ಕೋಝಿಕೋಡ್ : ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕೋವಿಡ್-19 ದೃಢಪಟ್ಟಿದ್ದು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡಿರುವ ಪಿಣರಾಯಿ ಅವರು ಅವರು ಕಳೆದ ಮಾರ್ಚ್ 03ರಂದು ಕೋವಿಡ್ ವ್ಯಾಕ್ಸಿನ್ ಮೊದಲ ಡೋಸ್ ಅನ್ನು ಪಡೆದಿದ್ದರು. ಕಣ್ಣೂರ್‌ನ ಸ್ವಗ್ರಾಮದಲ್ಲಿ ಪಿಣರಾಯಿ ವಿಜಯನ್ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.
I have been confirmed Covid +ve. Will get treated at the Government Medical College, Kozhikkode. Request those who have been in contact with me recently to go into self observation.
— Pinarayi Vijayan (@vijayanpinarayi) April 8, 2021
ಈಗಷ್ಟೇ ತಮ್ಮ ಸಂರ್ಪಕ್ಕೆ ಬಂದ ಜನರು ಕೂಡಲೇ ಮುಂಜಾಗ್ರತೆಯನ್ನು ವಹಿಸಬೇಕು ಮತ್ತು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ವಿನಂತಿಸಿದ್ದಾರೆ.
ಕೇರಳ ರಾಜ್ಯದ ಮುಖ್ಯಮಂತ್ರಿ ಹಾಗೂ ಸಿಪಿಐ(ಎಂ) ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರು ಆಗಿರುವ ಪಿಣರಾಯಿ ಅವರು ಈಗಷ್ಟೇ ಮುಗಿದಿರುವ ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿ ಅವರ ಮಗಳು ವೀಣಾ ವಿಜಯನ್ ಅವರಿಗೆ ಎರಡು ದಿನಗಳ ಹಿಂದೆ ಕೋವಿಡ್ ದೃಢಪಟ್ಟಿತ್ತು.