ರಾಕಿಂಕ್ ಸ್ಟಾರ್ ಯಶ್, ಸಂಜಯ್ ದತ್, ರವೀನಾ ಟಂಡನ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಭಾರತದ ಹಲವು ಭಾಷೆಗಳಲ್ಲಿ ಸದ್ದು ಮಾಡುತ್ತಿದೆ ಎನ್ನುವುದಕ್ಕೆ ಇನ್ನೊಂದು ಮಾತಿಲ್ಲ. ಈ ಚಿತ್ರ ʼಕೆಜಿಎಫ್-2ʼ ಚಿತ್ರ ತೆರೆಕಂಡು 20 ದಿನಗಳಲ್ಲಿ ಸಾವಿರ ಕೋಟಿ ಕ್ಲಬ್ ಸೇರಿದೆ. ಕನ್ನಡ ಸಿನಿಮಾವೊಂದು ಮೊದಲ ಬಾರಿಗೆ ಸಾವಿರ ಕೋಟಿ ಕ್ಲಬ್ ಸೇರಿರುವುದು ವಿಶೇಷ.
20 ದಿನಗಳಲ್ಲಿ ₹1,025 ಕೋಟಿ 61 ಲಕ್ಷ ಕಲೆ ಹಾಕಿದೆ ಎಂದು ಸಿನಿಮಾ ಕಲೆಕ್ಷನ್ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ.
#KGFChapter2 WW Box Office
Creates HISTORY by crossing ₹1000 cr milestone.
Week 1 – ₹ 720.31 cr
Week 2 – ₹ 223.51 cr
Week 3
Day 1 – ₹ 15.28 cr
Day 2 – ₹ 12.42 cr
Day 3 – ₹ 24.30 cr
Day 4 – ₹ 29.79 cr
Total – ₹ 1025.61 cr— Manobala Vijayabalan (@ManobalaV) May 2, 2022
ತಮಿಳುನಲ್ಲಿ 153 ಕೋಟಿಗೂ ಮೀರಿ ಮುನ್ನುಗುತ್ತಿದೆ. ಬಾಲಿವುಡ್ ನೆಲದಲ್ಲಿ ಅಮೀರ್ ಖಾನ್ ನಟನೆಯ ದಂಗಲ್ ಚಿತ್ರ ಸದ್ದು ಮಾಡಿತ್ತು. ಇದೀಗ ಕೆಜಿಎಫ್-2 ಚಿತ್ರವು ದಂಗಲ್ ಚಿತ್ರವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಆರ್ ಆರ್ ಆರ್, ಬಾಹುಬಲಿ, ದಿ ಕಂಕ್ಲೂಷನ್, ದಂಗಲ್ ಚಿತ್ರಗಳ ನಂತರ ಮೈಲಿಗಲನ್ನು ದಾಟಿರುವ ಭಾರತದ 4ನೇ ಚಿತ್ರ ಕೆಜಿಎಫ್-2 ಚಿತ್ರದ್ದಾಗಿದೆ.
ಇದನ್ನು ಓದಿ: ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್ 2
ಕಡಿಮೆ ಅವಧಿಯಲ್ಲಿ ಸಾವಿರ ಕೋಟಿಗಳಿಸಿ ಕ್ಲಬ್ ಸೇರುತ್ತಿರುವ ಈ ಚಿತ್ರ. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳು ಬಿಡುಗಡೆಯಾದರು ಸಹ ಚಿತ್ರಪ್ರೇಮಿಗಳು ಈದ್ ಹಬ್ಬದ ರಜೆಯ ಪ್ರಯುಕ್ತ ಕೆಜಿಎಫ್ ಚಿತ್ರ ನೋಡಲು ಮುನ್ನುಗ್ಗುತ್ತಿದ್ದಾರೆ.
ಹಿಂದಿ, ತಮಿಳಿನಲ್ಲಿ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ತಮಿಳುನಾಡಿನಲ್ಲಿ ₹100 ಕೋಟಿ ಗಳಿಕೆ ಕಂಡಿದೆ. ಹಿಂದಿ ನೆಲದಲ್ಲೂ ಈವರೆಗೆ ₹369 ಕೋಟಿ ಕಲೆಕ್ಷನ್ ಮಾಡಿದೆ.
ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ ಹಿಂದಿ ಭಾಷೆಯ ಚಿತ್ರ ಭಾನುವಾರದವರೆಗೆ (ಮೇ 1) ಚಿತ್ರವು 369.58 ಕೋಟಿ ರೂ. ಕೆಜಿಎಫ್-2 ಶುಕ್ರವಾರ 4.25 ಕೋಟಿ, ಶನಿವಾರ 7.25 ಕೋಟಿ, ಭಾನುವಾರ 9.27 ಕೋಟಿ ಕಲೆಕ್ಷನ್ ಮಾಡಿದೆ. ಎಂದು ಟ್ವೀಟ್ ಮಾಡಿದ್ದಾರೆ.
ಕೆಜಿಎಫ್ 2 ಚಿತ್ರಪ್ರೇಮಿಗಳ ಮೊದಲ ಆಯ್ಕೆಯಾಗಿ ಉಳಿದಿದೆ.