ಕೇರಳ: ಕೋವಿಡ್‌ ಎರಡನೇ ಅಲೆ ಎದುರಿಸಲು ರೂ.20 ಸಾವಿರ ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ

ತಿರುವನಂತಪುರಂ: ಕೋವಿಡ್‌-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದ ಉಂಟಾಗಿರುವ ತೀವ್ರತರವಾದ ಬಿಕ್ಕಟ್ಟನ್ನು ಎದುರಿಸಲು ಕೇರಳದ ಎಲ್‌ಡಿಎಫ್‌ ಸರಕಾರವು ಮಂಡಿಸಿದ ಬಜೆಟ್‌ನಲ್ಲಿ ₹20ಸಾವಿರ ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿದೆ.

ಹಣಕಾಸು ಸಚಿವ ಕೆ.ಎನ್‌.ಬಾಲಗೋಪಾಲ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಅವಧಿಯ ಎಡರಂಗ ಸರ್ಕಾರದ ಮೊದಲ ಬಜೆಟ್‌ ಅನ್ನು ಇಂದು ಮಂಡಿಸಿದರು. ಇದರಲ್ಲಿ ಕೋವಿಡ್‌ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್‌ ಅನ್ನು ಪ್ರಕಟಿಸಲಾಗಿದೆ.

ಇದನ್ನು ಓದಿ: ದೇಶದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ಕೇರಳ ಮೊದಲು

ಕೇರಳ ಬಜೆಟ್‌ನ ಕೆಲವು ಪ್ರಮುಖ ಅಂಶಗಳು:

  • ₹20,000 ಕೋಟಿಕೋವಿಡ್‌ ಎರಡನೇ ಅಲೆ ಎದುರಿಸಲು ವಿಶೇಷಪ್ಯಾಕೇಜ್
  • ಕರಾವಳಿಹೆದ್ದಾರಿಯೋಜನೆಯನ್ನುತ್ವರಿತವಾಗಿ ಪೂರ್ಣಗೊಳಿಸಲು ಕ್ರಮ
  • ತೆರಿಗೆರವಾನೆಖಚಿತಪಡಿಸಿಕೊಳ್ಳಲುಯಾವುದೇಬಲವಂತದಕ್ರಮಗಳಿಲ್ಲ
  • ಸಚಿವರು₹1,30,981.06 ಕೋಟಿಗಳಆದಾಯದಒಳಹರಿವು
  • ಅನಾಥಮಕ್ಕಳಿಗೆ 18 ನೇವಯಸ್ಸನ್ನುತಲುಪುವವರೆಗೆ ಮಾಸಿಕವಾಗಿ ₹2,000 ಸಹಾಯಧನ.ಜೊತೆಗೆ ಒಮ್ಮೆಲೆ ₹3 ಲಕ್ಷ ಪಾವತಿ.
  • ಕೋವಿಡ್‌ ಮತ್ತು ಎಲಬೊಲದಂತಹ ಸಾಂಕ್ರಾಮಿಕ ರೋಗ ತಡೆಗಟ್ಟಲು ಚಿಕಿತ್ಸೆಗಾಗಿ ತಿರುವನಂಪುರ ಮತ್ತು ಕೋಜ್ಹಿಕೋಡ್‌ ನಲ್ಲಿನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾದ ಅತ್ಯಾಧುನಿಕ ಸೌಲಭ್ಯಗಳ ಸ್ಥಾಪನೆ
  • ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್ಡ್‌ ವೈರಾಲಜಿ ಮೂಲಕ ರಾಜ್ಯದಲ್ಲಿ ಲಸಿಕೆಸಂಶೋಧನೆಮತ್ತುಉತ್ಪಾದನೆಯನ್ನುಹೆಚ್ಚಿಸುವ ಕುರಿತು ಕ್ರಮ.
  • ರೋಗ ನಿಯಂತ್ರಣ ಕೇಂದ್ರಕ್ಕೆ ₹ 50 ಲಕ್ಷ ಹಂಚಿಕೆ

ಇದನ್ನು ಓದಿ: ಲಸಿಕೆಗೆ ಮೀಸಲಿಟ್ಟ 35 ಸಾವಿರ ಕೋಟಿ ರೂ ಏನಾಯ್ತು? – ಕೇಂದ್ರಕ್ಕೆ ಸುಪ್ರೀಂ ಛಾಟಿ

ಈ ಹಣಕಾಸಿನ ಪ್ಯಾಕೇಜ್‌ನೊಂದಿಗೆ  18 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲು ₹ 1 ಸಾವಿರ ಕೋಟಿ ವಿಶೇಷ ನಿಧಿಯನ್ನು ತೆಗೆದಿರಿಸಿದ್ದಾರೆ. ಹಾಗೆಯೇ ಉಚಿತ ಲಸಿಕೆ ನೀಡಲು ಬೇಕಾದ ಉಪಕರಣಗಳು ಮತ್ತು ಸೌಲಭ್ಯಗಳಿಗಾಗಿ ಹೆಚ್ಚುವರಿಯಾಗಿ ₹500 ಕೋಟಿ ಹಣವನ್ನು ಮೀಸಲಿರಿಸಲಾಗಿದೆ ಅವರು ತಿಳಿಸಿದರು.

‘ಕೋವಿಡ್‌ ಪರಿಹಾರ ಕಾರ್ಯಗಳಿಗೆ ಹಿಂದಿನ ಸರ್ಕಾರ ತೆಗೆದಿಟ್ಟಿದ್ದ ₹20 ಸಾವಿರ ಕೋಟಿ ಹಣವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲಾಗಿದೆ ಎಂದು ತಿಳಿಸಿದ ಹಣಕಾಸು ಸಚಿವರು, ‘ಕೋವಿಡ್-19 ಎರಡನೇ ಅಲೆಯ ಬಿಕ್ಕಟ್ಟನ್ನು ಎದುರಿಸಲು ಮತ್ತೆ ₹20 ಸಾವಿರ ಕೋಟಿ ಹಣವನ್ನು ಮೀಸಲಿಡಲಾಗಿದೆʼ ಎಂದು ಹೇಳಿದ್ದಾರೆ.

ನೂತನ ಬಜೆಟ್‌ಲ್ಲಿ ಆರೋಗ್ಯ ಮತ್ತು ಆಹಾರ ಭದ್ರತೆಗೆ ಒತ್ತು ನೀಡಲಾಗಿದೆ ಎಂದು ಹೇಳಿದ ಸಚಿವರು, ರಾಜ್ಯದಲ್ಲಿ ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಕಡಿಮೆ ಮಾಡುವುದು ಮತ್ತು ಮೂರನೇ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸುವುದು  ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದವರು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *