ಚಿಕ್ಕಬಳ್ಳಾಪುರ: “ಕೇಂದ್ರ ಸರಕಾರವು” ರಾಜ್ಯಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದರು.
ಬಾಗೇಪಲ್ಲಿಯ ಕೆಹಚ್ಬಿ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ, ಸಿಪಿಐ(ಎಂ) ಪಕ್ಷದ ಆಯೋಜಿಸಿದ್ದ ” ಸೌಹಾರ್ದ, ಸಮೃದ್ಧ, ಜನತಾ ಕರ್ನಾಟಕ” ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಕೇರಳ ಸರ್ಕಾರದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ, ಕೇರಳ ಸರ್ಕಾರಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದೆ. ಕೇರಳದಂತೆ ದೇಶದ ಮತ್ತಿತರೆ ರಾಜ್ಯಗಳಿಗೂ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದರು.
ಕೇರಳ ರಾಜ್ಯದಲ್ಲಿ ಸಿಪಿಎಂ ಸರ್ಕಾರದ ಜತೆ ಜನರು ನಿಂತಿದ್ದಾರೆ. ನಾವು ಬಿಜೆಪಿ, ಆರ್ಎಸ್ಎಸ್ ಕುತಂತ್ರಗಳಿಗೆ ಶರಣಾಗುವುದಿಲ್ಲ. ಬಿಜೆಪಿ, ಆರ್ಎಸ್ಎಸ್ ಧರ್ಮದ ಹೆಸರಿನಲ್ಲಿ ಕೋಮುವಾದ ಬೆಳೆಸುತ್ತಿದೆ. ಕೋಮುವಾದ ನೋಡಿಕೊಂಡು ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಮಂಗಳೂರು, ಉಡುಪಿಯಲ್ಲಿ ಅಲ್ಪಸಂಖ್ಯಾತರಿಗೆ ತೊಂದರೆ ಕೊಡುತ್ತಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳನ್ನು ವಿದ್ಯಾಭ್ಯಾಸದಿಂದ ದೂರು ಇಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಆರ್.ಎಸ್. ಎಸ್ ಸಂಕುಚಿದ ದೇಶಭಕ್ತಿ ಮಾಡುತ್ತಿದೆ. ಭಾರತ ವಿವಿಧೆತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ. ದೇಶದಲ್ಲಿ ಅಘಾತಕಾರಿ ಅನ್ನಿವೇಶ ಸೃಷ್ಟಿ ಮಾಡಿದ್ದಾರೆ. ದೇಶ ಭಕ್ತಿ, ರಾಷ್ಟ್ರೀಯತೆ ಕೆಲವರ ಸ್ವತ್ತ ಎನ್ನುವಂತೆ ಮಾಡುತ್ತಿದ್ದಾರೆ. ದೇಶ ಭಕ್ತಿಗೆ ಆರ್.ಎಸ್.ಎಸ್ ಪ್ರಮಾಣ ಪತ್ರ ಬೇಕು ಎನ್ನುವ ಹಾಗೆ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್.ಎಸ್.ಎಸ್ ಇರಲೇ ಇಲ್ಲ ಎಂದರು.
ಶಾಲಾ ಕಾಲೇಜುಗಳಲ್ಲಿ ಕೋಮುವಾದದ ಬೀಜ ಬಿತ್ತುತ್ತಿದ್ದಾರೆ. ಪಾಠಗಳಲ್ಲಿ ಇಲ್ಲ ಸಲ್ಲದ ಕೋಮುವಾದ ಭಾವನೆಗಳನ್ನು ಬಿತ್ತುತ್ತಿದ್ದಾರೆ. ಆರ್ಎಸ್ಎಸ್ ಸಂಸ್ಥಾಪಕರ ಬಾಷಣ ಸೇರಿಸಿದ್ದಾರೆ. ಆರ್.ಎಸ್.ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರಗತಿಪರರ ಧ್ವನಿ ಅಡಗಿಸುತ್ತಿದ್ದಾರೆ. ಪ್ರಗತಿಪರರ ಹತ್ಯೆ ಹಿಂದೆ ಹಿಂದುತ್ವ ಸಂಘಟನೆಗಳ ಕೈವಾಡವಿರುವ ಶಂಕೆ ಇದೆ. ಉತ್ತರ ಭಾರತದಂತೆ ಕರ್ನಾಟಕಟದಲ್ಲೂ ಕೋಮುವಾದಿ ಸೃಷ್ಟಿಸುತ್ತಿದ್ದಾರೆ. ಪಠ್ಯ ಪುಸ್ತಕವನ್ನು ಕೇಸರಿಕರಣ ಮಾಡುತ್ತಿದ್ದಾರೆ. ಮಹಾನ್ ಸಂತರಾದ ನಾರಾಯಣ ಗುರು, ಪೆರಿಯಾರ್ ಪಾಠಗಳನ್ನು ತೆಗೆದು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲಿಟ್ ಬ್ಯೂರೊ ಸದಸ್ಯ ಬಿ.ವಿ ರಾಘವಲು ಮಾತನಾಡಿ, ಸದನದಲ್ಲಿ ಕಮ್ಯುನಿಸ್ಟ್ ಪಕ್ಷದ ಶಾಸಕರು ಇರಬೇಕು. ಅಂತಹ ವಾತವಾರಣ ಬಾಗೇಪಲ್ಲಿಯಲ್ಲಿ ಇದೆ. ಈ ಹಿಂದೆ ಇಲ್ಲಿ ಗೆದ್ದ ಸಿಪಿಐಎಂ ಶಾಸಕರು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದರು. ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿಯವರನ್ನು ನೆನಪಿಸಿಕೊಂಡ ಅವರು, ಅವರು ಶಾಸಕರಾಗಿದ್ದಾಗ ಶಿಕ್ಷಣ, ಆರೋಗ್ಯ, ಬಡವರಿಗೆ ಮನೆ, ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಿದರು. ಶಾಶ್ವತ ನೀರಾವರಿ ಹೋರಾಟವನ್ನು ರೂಪಿಸಿದ ನಾಯಕ ಎಂದು ಸ್ಮರಿಸಿದರು.
ವೇದಿಕೆಯ ಮೇಲೆ ಪೊಲಿಟ್ ಬ್ಯುರೊ ಸದಸ್ಯರಾದ ಎಂ.ಎ. ಬೇಬಿ, ರಾಜ್ಯ ಕಾರ್ಯದರ್ಶಿ ಯು. ಬಸವರಾಜ. ಮುಖಂಡರಾದ ಕೆ.ಎನ್.ಉಮೇಶ್, ಎಸ್. ವರಲಕ್ಷ್ಮಿ, ಕೆ.ನೀಲಾ, ಜಿ.ನಾಗರಾಜ, ಮೀನಾಕ್ಷಿ ಸುಂದರಂ, ಗೋಪಾಲಕೃಷ್ಣ ಅರಳಹಳ್ಳಿ, ಎಂ.ಪಿ. ಮುನಿವೆಂಕಟಪ್ಪ. ಜಿ.ಸಿ.ಬಯ್ಯಾರೆಡ್ಡಿ, ಡಾ. ಕೆ.ಪ್ರಕಾಶ್, ಸಯ್ಯದ್ ಮುಜೀಬ್, ಯಾಧವ ಶೆಟ್ಟಿ, ಡಾ. ಅನೀಲ್ ಕುಮಾರ್, ಮಹಮ್ಮದ್ ಅಕ್ರಂ, ಮಂಜುನಾಥ ರೆಡ್ಡಿ ಸೇರಿದಂತೆ ಅನೇಕರು ವೇದಿಕೆಯ ಮೇಲಿದ್ದರು. ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿತ್ತು.