ಕೋವಿಡ್-ಬಾಧಿತ ಆರ್ಥಿಕ ನಿಧಾನಗತಿಯನ್ನು ಎದುರಿಸಲು 77,350 ಉದ್ಯೋಗ ನಿರ್ಮಾಣದ ಗುರಿ
ತಿರುವನಂತಪುರಂ : ಕೇರಳದ ಎಲ್‌ಡಿಎಫ್ ಸರಕಾರ ಕೋವಿಡ್-19ರ ಎರಡನೇ ಅಲೆ ಉಂಟು ಮಾಡಿರುವ ಆರ್ಥಿಕ ನಿಧಾನಗತಿಯನ್ನು ಸರಿಪಡಿಸಲು 100 ದಿನಗಳ ಕ್ರಿಯಾ ಯೋಜನೆಯೊಂದನ್ನು ಪ್ರಕಟಿಸಿದೆ.
ಈ ಯೋಜನೆ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು, ಗುಣಮಟ್ಟದ ಉದ್ಯೋಗಾವಕಾಶ ನಿರ್ಮಿಸುವುದು ಮತ್ತು ಆರೋಗ್ಯ ಮೂಲರಚನೆಯನ್ನು ಗಟ್ಟಿಗೊಳಿಸುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ ಮತ್ತು ಜೂನ್ 11ರಿಂದ ಸಪ್ಟಂಬರ್ 19ರ ಅವಧಿಯಲ್ಲಿ ಅನುಷ್ಠಾನಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೂನ್ 11ರಂದು ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.
ಇದನ್ನು ಓದಿ: ಜೂನ್ 26ರಂದು ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ: ಎಸ್‌ಕೆಎಂ ಕರೆ
ಕಳೆದ ವರ್ಷ ಕೋವಿಡ್-19ರ ಪರಿಣಾಮಗಳನ್ನು ಎದುರಿಸಲು 100 ದಿನಗಳ ಕಾರ್ಯಕ್ರಮವನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲಾಯಿತು. ಈಗ ಎರಡನೇ ಅಲೆ ಅಪ್ಪಳಿಸಿರುವಾಗ ಆರ್ಥಿಕ ಬೆಳವಣಿಗೆಯನ್ನು ತ್ವರಿತಗೊಳಿಸಲು ನಿರ್ಮಾಣ ಚಟುವಟಿಕೆಗಳು ಮತ್ತು ಉದ್ಯೋಗ ನಿರ್ಮಾಣದ ಅಗತ್ಯವಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ನಿಪುಣತೆ ಅಭಿವೃದ್ಧಿ ಪಡಿಸುವುದರ ಮೇಲೆ ಗಮನ ಕೇಂದ್ರೀಕರಿಸುವುದರೊಂದಿಗೆ ಒಂದು ಜ್ಞಾನ-ಆಧಾರಿತ ಅರ್ಥವ್ಯವಸ್ಥೆಯನ್ನು ಕಟ್ಟಲು ಅನುವು ಮಾಡಿಕೊಡುವುದು ಈ ಯೋಜನೆಯ ಗುರಿ ಎಂದು ಅವರು ಹೇಳಿದರು.
ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆಯ ಸಾಧನೆಗಳನ್ನು ಮುಂದಕ್ಕೊಯ್ಯುವ ಧೋರಣೆಗಳು ಮತ್ತು ಸ್ಕೀಮುಗಳ ಮೇಲೆ ಒತ್ತು ನೀಡಲಾಗುವುದು; ಇವುಗಳಲ್ಲಿ ಬಡತನ ನಿರ್ಮೂಲನೆ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳ ನಿರ್ಮೂಲನೆ, ಪರಿಸರ -ಸ್ನೇಹಿ ಅಭಿವೃದ್ಧಿ ಕಣ್ಣೋಟಕ್ಕೆ ಅತ್ಯಂತ ಹೆಚ್ಚು ಮಹತ್ವ ನೀಡಲಾಗುವುದು. ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದರೊಂದಿಗೆ, ವಿಷಾಕ್ತವಲ್ಲದ ಆಹಾರ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಇದನ್ನು ಓದಿ: ಖಾಸಗಿ ಆಸ್ಪತ್ರೆಗಳು ಖರೀದಿಸಿದ್ದು 1.29 ಕೋಟಿ ಲಸಿಕೆ-ಬಳಸಿದ್ದು 22 ಲಕ್ಷ ಮಾತ್ರ
ಈ 100 ದಿನಗಳ ಯೋಜನೆಯಲ್ಲಿ ಸಾರ್ವಜನಿಕ ಕಾಮಗಾರಿ ಇಲಾಖೆ(ಪಿಡಬ್ಲ್ಯುಡಿ), ಕೇರಳ ಪುನರ್‌ನಿರ್ಮಾಣ ಮುತುವರ್ಜಿ(ಆರ್‌ಕೆಐ) ಮತ್ತು ಕೇರಳ ಕೈಗಾರಿಕಾ ಹೂಡಿಕೆ ನಿಧಿ ಮಂಡಳಿ(ಕೆಐಐಎಫ್‌ಬಿ) ಮೂಲಕ ರೂ.2464.92 ಕೋಟಿ ಮೌಲ್ಯದ ಪ್ರಾಜೆಕ್ಟ್ ಗಳಿರುತ್ತವೆ. ರಾಜ್ಯದಲ್ಲಿ 20 ಲಕ್ಷ ವಿದ್ಯಾವಂತರಿಗೆ ಉದ್ಯೋಗ ಒದಗಿಸುವ ‘ಕೇರಳ-ಅಭಿವೃದ್ಧಿ ಮತ್ತು ನಾವೀನ್ಯ ರಣನೀತಿ ಪರಿಷತ್’(ಕೆ-ಡಿಐಎಸ್‌ಸಿ) ಒಂದು ಮಹತ್ವಾಕಾಂಕ್ಷೆಯ ಪರಿಯೋಜನೆಯನ್ನು ಪೂರ್ಣಗೊಳಿಸುತ್ತದೆ; ಎಲ್ಲ ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳು 1000 ಜನಗಳಲ್ಲಿ ಐವರಿಗೆ ಉದ್ಯೋಗ ನಿರ್ಮಿಸುವ ಕರಡು ಯೋಜನೆಗಳನ್ನು ತಯಾರಿಸುತ್ತವೆ ಎಂದು ಎಲ್‌ಡಿಎಫ್ ಸರಕಾರದ ಪ್ರಕಟಣೆ ತಿಳಿಸಿದೆ.
ವಿವಿಧ ಇಲಾಖೆಗಳಲ್ಲಿ ಈ 100 ದಿನಗಳಲ್ಲಿ ಸುಮಾರು 77,350 ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ನಿರ್ಮಿಸಲಾಗುವುದು. ಕೈಗಾರಿಕಾ ಇಲಾಖೆಯಲ್ಲಿ 10,000, ಸಹಕಾರಿ ಇಲಾಖೆಯಲ್ಲಿ 10,000, ಕುಡುಂಬಶ್ರೀಯಲ್ಲಿ 2000, ಕೇರಳ ಹಣಕಾಸು ನಿಗಮದಲ್ಲಿ 2000, ಮಹಿಳಾ ಅಭಿವೃದ್ಧಿ ನಿಗಮದಲ್ಲಿ 2500, ಹಿಂದುಳಿದವರ ಅಭಿವೃದ್ಧಿ ನಿಗಮದಲ್ಲಿ 2500, ಐಟಿ ವಯದಲ್ಲಿ 1000, ಸ್ಥಳೀಯ ಸ್ವಯಮಾಡಳಿತ ಇಲಾಖೆಯಲ್ಲಿ 7000(ಯುವ ಮಹಿಳಾ ಉದ್ಯಮ ಕಾರ್ಯಕ್ರÀಮದಲ್ಲಿ 5000 ಮತ್ತು ಅತಿ ಸಣ್ಣ ಉದ್ದಿಮೆ ವಲಯದಲ್ಲಿ 2000), ಆರೋಗ್ಯ ಇಲಾಖೆಯಲ್ಲಿ ಪರೋಕ್ಷವಾಗಿ 4142, ಪಶುಸಂಗೋಪವನೆ ಇಲಾಖೆಯಲ್ಲಿ ಪರೋಕ್ಷವಾಗಿ 350 ಮತ್ತು ಸಾರಿಗೆ ಇಲಾಖೆಯಲ್ಲಿ 7500 ಉದ್ಯೋಗಗಳನ್ನು ನಿರ್ಮಿಸುವ ನಿರ್ದಿಷ್ಟ ಗುರಿ ಹಾಕಿಕೊಳ್ಳಲಾಗಿದೆ. ಗ್ರಾಮ ಸರ್ವೆ ಚಟುವಟಿಕೆಗಳ ಭಾಗವಾಗಿ ರೆವಿನ್ಯೂ ಇಲಾಖೆ 26,000 ಸರ್ವೆಯರುಗಳು ಮತ್ತು ಚೈನ್‌ಮನ್ ನೇಮಕಗಳನ್ನು ಮಾಡುತ್ತದೆ.
ವಿವಿಧ ಮೂಲಗಳಿಂದ ರೂ. 5898 ಕೋಟಿ ಸಾಲಗಳು ಈ ಪರಿಯೋಜನೆಗಳಿಗೆ ಮಂಜೂರಾಗಿವೆ, ಇದರ ಜೊತೆಗೆ ರಾಜ್ಯ ಸರಕಾರದ ಪಾಲನ್ನು ಸೇಇರಿಸಿದರೆ ಒಟ್ಟು ರೂ. 8425 ಕೋಟಿ ಈ ‘ಕೇರಳ ಪುನರ್‌ನಿರ್ಮಾಣ ಮುತುವರ್ಜಿ’ಗೆ ಲಭ್ಯವಾಗುತ್ತವೆ.
ಮುಂದಿನ 100 ದಿನಗಳಲ್ಲಿ ರೂ.945.35 ಕೋಟಿ ಮೌಲ್ಯದ 9 ರಸ್ತೆ ಪರಿಯೋಜನೆಗಳು ಆgಂಭವಾಗುತ್ತವೆ; ಪಿಡಬ್ಲುö್ಯಡಿ ರೂ.1519.57 ಕೋಟಿ ಮೌಲ್ಯದ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತದೆ; ರೂ.200.10 ಕೋಟಿ ಮೌಲ್ಯದ ರಸ್ತೆ–ಸೇತುವೆ ಪರಿಯೋಜನೆಗಳ ಉದ್ಘಾಟನೆಯಾಗಲಿದೆ.
ಅಲ್ಲದೆ ರಾಜ್ಯ ಸರಕಾರ ಈ 100 ದಿನಗಳಿಗೆ ಹಾಕಿಕೊಂಡ ಇತರ ಗುರಿಗಳು ಹೀಗಿವೆ:
12,000 ಭೂಮಿ ಹಕ್ಕುಪತ್ರಗಳ ವಿತರಣೆ; ಸರಕಾರೀ ಸೇವೆಗಳನ್ನು ಪಡೆಯಲು ಹಲವು ಐಟಿ ಕ್ರಮಗಳ ಆರಂಭ; ಲೈಫ್ ಮಿಷನ್ ಅಡಿಯಲ್ಲಿ ಇನ್ನೂ 10,000 ಮನೆಗಳ ನಿರ್ಮಾಣ; ವಿದ್ಯಾಶ್ರೀ ಯೋಜನೆಯ ಅಡಿಯಲ್ಲಿ 50,000 ಲ್ಯಾಪ್‌ಟಾಪ್‌ಗಳ ವಿತರಣೆ; 200 ಗ್ರಾಮ ಪಂಚಾಯತುಗಳಲ್ಲಿ ನೀಲವ ಪರಿಯೋಜನೆ ಆರಂಭ.