ನವದೆಹಲಿ: ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಕಾಯ್ದೆ ಜಾರಿಗೊಳಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ಆದರೆ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಇದು ಸಾಧ್ಯವಾಗುವುದಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಮನೋಹಲ್ ಲಾಲ್ ಖಟ್ಟರ್ ಪ್ರಧಾನಿಯೊಂದಿಗೆ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಖಮನೋಹಲ್ ಲಾಲ್ ಖಟ್ಟರ್ ಅವರು
ಮೂರು ಕೃಷಿ ಕಾನೂನು ಕುರಿತು ಉಭಯ ಚರ್ಚೆ ನಡೆಸಿದ್ದೇವೆ. ಕೃಷಿ ಕಾನೂನುಗಳನ್ನು ಹಿಂತೆಗೆಳ್ಳುವ ನಿರ್ಧಾರ ಈಗಾಗಲೇ ಪ್ರಕಟವಾಗಿದೆ. ಆದರೆ ಎಲ್ಲ ಬೆಳೆಗಳಿಗ ಎಂಎಸ್‌ಪಿ ಖಾತರಿಪಡಿಸಬೇಕೆಂಬ ಕಾನೂನು ಜಾರಿಗೊಳಿಸಲು ಸಾಧ್ಯವಿಲ್ಲವೆಂದು ತಿಳಿಸಿದರು.
‘ಸರ್ಕಾರವು ಎಂಎಸ್‌ಪಿ ಕಾನೂನನ್ನು ತಂದರೆ ಎಲ್ಲಾ ಬೆಳೆಗಳನ್ನು ಖರೀದಿಸುವ ಒತ್ತಡಕ್ಕೆ ಸಿಲುಕುತ್ತದೆ. ಅದು ಸಾಧ್ಯವಿಲ್ಲ. ಹರಿಯಾಣದಲ್ಲಿಯೇ ಒಂದು ಡಝನ್ ಬೆಳೆಗಳನ್ನು ಎಂಎಸ್‌ಪಿ ದರದಲ್ಲಿ ಖರೀದಿಸಲಾಗುತ್ತದೆ. ಸರ್ಕಾರ ಎಂಎಸ್‌ಪಿ ಕಾನೂನನ್ನು ಜಾರಿಗೊಳಿಸಿದ್ದಲ್ಲಿ, ಎಲ್ಲ ಬೆಳೆಗಳನ್ನು ಖರೀದಿಸಲು ಒತ್ತಡ ಹೆಚ್ಚಾಗುತ್ತದೆʼ ಎಂದಿದ್ದಾರೆ.
ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಸರಕಾರ ರದ್ದುಗೊಳಿಸುವುದಾಗಿ ಘೋಷಿಸಿದೆ. ಮೂರು ಕೃಷಿ ಕಾನೂನುಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು.
ಕೇಂದ್ರದ ಬಿಜೆಪಿ ಸರ್ಕಾರವು ಮೂರು ಕೇಂದ್ರ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕೇಂದ್ರ ಸಚಿವ ಸಂಪುಟ ನಿರ್ಧಾರದ ನಂತರವೂ ದೆಹಲಿ-ಎನ್‌ಸಿಆರ್‌ನ ನಾಲ್ಕು ಗಡಿಗಳಲ್ಲಿ ರೈತರ ಆಂದೋಲನ ಮುಂದುವರೆದಿದೆ. ಕಾನೂನು ಹಿಂಪಡೆಯುವ ಘೋಷಣೆ ಪ್ರಕಟಗೊಂಡ ದಿನದಂದೇ ಸಂಯುಕ್ತ ಕಿಸಾನ್ ಮೋರ್ಚಾ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ 6 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿ ಸತ್ಯಾಗ್ರಹ ಮುಂದುವರೆಸಿದರು.
ಎಂಎಸ್‌ಪಿ ಕಾನೂನಿನ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾತುಕತೆ ನಡೆದಿಲ್ಲ. 700ಕ್ಕೂ ಹೆಚ್ಚು ರೈತರು ಹುತಾತ್ಮ ರಾಗಿದ್ದಾರೆ ಅವರ ಕುಟುಂಬಗಳ ಪರಿಹಾರದ ಪ್ರಮುಖ ವಿಚಾರವೂ ಇದೆ. ಲಖಿಂಪುರ ಖೇರಿಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಪ್ರಮುಖ ಆರೋಪಿ ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆ ನೀಡುವ ಬಗ್ಗೆ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆಯ ನ್ಯಾಯಕ್ಕಾಗಿ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹಿಸುತ್ತಿದೆ.