– ಎಚ್.ಆರ್. ನವೀನ್ ಕುಮಾರ್, ಹಾಸನ
ಕೇರಳ ಯಾವಾಗಲೂ ಸುದ್ದಯಲ್ಲಿರುತ್ತದೆ.., ಒಂದೆಡೆ ರಾಜಕೀಯದ ಕಾರಣಕ್ಕಾಗಿ, ಮತ್ತೊಂದೆಡೆ ಅಲ್ಲಿಯ ಶಿಕ್ಷಣಿಕ ವ್ಯವಸ್ಥೆಯ ಕಾರಣಕ್ಕಾಗಿ, ಇನ್ನೊಂದೆಡೆ ಅಲ್ಲಿಯ ಆರೋಗ್ಯ ವ್ಯವಸ್ಥೆಯ ಕಾರಣಕ್ಕಾಗಿ…
ಇವೆಲ್ಲವುಗಳ ಜೊತೆಗೆ ಈಗ ಕೇರಳದ ಎರಡು ಸಿನಿಮಾಗಳು ದೇಶಾದ್ಯಂತ ಮಾತ್ರವಲ್ಲ ಜಗತ್ತಿನಾದ್ಯಂತ ಚರ್ಚೆಯಾಗುತ್ತಿವೆ. ಒಂದು “2018 everyone is the hero” ಮತ್ತೊಂದು “Kerala Story” ಈ ಎರಡು ಸಿನೆಮಾಗಳ ಕುರಿತು ನಡೆಯುತ್ತಿರುವ ಚರ್ಚೆ ಇಷ್ಟೆ.
ಇದನ್ನೂ ಓದಿ : ಹಕ್ಕಿಗಳ ಭೇಟಿ
“ಕೇರಳ ಸ್ಟೋರಿ” ಎನ್ನುವ ಸಿನೆಮಾ ಸತ್ಯ ಘಟನೆ ಆಧಾರಿತ ಎಂದು ಹೇಳುತ್ತಾ ಹಸಿ ಹಸಿ ಸುಳ್ಳುಗಳನ್ನ ಬಿಂಬಿಸುವ ಒಂದು ಪ್ರಪಗಾಂಡ ಸಿನಿಮಾ. ಮತ್ತೊಂದು 2018 ರಲ್ಲಿ ಕೇರಳದಲ್ಲಿ ಸಂಭವಿಸಿದ ಜಲಪ್ರಳಯದ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಜಾತಿ, ಧರ್ಮಗಳ ಭೇದಭಾವ ಮರೆತು ಕೇರಳದ ಉಳಿವಿಗಾಗಿ ನಡೆಸಿದ ಅವಿರತ ಹೋರಾಟದ ಬಗ್ಗೆ ಇರುವ “2018 everyone is the hero” ಸಿನೆಮಾ. ಇದು ನಿಜವಾಗಿಯೂ ಕೇರಳದ ನೈಜ ಘಟನೆಗಳ ಆಧಾರದಲ್ಲಿ ಕಟ್ಟಿಕೊಟ್ಟಿರುವ ಸಿನಿಮಾ.
ಮಲೆಯಾಳಿಗಳು ಮತ್ತು ತಮಿಳರು ಸಿನಿಮಾ ಕ್ಷೇತ್ರದಲ್ಲಿ ವಿಭಿನ್ನ ಛಾಪೊಂದನ್ನ ಈಗಾಗಲೇ ಮೂಡಿಸಿದ್ದಾರೆ… ಅದರ ಮುಂದುವರೆದ ಭಾಗವೇ “2018”
ಈ ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗಿವೆ… ಕೇರಳದ ಜನ “2018” ನ್ನು ಅಪ್ಪಿಕೊಂಡರೆ ಕೇರಳದ ಹೊರಗಿನವರು “ಕೇರಳ ಸ್ಟೋರಿ ” ಬಗ್ಗೆ ಮಾತನಾಡುತ್ತಿದ್ದಾರೆ. ಅನುಭವಿಸಿದವರಿಗೆ ತಾನೆ ಗೊತ್ತಾಗೋದು ಯಾವುದು ಸರಿ ಅಂತಾ…