ಕೊಟ್ಟಾಯಂ: ಬಾಬರಿ ಮಸೀದಿ ಒಡೆದ ಸ್ಥಳದಲ್ಲಿ ರಾಮಮಂದಿರ ಕಟ್ಟಿದ್ದನ್ನು ವಿರೋಧಿಸಿ ಕೇರಳದ ಕೊಟ್ಟಾಯಂ ಕಾಲೇಜು ಹೊರಗೆ ವಿದ್ಯಾರ್ಥಿಗಳು ಪ್ರದರ್ಶಿಸಲು ಉದ್ದೇಶಿದ್ದ ಆನಂದ್ ಪಟವರ್ಧನ್ ಅವರ 1992ರ ಸಾಕ್ಷ್ಯಚಿತ್ರ ರಾಮ್ ಕೆ ನಾಮ್ (ದೇವರ ಹೆಸರಿನಲ್ಲಿ) ಪ್ರದರ್ಶನವನ್ನು ಆರೆಸ್ಸೆಸ್ ಕಾರ್ಯಕರ್ತರು ತಡೆದಿದ್ದು, ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಅದಾಗ್ಯೂ, ವಿರೋಧದ ನಡುವೆಯು ಒಂದು ಗಂಟೆ ತಡವಾಗಿ ಕಾಲೇಜು ಆವರಣದಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗಿದೆ.
ಈ ನಡುವೆ ಡಿವೈಎಫ್‌ಐ ಸಂಘಟನೆ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದು, “ಸಾಕ್ಷ್ಯಚಿತ್ರ ರಾಜ್ಯದೆಲ್ಲಡೆ ಪ್ರದರ್ಶನ ಮಾಡುತ್ತೇವೆ, ಡಿವೈಎಫ್‌ಐ ಬಾವುಟ ಅದಕ್ಕೆ ಕಾವಲು ನಿಲ್ಲುತ್ತದೆ. ಪ್ರದರ್ಶದನ ಸ್ಥಳ ಮತ್ತು ಸಮಯವನ್ನು ಹೇಳಿದ್ದೇವೆ, ಅದನ್ನು ತಡೆಯಲು ಧೈರ್ಯವಿರುವ ಆರೆಸ್ಸೆಸ್ ಕಾರ್ಯಕರ್ತರಿಗೆ ಸ್ವಾಗತ” ಎಂದು ಸವಾಲೆಸೆದಿದೆ.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ವೇಳೆ ಸಂವಿಧಾನದ ಪೀಠಿಕೆ ಹಂಚಿಕೊಂಡ ಮಲಯಾಳಂ ಚಿತ್ರರಂಗ!
ಕೇರಳದ ಕೇರಳದ ಕೊಟ್ಟಾಯಂ ಜಿಲ್ಲೆಯ ಕಾಲೇಜು ಕ್ಯಾಂಪಸ್‌ನ ಹೊರಗೆ ಕೆ.ಆರ್. ನಾರಾಯಣನ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಿಷುಯಲ್ ಸೈನ್ಸ್ ಅಂಡ್ ಆರ್ಟ್ಸ್ (ಕೆಆರ್‌ಎನ್‌ಎನ್‌ಐವಿಎಸ್‌ಎ) ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶನವನ್ನು ನಡೆಸಲು ತೀರ್ಮಾನಿಸಿದ್ದರು. ಆದರೆ ಈ ವೇಳೆ ಆಗಮಿಸಿದ್ದ ಆರೆಸ್ಸೆಸ್ ಗೂಂಡಾಗಳು, ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲೆ ವಿದ್ಯಾರ್ಥಿಗಳನ್ನು ಅವಾಚ್ಯವಾಗಿ ನಿಂದಿಸುತ್ತಿರುವುದು ಮತ್ತು ಜೀವ ಬೆದರಿಕೆ ಹಾಕಿದ್ದಾರೆ.
ಅದಾಗ್ಯೂ, ಈ ಪ್ರದರ್ಶನಕ್ಕೆ ಸೂಕ್ತ ಅನುಮತಿ ಪಡೆಯಲಾಗಿದೆ ಎಂದು ವಿದ್ಯಾರ್ಥಿ ಸಂಘಟನೆ ತಿಳಿಸಿದೆ. ಘಟನೆಯ ವಿಡಿಯೊವನ್ನು ಕೆಆರ್ ನಾರಾಯಣನ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಿಷುಯಲ್ ಸೈನ್ಸ್ ಅಂಡ್ ಆರ್ಟ್ಸ್ ವಿದ್ಯಾರ್ಥಿ ಸಂಘಟನೆಯ ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
View this post on Instagram
ಇದನ್ನೂ ಓದಿ: ಅಸ್ಸಾಂ | ರಾಹುಲ್ ಗಾಂಧಿಗೆ ದೇವಸ್ಥಾನ ಪ್ರವೇಶ ನಿರಾಕರಣೆ; ಕಾಂಗ್ರೆಸ್ ಪ್ರತಿಭಟನೆ
ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಶ್ರೀದೇವನ್ ಪೆರುಮಾಳ್ ಮಾತನಾಡಿ, ಫಿಲ್ಮ್ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳು ಶಾಂತವಾಗಿದ್ದರು ಮತ್ತು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳ್ಳುವ ಮೊದಲು ಏನೆಲ್ಲಾ ನಡೆದಿತ್ತು ಎಂಬುವುದು ಎಲ್ಲರಿಗೂ ನೆನಪಿಸಬೇಕೆಂದು ಕೇಳಿಕೊಂಡಿದ್ದರು ಎಂದು ಹೇಳಿದ್ದಾರೆ.
“ಕ್ಯಾಂಪಸ್‌ನ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಮತ್ತು ಕೆಲವು ಅಧ್ಯಾಪಕರು ಈ ಪ್ರದರ್ಶನದಲ್ಲಿ ಹಾಜರಿದ್ದರು. ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವಾಗ ಯಾವುದೇ ಸಮಸ್ಯೆ ಕಂಡುಬಂದಲ್ಲಿ ತಿಳಿಸಲು ಪೊಲೀಸರು ನಮ್ಮನ್ನು ಕೇಳಿದ್ದಾರೆ” ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿವೈಎಫ್‌ಐ ನಾಯಕ ಜಾಕ್ ಸಿ ಥಾಮಸ್, “ರಾಮ್ ಕೆ ನಾಮ್ ಸಾಕ್ಷ್ಯಚಿತ್ರ ಎಲ್ಲೆಡೆ ತೆರೆ ಕಾಣಲಿದೆ. ಕೆಆರ್ ನಾರಾಯಣನ್ ಫಿಲಂ ಇನ್ಸ್ ಟಿಟ್ಯೂಟ್ ಮುಂದೆಯೂ ಅದನ್ನು ಪ್ರದರ್ಶನ ಮಾಡಲಿದ್ದೇವೆ. ಡಿವೈಎಫ್‌ಐ ಧ್ವಜಗಳು ಅಲ್ಲಿ ಕಾವಲು ಕಾಯಲಿವೆ. ಪ್ರದರ್ಶದನ ಸ್ಥಳ ಮತ್ತು ಸಮಯವನ್ನು ಹೇಳಿದ್ದೇವೆ, ಅದನ್ನು ತಡೆಯಲು ಧೈರ್ಯವಿರುವ ಆರೆಸ್ಸೆಸ್ ಕಾರ್ಯಕರ್ತರಿಗೆ ಸ್ವಾಗತ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಆಂಧ್ರ ಪ್ರದೇಶ | ಅಂಗನವಾಡಿ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ; ಹೋರಾಟ ಹತ್ತಿಕ್ಕಿದ ಪೊಲೀಸರು
ಸಂಸ್ಥೆಯಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಸಿದರೆ ವಿದ್ಯಾರ್ಥಿಗಳ ಕೈ-ಕಾಲುಗಳನ್ನು ಕತ್ತರಿಸುವುದಾಗಿ ಆರೆಸ್ಸೆಸ್ ಕಾರ್ಯಕರ್ತರು ಬೆದರಿಸಿದ್ದಾರೆ. ಈ ವಿಡಿಯೊವನ್ನು ಕೂಡಾ ವಿದ್ಯಾರ್ಥಿ ಸಂಘಟನೆ ತಮ್ಮ ಇನ್ಸ್‌ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಸ್ಕ್ರೀನಿಂಗ್ ಸಂಜೆ 7 ಗಂಟೆಗೆ ನಡೆಯಬೇಕಿತ್ತು. ಸಂಜೆ 6:45 ರ ಹೊತ್ತಿಗೆ, ವಿದ್ಯಾರ್ಥಿಗಳು ಕಾರ್ಯಕ್ರಮಕ್ಕಾಗಿ ವ್ಯವಸ್ಥೆ ಮಾಡಲು ಪ್ರಾರಂಭಿಸಿದರು. ಅದಾಗಿ 10 ನಿಮಿಷಗಳಲ್ಲಿ ಪಳ್ಳಿಕ್ಕಾಥೋಡ್ ಪೊಲೀಸರು ಸ್ಥಳವನ್ನು ತಲುಪಿದ್ದರು. ಆದರೆ, ಕಾಲೇಜು ಆವರಣದಲ್ಲೇ ಸ್ಕ್ರೀನಿಂಗ್ ನಡೆಸುವಂತೆ ಹೇಳಿ ವಿದ್ಯಾರ್ಥಿಗಳ ಮೇಲೆ ನಡೆಸಲಾಗುವ ಬೆದರಿಕೆ ಮತ್ತು ನಿಂದನೆಗಳನ್ನು ನಿರ್ಲಕ್ಷಿಸಿದ್ದಾರೆ” ಎಂದು ವಿದ್ಯಾರ್ಥಿ ಸಂಘಟನೆ ದೂರಿಕೊಂಡಿದೆ.
“ಅದಾಗ್ಯೂ, ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾಲೇಜಿನ ಕ್ಯಾಂಟೀನ್ ಮುಂದೆ ಸಾಕ್ಷ್ಯಚಿತ್ರ ಪ್ರದರ್ಶಿಸಿದೆವು. ಒಟ್ಟು ಜನಸಂಖ್ಯೆಯ ಸುಮಾರು 15% ರಷ್ಟಿರುವ ಭಾರತದ ಮುಸ್ಲಿಂ ಜನಸಂಖ್ಯೆಯ ಅಸ್ತಿತ್ವಕ್ಕೆ ಧಕ್ಕೆ ತರುವ RSS ಮತ್ತು ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಬಾಬರಿ ಮಸೀದಿ ಧ್ವಂಸದ ನಂತರ ರಾಮ ಮಂದಿರವನ್ನು ನಿರ್ಮಿಸಲಾಗಿದೆ ಎಂಬ ಅಂಶವನ್ನು ನಾವು ಹೇಳುವುದನ್ನು ಮುಂದುವರಿಸುತ್ತೇವೆ. ಮೌನವಾಗಿರಲು ಬಯಸುವವರು ಮೌನವಾಗಿರಬಹುದು” ಎಂದು #not_an_inch_back ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ವಿದ್ಯಾರ್ಥಿ ಸಂಘಟನೆಯ ಇನ್ಸ್‌ಟಾಗ್ರಾಂ ಪೋಸ್ಟ್ ಹೇಳಿದೆ.
View this post on Instagram
ಇದನ್ನೂ ಓದಿ: ಆಂಧ್ರಪ್ರದೇಶ | 42 ದಿನಗಳ ಹೋರಾಟ ಗೆದ್ದ ಅಂಗನವಾಡಿ ಅಮ್ಮಂದಿರು; ಕೊನೆಗೂ ಮಂಡಿಯೂರಿದ ಜಗನ್ ಸರ್ಕಾರ
ರಾಮ್ ಕೆ ನಾಮ್ 1992 ರಲ್ಲಿ ಹೆಸರಾಂತ ಚಲನಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್ ನಿರ್ದೇಶಿಸಿದ ಸಾಕ್ಷ್ಯಚಿತ್ರವಾಗಿದೆ. ಇದು ಬಾಬರಿ ಮಸೀದಿಯಿದ್ದ ಸ್ಥಳದಲ್ಲಿ ರಾಮ ಮಂದಿರವನ್ನು ಸ್ಥಾಪಿಸಲು ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ನಡೆಸಿದ ಸಂಘಟಿತ ಚಳುವಳಿಯನ್ನು ದಾಖಲಿಸಿದೆ ಮತ್ತು ಆ ಸಮಯದಲ್ಲಿ ಸಂಭವಿಸಿದ ಹಿಂಸಾಚಾರದ ನಂತರದ ಪರಿಣಾಮಗಳನ್ನು ಪ್ರಶ್ನಿಸುತ್ತದೆ.
ಈ ಮಧ್ಯೆ, ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಹೈದರಾಬಾದ್ ಘಟಕವು ಕ್ಯಾಂಪಸ್‌ನಲ್ಲಿ ರಾಮ್ ಕೀ ನಾಮ್ ಪ್ರದರ್ಶನವನ್ನು ನಡೆಸಿತು. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, “ಎಚ್‌ಸಿಯು ವಿದ್ಯಾರ್ಥಿಗಳು ಎಸ್‌ಎಫ್‌ಐ ಬ್ಯಾನರ್ ಅಡಿಯಲ್ಲಿ ಈ ರಾಷ್ಟ್ರದ ಜಾತ್ಯತೀತ ಫ್ಯಾಬ್ರಿಕ್ ಅನ್ನು ಎತ್ತಿ ಹಿಡಿಯಲು ಒಗ್ಗೂಡಿದರು. 22 ಜನವರಿ, 2024 ರಂದು ರಾಮ್ ಕೆ ನಾಮ್ (ದೇವರ ಹೆಸರಿನಲ್ಲಿ) ಚಲನಚಿತ್ರ ಪ್ರದರ್ಶನದ ತುಣುಕುಗಳು” ಎಂದು ತನ್ನ ಇನ್ಸ್‌ಟಾಗ್ರಾಂನಲ್ಲಿ ಹಂಚಿಕೊಂಡಿದೆ.
View this post on Instagram
ವಿಡಿಯೊ ನೋಡಿ: ಪ್ರಧಾನಿ ಮೋದಿಯವರ ‘ರಾಮಜಪ’ ರಾಜಕಾರಣ ಭಾರತವನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ? Janashakthi Media