ಯುವಕನ ಕಷ್ಟ ಕಂಡು ಮರುಗಿದ ಹೃದಯ : ಕಿಡ್ನಿ ಕಸಿಗೆ ಬಂಗಾರದ ಬಳೆ ಕೊಟ್ಟ ಸಚಿವೆ

  • ರೋಗಿಯೊಬ್ಬರ ಚಿಕಿತ್ಸೆಗೆ ಬಂಗಾರದ ಬಳೆ ಕೊಟ್ಟ ಸಚಿವೆ
  • ಕೇರಳದ ಉನ್ನತ ಶಿಕ್ಷಣ ಸಚಿವೆ ಬಿಂದು
  • ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ನೆರವು

ತ್ರಿಶೂರ್​: ಯುವಕನ ಮೂತ್ರಪಿಂಡ ಕಸಿಗಾಗಿ ಸಚಿವೆ ತಮ್ಮ ಬಂಗಾರದ ಬಳೆಯನ್ನೇ ನೀಡುವ ಮೂಲಕ ನೆರವಾಗಿದ್ದಾರೆ. ಅನಾರೋಗ್ಯದ ಸಮಸ್ಯೆ ಹೇಳಿಕೊಂಡು ಬಂದಿದ್ದ ಯುವಕನಿಗೆ ಸಚಿವೆ ಈ ರೀತಿ ಸಹಾಯಹಸ್ತ ನೀಡಿದ್ದಾರೆ.

ಜೀವಂತ ಉಳಿಯಬೇಕಾದರೆ ಕಿಡ್ನಿ ಮರುಜೋಡಣೆ ಮಾಡಿಸಿಕೊಳ್ಳಲೇಬೇಕಾದ ಸ್ಥಿತಿಯಲ್ಲಿದ್ದ ವ್ಯಕ್ತಿಯ ಕಷ್ಟವನ್ನು ಗಮನಿಸಿದ ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ರವರು ತಮ್ಮ ಒಂದು ಬಂಗಾರದ ಬಳೆಯನ್ನೇ ಬಿಚ್ಚಿಕೊಟ್ಟಿದ್ದಾರೆ. ಮೊದಲ ದೇಣಿಗೆಯಾಗಿ ಸ್ವೀಕರಿಸಬೇಕೆಂದು ಕೇಳಿಕೊಂಡಿದ್ದಾರೆ. ಇದು ಭಾರೀ ಜನಮೆಚ್ಚುಗೆ ಪಡೆದಿದೆ.

ಈ ಘಟನೆ ನಡೆದಿದ್ದು ತ್ರಿಶೂರಿನ ಇರಿಂಜಾಲಕುಡದಲ್ಲಿ ಪ್ರದೇಶದಲ್ಲಿ. ಅಲ್ಲಿನ ವೈದ್ಯಕೀಯ ನೆರವು ಸಮಿತಿ ಕಿಡ್ನಿ ಮರುಜೋಡಣೆಗಾಗಿ ಒಂದು ಸಭೆ ನಡೆಸಿತ್ತು. ಅದರಲ್ಲಿ ಬಿಂದು ಅವರು ಪಾಲ್ಗೊಂಡಿದ್ದರು.

ಈ ವೇಳೆ 27 ವರ್ಷದ ವಿವೇಕ್‌ ಪ್ರಭಾಕರ್‌ ಅವರ ದುಸ್ಥಿತಿಯನ್ನು ಗಮನಿಸಿದ್ದಾರೆ. ಕೂಡಲೇ ಅವರು ತಮ್ಮ ಬಳೆಯನ್ನು ಬಿಚ್ಚಿ ನೀಡಿದ್ದಾರೆ. ಬಹಳಷ್ಟು ರಾಜಕಾರಣಿಗಳು ಆಯ್ತು ನೋಡೋಣ, ನೀನು ಮೊದಲು ಚಿಕಿತ್ಸೆ ಪಡೆದುಕೋ, ನಂತರ ಶಿಫಾರಸ್ಸು ಮಾಡುವೆ ಎಂದು ಹೇಳುವುದನ್ನು ಕೇಳುತ್ತಲೇ ಇರುತ್ತವೆ. ಇದರ ನಡುವೆಯೇ ಸಚಿವೆ ಆರ್. ಬಿಂದು ರವರ ಮಾನವೀಯತೆ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಬರೀ ಕೇರಳಕ್ಕೆ ಮಾತ್ರವಲ್ಲ, ದೇಶದ ಇತರೆ ಭಾಗದ ಜನತೆಗೂ ಮಾದರಿಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *