ಖಾಸಗಿ ಶಾಲೆ ಬಿಟ್ಟು ಸರಾಕರಿ ಶಾಲೆ ಸೇರಿದ ವಿದ್ಯಾರ್ಥಿಗಳು

ಒಂದೂವರೆ ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆ ತೊರೆದು ಸರಕಾರಿ ಶಾಲೆಗೆ ಸೇರ್ಪಡೆ

ಬೆಂಗಳೂರು: ರಾಜ್ಯದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಮಕ್ಕಳು ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗಳಿಗೆ ಸೇರಿದ್ದಾರೆ. ಇನ್ನೂ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಅಡ್ಮೀಷನ್ ಆಗಬೇಕಾಗಿದೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಅಡ್ಮೀಷನ್ ಕ್ಲೋಸ್ ಮಾಡಿಲ್ಲ. ಎಷ್ಟು ವಿದ್ಯಾರ್ಥಿಗಳು ಬಂದರೂ ಖಂಡಿತ ಸೇರಿಸಿಕೊಳ್ಳುತ್ತೇವೆ. ಯಾವ ವಿದ್ಯಾರ್ಥಿಗೂ ಪ್ರವೇಶ ನಿರಾಕರಿಸುವುದಿಲ್ಲ ಎಂದಿದ್ದಾರೆ.

ಇನ್ನು ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಯಾವುದೇ ಆದೇಶ ನೀಡಿಲ್ಲ. ಅದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಮತ್ತು ಪೋಷಕರಿಗೆ ಬಿಟ್ಟ ವಿಷಯ. ಈಗ ಇಬ್ಬರೂ ಸರ್ಕಾರದ ಮಧ್ಯಸ್ಥಿಕೆಗೆ ಮನವಿ ಮಾಡಿದ್ದಾರೆ. ಅವರು ಒಮ್ಮತಕ್ಕೆ ಬರದೇ ಇದ್ದರೆ ಸರ್ಕಾರ ಆಗ ಮಧ್ಯ ಪ್ರವೇಶ‌ ಮಾಡುತ್ತದೆ ಎಂದಿದ್ದಾರೆ.

ಸರಕಾರಿ ಶಾಲೆಗಳನ್ನು ಬಲಪಡಿಸಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಮತ್ತು ಪೋಷಕರ ಸಂಘಟನೆಗಳು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿವೆ. ಸರಕಾರ ಮತ್ತು ಶಿಕ್ಷಣ ಇಲಾಖೆ ಆ ರೀತಿಯ ವಾತವರಣವನ್ನು ಇನ್ನು ಸೃಷ್ಟಿಸಿಲ್ಲ. ಈಗ ಸ್ವತಃ ವಿದ್ಯಾರ್ಥಿಗಳೆ ಪ್ರವೇಶಬಯಸಿ ಬರುತ್ತಿದ್ದಾರೆ ಅವರನ್ನು ಉಳಿಸಿಕೊಳ್ಳಬೇಕು, ಸರಕಾರಿ ಶಾಲೆಗಳಿಗೆ ಮೂಲಸೌಲಭ್ಯ ನೀಡುವ ಮೂಲಕ ಅವುಗಳನ್ನು ಬಲಗೊಳಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷ್ (SFI) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *