- ಕೇರಳದ 5 ಜಿಲ್ಲೆಗಳಿಗೆ ರೆಡ್ ಅಲರ್ಟ್
- ತಿರವನಂತಪುರಂ ಮತ್ತು ಪಾಲಕ್ಕಾಡ್ಗೆ ಹಳದಿ ಅಲರ್ಟ್
- ಮುಂದಿನ 24 ಗಂಟೆಯಲ್ಲಿ ಬಾರಿ ಮಳೆಯಾಗುವ ಸಾಧ್ಯತೆ
ತಿರವನಂತಪುರಂ:ಹವಾಮಾನ ಇಲಾಖೆ ತಿಳಿಸಿರುವ ಪ್ರಕಾರ ಕೇರಳದ ಐದು ಜಿಲ್ಲೆಗಳಲ್ಲಿ ಮುಂದಿನ 2 ದಿನ ಬಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ಕೇರಳದ ಐದು ಜಿಲ್ಲೆಗಳಾದ ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಕೋಝಿಕ್ಕೋಡ್ ಮತ್ತುಕಣ್ಣೂರುಗಳಲ್ಲಿ ಮುಂದಿನ ಎರಡು ದಿನ ಬಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಹೇಳಿರುವ ಪ್ರಕಾರ ( 204.5 ಮಿಮಿ) ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.
ಕೇರಳದ ಹಲವು ಕಡೆ ಗುಡುಗು ಮತ್ತು ಮಿಂಚಿನ ಸಹಿತ ಮಳೆ ಸುರಿಯಲಿದ್ದು, ಗಾಳಿಯ ವೇಗವು 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆ ಹೆಚ್ಚಿದೆ ಎಂದು ಇಲಾಖೆ ತಿಳಿಸಿದೆ. ಇದೆ ಹವಾಮಾನವು ಲಕ್ಷದೀಪದಲ್ಲಿ ಕೂಡ ಮುಂದುವರೆಯಲಿದ್ದು,ಇನ್ನೆರಡು ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಅಪಾಯ ಹೇಚ್ಚಿರುವ ಕಡೆ ಕಟ್ಟುನಿಟ್ಟಿನ ಎಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ರೆಡ್ ಅಲರ್ಟ್ ಸೂಚಿಸಿರುವ ಪ್ರದೇಶಗಳಲ್ಲಿ ಕಂಟ್ರೋಲ್ ರೊಂ ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ. ಇನ್ನು ಮಳೆಯ ನೀರಿನಿಂದ ಸಮುದ್ರದ ನೀರಿನ ಮಟ್ಟವು ಹೆಚ್ಚಾಗುತ್ತದೆ. ಹಾಗಾಗಿ ಕಾರಾವಳಿ ತೀರದ ಪ್ರದೇಶದ ಜನರು ತುಂಬ ಜಾಗೃತರಾಗಿರಬೇಕು, ಮತ್ತು ಸಮುದ್ರ ತೀರದ ದುರ್ಬಲಹೊಂದಿದ ಮನೆಯವರು ಬೇರೆ ಸ್ಥಳಕ್ಕೆ ಹೋಗುವುದು ಉತ್ತಮ ಹಾಗಾಗಿ ತಮ್ಮೊಂದಿಗೆ ತುರ್ತುಕಿಟ್ ಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವಂತೆ ತಿಳಿಸಲಾಗಿದೆ. ಹಾಗೂ ತಿರವನಂತಪುರಂ ಮತ್ತು ಪಾಲಕ್ಕಾಡ್ಗೆ ಹಳದಿ ಅಲರ್ಟ್ ಸೂಚಿಸಲಾಗಿದ್ದು, ಪ್ರವಾಹವಾಗುವ ಸ್ಥಿತಿ ಇರುವುದರಿಂದ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ.