ಕೇರಳ ಪಂಚಾಯತ್ ಚುನಾವಣೆಗಳಲ್ಲಿ ಎಲ್.ಡಿ.ಎಫ್.ಗೆ ದೊಡ್ಡ ವಿಜಯ

ನಕಾರಾತ್ಮಕ ಪ್ರಚಾರಕ್ಕೆ ಜನತೆಯ ತಕ್ಕ ಉತ್ತರ : ಸಿಪಿಐ(ಎಂ) ಪೊಲಿಟ್ ಬ್ಯುರೊ
ಕೇರಳದ ಮೂರು ಸ್ತರಗಳ ಪಂಚಾಯತುಗಳು ಮತ್ತು ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಗಳಲ್ಲಿ ಎಡ ಪ್ರಜಾಪ್ರಭುತ್ವ ರಂಗ(ಎಲ್.ಡಿ.ಎಫ್.) ವ್ಯಾಪಕ ಬಹುಮತ ಪಡೆದಿದೆ.

6 ಮಹಾನಗರ ಪಾಲಿಕೆಗಳಲ್ಲಿ 5 ನ್ನು , 14 ಜಿಲ್ಲಾ ಪಂಚಾಯತುಗಳಲ್ಲಿ ಇದುವರೆಗಿನ ಮತಗಣನೆಯ ಪ್ರಕಾರ 11, 86 ನಗರಸಭೆಗಳಲ್ಲಿ 35, 152 ಬ್ಲಾಕ್ ಪಂಚಾಯತುಗಳಲ್ಲಿ 111 ಹಾಗೂ 941 ಗ್ರಾಮ ಪಂಚಾಯತುಗಳಲ್ಲಿ 514ನ್ನು ಎಲ್‌ಡಿಎಫ್ ಪಡೆದಿದೆ.
ಕೇರಳದ ಜನತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎಡ ಪ್ರಜಾಪ್ರಭುತ್ವ ರಂಗ(ಎಲ್.ಡಿ.ಎಫ್.)ಕ್ಕೆ ಒಂದು ದೊಡ್ಡ ವಿಜಯವನ್ನು ಕೊಟ್ಟಿದ್ದಾರೆ ಎನ್ನುತ್ತ ಸಿಪಿಐ(ಎಂ) ಪೊಲಿಟ್ ಬ್ಯುರೊ ಅದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಮತ್ತು ಅಭಿವಂದನೆಗಳನ್ನು ಸಲ್ಲಿಸಿದೆ. ಎಲ್ಲಾ ಮೂರು ಸ್ತರಗಳ ಪಂಚಾಯತುಗಳಲ್ಲಿ ಎಲ್.ಡಿ.ಎಫ್. ದೊಡ್ಡ ಬಹುಮತಗಳನ್ನು ಗಳಿಸಿದೆ.

ಕೇರಳದ ಜನತೆ ಎಲ್.ಡಿ.ಎಫ್. ಸರಕಾರದ ಕಾರ್ಯನಿರ್ವಹಣೆಗೆ ತಮ್ಮ ಮಂಜೂರಾತಿಯನ್ನು ದಾಖಲಿಸಿದ್ದಾರೆ. 2018ರ ಗಂಭೀರ ಪ್ರವಾಹ ಮತ್ತು ಕೊವಿಡ್ ಮಹಾಸೋಂಕನ್ನು ನಿಭಾಯಿಸುವಲ್ಲಿ ರಾಜ್ಯ ಸರಕಾರ ಮತ್ತು ಸ್ಥಳೀಯ ಸಂಸ್ಥೆಗಳು ಮಾಡಿರುವ ಕೆಲಸಕ್ಕೆ ಜನಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅದು ಈ ಚುನಾವಣಾ ವಿಜಯವನ್ನು ವಿಶ್ಲೇಷಿಸಿದೆ.

ಕಾಂಗ್ರೆಸ್ ನೇತೃತ್ವದ ಯು.ಡಿ.ಎಫ್. ಮತ್ತು ಬಿಜೆಪಿ ಗಳು ಎಲ್.ಡಿ.ಎಫ್. ಸರಕಾರ ಮತ್ತು ಅದರ ನಾಯಕತ್ವದ ವಿರುದ್ಧ ಆಧಾರಹೀನ ಆಪಾದನೆಗಳನ್ನು ಹಾಕಿ ಮಾಡಿದ್ದ ನಕಾರಾತ್ಮಕ ಪ್ರಚಾರ, ಅದಕ್ಕೆ ಬಲಪಂಥೀಯ ಮಾಧ್ಯಮಗಳ ಬೆಂಬಲ ಮತ್ತು ಬಿಜೆಪಿ ಕೇಂದ್ರ ಸರಕಾರ ಅದನ್ನು ನೀತಿಬಾಹಿರವಾಗಿ ಬಳಸಿಕೊಂಡುದಕ್ಕೆ ಕೇರಳದ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

ಜನಕಲ್ಯಾಣ-ಪರ ಆಳ್ವಿಕೆಯಿಂದ ಗಳಿಸಿದ ಚಾರಿತ್ರಿಕ ವಿಜಯ
-ಕೇರಳ ರಾಜ್ಯ ಕಾರ್ಯದರ್ಶಿ ಮಂಡಳಿ
ಎಲ್‌ಡಿಎಫ್ ನ ಈ ಚಾರಿತ್ರಿಕ ವಿಜಯ ಎಡರಂಗದ ನೀತಿಬದ್ಧ ನಿಲುವುಗಳು ಮತ್ತು ಕಲ್ಯಾಣ ಪರಿಯೋಜನೆಗಳಿಗೆ ದೊರೆತಿರುವ ಸಾರ್ವಜನಿಕ ಮನ್ನಣೆ ಎಂದು ವರ್ಣಿಸುತ್ತ, ಸಿಪಿಐ(ಎಂ) ಕೇರಳ ರಾಜ್ಯ ಕಾರ್ಯದರ್ಶಿಮಂಡಳಿಯು ಕೇಂದ್ರೀಯ ಏಜೆನ್ಸಿಗಳು ಮತ್ತು ಬಲಪಂಥೀಯ ಮಾಧ್ಯಮಗಳ ಸುಳ್ಳು ಪ್ರಚಾರಗಳಿಗೆ ಯೋಗ್ಯ ಚುನಾವಣಾ ಉತ್ತರ ನೀಡಿರುವುದಕ್ಕೆ ಕೇರಳದ ಜನತೆಯನ್ನು ಅಭಿನಂದಿಸುವುದಾಗಿ ಹೇಳಿದೆ.

ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒಂದೆಡೆಯಲ್ಲಿ ಬಿಜೆಪಿಯೊಂದಿಗೆ ಒಂದು ಗುಪ್ತ ಒಪ್ಪಂದ, ಇನ್ನೊಂದೆಡೆಯಲ್ಲಿ ಮುಸ್ಲಿಂ ಮೂಲಭೂತವಾದಿ ವೆಲ್‌ಫೇರ್ ಪಾರ್ಟಿಯೊಂದಿಗೆ ಬಹಿರಂಗ ಮೈತ್ರಿಯೊಂದಿಗೆ ಚುನಾವಣಾ ಕಣಕ್ಕೆ ಇಳಿದಿತ್ತು. ಅದು ಹಿಂದೂರಾಷ್ಟçದ ಪ್ರತಿಪಾದಕರು ಮತ್ತು ಇಸ್ಲಾಮೀ ಪ್ರಭುತ್ವದ ಹೂಜಿಗಳ ನಡುವೆ ಸೇತವೆಯಾಗಿ ಕೇರಳವನ್ನು ಒಡೆಯಲು ಪ್ರಯತ್ನಿಸಿತು. ರಾಜ್ಯದ ಆರು ಮಹಾನಗರಪಾಲಿಕೆಗಳಲ್ಲಿ ಹಲವೆಡೆಗಳಲ್ಲಿ ಕಾಂಗ್ರೆಸ್ ತನ್ನ ಮತಗಳನ್ನು ಬಿಜೆಪಿ ಪರವಾಗಿ ತಿರುಗಿಸಿತು. ಆದರೆ ಇವ್ಯಾವುದೂ ಎಲ್‌ಡಿಎಫ್‌ನ ಚಾರಿತ್ರಿಕ ವಿಜಯವನ್ನು ತಡೆಯಲು ಸಫಲವಾಗಲಿಲ್ಲ. ಜನಗಳು ಎಲ್‌ಡಿಎಫ್‌ನ ಜಾತ್ಯಾತೀತ ನಿಲುವಿನ ಪರವಾಗಿ ನಿಂತಿದ್ದಾರೆ.

ಇನ್ನು ಮಾಧ್ಯಮಗಳು ತಮ್ಮ ದ್ವೇಷಪೂರ್ಣ ಪ್ರಚಾರಕ್ಕಾಗಿ ಈ ಎರಡು ವೈಪರೀತ್ಯಗಳಲ್ಲಿ ತೊಡಗಲೂ ಹಿಂಜರಿಯಲಿಲ್ಲ. ಆದರೆ ಸಾರ್ವಜನಿಕರು ಅವರ ಸುಳ್ಳಿನ ಜಾಲದಲ್ಲಿ ಸಿಲುಕಲಿಲ್ಲ ಎಂದು ಚುನಾವಣಾ ಫಲಿತಾಂಶಗಳು ತೋರಿಸಿವೆ. ಈಗಲಾದರೂ ಅವು ತಮ್ಮನ್ನು ತಿದ್ದಿಕೊಂಡು ಸಾರ್ವಜನಿಕರ ವಿಶ್ವಾಸವನ್ನು ಮತ್ತೆ ಗಳಿಸಲು ಪ್ರಯತ್ನಿಸಲಿ ಎಂದು ಕಾರ್ಯದರ್ಶಿ ಮಂಡಳಿ ಸಲಹೆ ಮಾಡಿದೆ.

ಸಿಬಿಐ, ಇಡಿ ಮುಂತಾದ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ರಾಜ್ಯದಲ್ಲಿ ಎಲ್‌ಡಿಎಫ್ ಸರಕಾರ ಆರಂಭಿಸಿದ ಕಲ್ಯಾಣ ಪರಿಯೋಜನೆಗಳನ್ನು ಹಾಳುಗೆಡವಲು ಪ್ರಯತ್ನಿಸಿತು. ರಮೇಶ್ ಚೆನ್ನಿತಾಲ ನೇತೃತ್ವದಲ್ಲಿ ಕಾಂಗ್ರೆಸ್ ಕೂಡ ಅದರೊಂದಿಗೆ ಕೈಜೋಡಿಸಲು ಮುಂದಾಯಿತು. ಆದ್ದರಿಂದಲೇ ಕೇರಳದ ಮತದಾರರು ಅದಕ್ಕೆ ಕೈಕೊಟ್ಟರು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಅಭಿಪ್ರಾಯ ಪಟ್ಟಿದೆ.

ಈ ಬೃಹತ್ ವಿಜಯದ ನಡುವೆಯೂ ಕೆಲವೆಡೆಗಳಲ್ಲಿ ಎಲ್‌ಡಿಎಫ್ ನಿರೀಕ್ಷಿತ ಗೆಲುವನ್ನು ಏಕೆ ಗಳಿಸಲಿಲ್ಲ ಎಂಬುದರ ಬಗ್ಗೆಯೂ ಪಕ್ಷ ಪರೀಕ್ಷಿಸುತ್ತದೆ ಮತ್ತು ಸರಿಪಡಿಕೆ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದೂ ಅದು ಹೇಳಿದೆ. ಇದು ಜಾತ್ಯತೀತತೆಗೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಸಿಕ್ಕ ವಿಜಯ ಎಂದಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದಕ್ಕಾಗಿ ಕೇರಳದ ಮತದಾರರನ್ನು ವಂದಿಸಿದ್ದಾರೆ.

ಇದುವರೆಗಿನ ಫಲಿತಾಂಶಗಳು/ ಮುನ್ನಡೆಗಳು ಹೀಗಿವೆ:

ಒಟ್ಟು ಎಲ್‌ಡಿಎಫ್ ಯುಡಿಎಫ್ ಬಿಜೆಪಿ ಇತರರು
ಗ್ರಾಮ ಪಂಚಾಯತುಗಳು 940/941 514 375 22 29
ಬ್ಲಾಕ್ ಪಂಚಾಯತುಗಳು 152 111 41
ಜಿಲ್ಲಾ ಪಂಚಾಯತುಗಳು 13/14 11 2
ನಗರಸಭೆಗಳು 79/86 35 39 2 3
ಮಹಾನಗರಪಾಲಿಕೆಗಳು 6 5 1

 

Donate Janashakthi Media

Leave a Reply

Your email address will not be published. Required fields are marked *