾಪತ್ತೆಯಾದ 119 ಮಕ್ಕಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಾರದು ಎಂದು

Donate Janashakthi Media

Leave a Reply

Your email address will not be published. Required fields are marked *