ಕೇರಳ | ವಾಟ್ಸಾಪ್‌ಗೆ ನ್ಯಾಯಾಂಗ ನಿಂದನೆ ನೋಟಿಸ್‌ ಕಳುಹಿಸಿದ ಪೊಲೀಸರು!

ತಿರುವನಂದಪುರಂ: ಮಾನಹಾನಿ ಪ್ರಕರಣದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಬಗ್ಗೆ ಕೇರಳ ಪೊಲೀಸರು ವಾಟ್ಸಾಪ್‌ಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ್ದಾರೆ. ಕೇರಳದ ಕಿಲಿಮನೂರು ಮೂಲದ ಮಹಿಳೆಯೊಬ್ಬರು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಪೋಸ್ಟ್‌ಗಳನ್ನು ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಮೇರೆಗೆ ತನಿಖೆ ಆರಂಭಿಸಿದ ಕೇರಳ ಪೊಲೀಸರು, ಆರಂಭದಲ್ಲಿ ಪೋಸ್ಟ್‌ಗಳನ್ನು ಹರಡಿದ ವ್ಯಕ್ತಿಯ ವಿವರಗಳನ್ನು ನೀಡುವಂತೆ ವಾಟ್ಸಾಪ್‌ಗೆ ಕೇಳಿದ್ದರು. ಆದರೆ, ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ನೀತಿಯನ್ನು ಉಲ್ಲೇಖಿಸಿದ್ದ ವಾಟ್ಸಪ್ ಪೊಲೀಸರ ಈ ವಿನಂತಿಯನ್ನು ನಿರಾಕರಿಸಿತ್ತು.

ಇದನ್ನೂ ಓದಿ: ಮತ್ತೆ ಕೇರಳದತ್ತ – ನಟ ಸುರೇಶ್ ಗೋಪಿ ಮಗಳ ಮದುವೆಯಲ್ಲಿ ಭಾಗವಹಿಸಲಿರುವ ಮೋದಿ!

ಕೇಂದ್ರ ಸರ್ಕಾರದ ಐಟಿ ತಿದ್ದುಪಡಿ ನಿಯಮಗಳು-2023 ಅನ್ನು ಗಣನೆಗೆ ತೆಗೆದುಕೊಂಡು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಆದೇಶದ ಜೊತೆಗೆ ಭಾರತದ ವಾಟ್ಸಾಪ್ ಸಂಸ್ಥೆಯ ಮುಖ್ಯಸ್ಥರಿಗೆ ಪೊಲೀಸರು ಹೊಸ ನೋಟೀಸ್ ಕಳುಹಿಸಿದ್ದಾರೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಮಾಡಿದ್ದ ತಿದ್ದುಪಡಿಯ ಮೂಲಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಅದರ ಮಧ್ಯವರ್ತಿಗಳು, ಮಾಹಿತಿ ತಂತ್ರಜ್ಞಾನ (ಐಟಿ) ಕಾಯಿದೆ-2000 ರ ಸೆಕ್ಷನ್ 79 ರ ಅಡಿಯ ಕಾನೂನು ರಕ್ಷಣೆಯನ್ನು ಹಿಂಪಡೆದಿದೆ. ಹೀಗಾಗಿ ಸೈಬರ್ ಪೊಲೀಸರು ಕೇಳಿದ ಮಾಹಿತಿಯನ್ನು ಒದಗಿಸಲು ವಿಫಲವಾದರೆ ವಾಟ್ಸಾಪ್ ಅಧಿಕಾರಿಗಳನ್ನು ಸಹ ಬಂಧಿಸಬಹುದಾಗಿದೆ.

ಕೇರಳ ಪೊಲೀಸರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದ ಸಹಾಯದಿಂದ ವಂಚನೆಗಳು ಮತ್ತು ಅಪರಾಧಗಳನ್ನು ನಿಭಾಯಿಸುವ ಪ್ರಯತ್ನಗಳನ್ನು ಹೆಚ್ಚಿಸುತ್ತಿದ್ದಾರೆ. ಸಾಲದ ಅಪ್ಲಿಕೇಶನ್ ವಂಚನೆಗಳ ಸಂತ್ರಸ್ತರಿಗೆ ದೂರುಗಳನ್ನು ಸಲ್ಲಿಸಲು ಸಹಾಯ ಮಾಡಲು 2023ರ ಸೆಪ್ಟೆಂಬರ್‌ನಲ್ಲಿ WhatsApp ಸಹಾಯವಾಣಿಯನ್ನು ಪ್ರಾರಂಭಿಸಲಾಗಿತ್ತು. ಅಕ್ಟೋಬರ್‌ನಲ್ಲಿ ರಾಜ್ಯ ಪೊಲೀಸ್ ಮಾಧ್ಯಮ ಕೇಂದ್ರವು ಆನ್‌ಲೈನ್‌ನಲ್ಲಿ ಬೆದರಿಕೆಗಳು ಮತ್ತು ಸುಲಿಗೆಯನ್ನು ತಡೆಯಲು ಸಹಾಯವಾಣಿಯನ್ನು ಪ್ರಾರಂಭಿಸಿತ್ತು.

ವಿಡಿಯೊ ನೋಡಿ: ಸುಗ್ಗಿ ಹಬ್ಬ. ಸಂಕ್ರಾಂತಿಯ ಸೊಬಗು..ಜನಪದ ಹಾಡು… Janashakthi Media

Donate Janashakthi Media

Leave a Reply

Your email address will not be published. Required fields are marked *