ಕೇರಳ ಸರಕಾರಕ್ಕೆ ಸ್ವಯಂ ಸ್ಪೂರ್ತಿಯಿಂದ ದೇಣಿಗೆ ನೀಡುತ್ತಿರುವ ಜನತೆ

ತಿರುವನಂತಪುರಂ: ಕೇಂದ್ರ ಸರಕಾರವು ಕೊರೊನಾ ಲಸಿಕೆ ವಿತರಣೆಯಲ್ಲಿರುವ ಕೆಲವು ಷರತ್ತುಗಳನ್ನು ಆಕ್ಷೇಪ ವ್ಯಕ್ತಪಡಿಸಿದ ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ರಾಜ್ಯಗಳಿಗೆ ಉಚಿತ ಲಸಿಕೆಗಳನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು.

ಈ ಪತ್ರವನ್ನು ಅವರು ಎರಡು ದಿನಗಳ ಹಿಂದೆ ಬರೆದಿದ್ದರು. ನಂತರದಲ್ಲಿ ಕೊರೊನಾ ಸೋಂಕಿತರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೆ ದೇಣಿಗೆ ಕೋರಿ ಲಸಿಕಾ ಅಭಿಯಾನದ ಭಾಗವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿ (ಸಿ.ಎಂ.ಡಿ.ಆರ್.ಎಫ್.)ಗೆ ದೊಡ್ಡ ಮೊತ್ತದಲ್ಲಿಯೇ ನಿಧಿ ಹರಿದು ಬರುತ್ತಿದೆ.

ಇದನ್ನು ಓದಿ: ವೀಕೆಂಡ್‌ ಲಾಕ್ಡೌನ್‌ : ಜನಜೀವನ ಸ್ತಬ್ಧ, ರಸ್ತೆಗಳು ಖಾಲಿ ಖಾಲಿ

ಈ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸ್ಟ್ಯಾಂಡ್ ವಿತ್ ಕೇರಳ, ಸಿಎಂಡಿಆರ್‌ಎಫ್ ಚಾಲೆಂಜ್ ಮತ್ತು ಲಸಿಕೆಗಾಗಿ ದಾನ ಮಾಡಿ ಎಂಬ ಘೋಷದೊಂದಿಗೆ ಪ್ರಚಾರ ಕೈಗೊಳ್ಳಲಾಗಿತ್ತು. ಲಸಿಕೆ ತೆಗೆದುಕೊಂಡವರ ಕೊಡುಗೆಯಾಗಿ ಸಿಎಂಡಿಆರ್‌ಡಿಫ್ ಖಾತೆಗೆ ಗುರುವಾರದಂದು 22 ಲಕ್ಷ ರೂ. ಜಮೆಯಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಇಂದು ತಮ್ಮ ಟ್ವೀಟ್‌ ನಲ್ಲಿ ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳಲು ನಾವು ಮತ್ತೆ ಮತ್ತೆ ಒಗ್ಗಟ್ಟಾಗಿ ನಿಂತಿದ್ದೇವೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡುಗೆಗಳು ಎಲ್ಲಾ ಭಾಗಗಳಿಂದಲೂ ಹರಿಯುತ್ತಿವೆ. ಧನ್ಯವಾದಗಳು! ಕೇರಳ ಮತ್ತು ಅದರ ಜನರನ್ನು ಉಳಿಸಲು ರಾಜ್ಯವನ್ನು ಪ್ರೀತಿಸುವವರೆಲ್ಲರೂ ಈ ಉದಾತ್ತ ಉದ್ದೇಶಕ್ಕೆ ಸೇರಿಕೊಳ್ಳಬೇಕೆಂದು ಅವರು ವಿನಂತಿಸಿದರು.

ಇದನ್ನು ಓದಿ: ಆಕ್ಸಿಜನ್ ಗೆ ಪರದಾಟ ಕೇರಳದಲ್ಲಿ ಮಾತ್ರ ಇಲ್ಲ

ಕೇರಳ ರಾಜ್ಯದ ವಿಶೇಷತೆಯೇ ಹಾಗೆ: ನೆನ್ನೆ ಸಂಜೆ 4.30 ರವರೆಗೆ ಸಿಎಮ್‌ಡಿಆರ್‌ಎಫ್‌ಗೆ ಲಸಿಕೆ ತೆಗೆದುಕೊಂಡವರ ಕೊಡುಗೆಯಾಗಿ ದೊಡ್ಡ ಮೊತ್ತದ ಹಣ ಜಮೆಯಾಗಿದೆ ಎಂದು ಅವರು ಹೇಳಿದ್ದಾರೆ. ಇದು ನಿರ್ಣಾಯಕ ಹಂತದಲ್ಲಿ ಸರ್ಕಾರದೊಂದಿಗೆ ನಿಲ್ಲುವ ಜನರ ಮನೋಭಾವವನ್ನು ತೋರಿಸುತ್ತದೆ. ಜನರಿಂದ ಈ ನಿಲುವು ಸರ್ಕಾರಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಎಂದಿದ್ದಾರೆ. ಬರೋಬ್ಬರಿ 45 ಗಂಟೆಯಲ್ಲಿ 2.28 ಕೋಟಿ ಸಿಎಂ ಪರಿಹಾರ ನಿಧಿಯಲ್ಲಿ ಜಮೆಯಾಗಿದೆ ಎಂದು ತಿಳಿದು ಬಂದಿದೆ.

ಕೇರಳದ ಎಡರಂಗ ಸರ್ಕಾರವು ಲಸಿಕೆಗಳ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದಕ್ಕಾಗಿ ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ವಿ ಮುರಳೀಧರನ್ ಅವರು ಟೀಕಿಸಿದ್ದರು. ಅದರ ಬೆನ್ನಲೇ ಅಭಿಯಾನ ಇನ್ನಷ್ಟು ವೇಗ ಪಡೆದಿದೆ.

Donate Janashakthi Media

Leave a Reply

Your email address will not be published. Required fields are marked *