ಕೇಂದ್ರ ಸರ್ಕಾರದಿಂದ ಭಾರತದ ಆಹಾರ ಭದ್ರತೆ ಮೇಲೆ ದಾಳಿ – ದೇವನೂರು ಮಹದೇವ

ಬೆಂಗಳುರು : ಚಾರಿತ್ರಿಕ ದೆಹಲಿ ರೈತರ ಹೋರಾಟ ಬೆಂಬಲಿಸಿ ನಡೆಯುತ್ತಿರುವ AIKSCC ರಾಜ್ಯ ಮಟ್ಟದ ಧರಣಿ ಇಂದು ಆರನೇ ದಿನಕ್ಕೆ ಕಾಲಿಟ್ಟಿತು. ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದ ಇಂದಿನ ಧರಣಿಯಲ್ಲಿ ಹಿರಿಯ ಸಾಹಿತಿ ದೇವನೂರು ಮಹಾದೇವ, ಚಿಂತಕ ಶಿವಸುಂದರ್ ,ಲೇಖಕ ಶ್ರೀಪಾದಭಟ್ ,ಸಿರಿಮನೆ ನಾಗರಾಜ್ , ಹೋರಾಟಗಾರ್ತಿ ಅರಳಾಳುಸಂದ್ರ ಅನುಸೂಯಮ್ಮ ಮುಂತಾದವರು ಭಾಗವಹಿಸಿ ಮಾತಾನಾಡಿದರು.

ಪ್ರತಿಭಟನೆ ಉದ್ಘಾಟಿಸಿ ಮಾತಾನಾಡಿದ ಹಿರಿಯ ಸಾಹಿತಿ ದೇವನೂರು ಮಹಾದೇವ ರವರು
ಕೋವಿಡ್ ಸಾಂಕ್ರಾಮಿಕದ ಈ ದಯಾನೀಯ, ಧಾರುಣ ಕಾಲಮಾನದಲ್ಲಿ ಯಾರೂ ಉಸಿರೆತ್ತುವುದಿಲ್ಲ, ಇದೇ ಸರಿಯಾದ ಕಾಲ ಎಂದು ಈ ಕೃಷಿ ಕಾನೂನುಗಳನ್ನು ಜಾರಿಗೆ ತರಲು ಹೊರಟಿದೆ. ಇದು ಕ್ರೌರ್ಯದ ಪರಮಾವಧಿ .ಇದು ಸಂವಿಧಾನ, ಪ್ರಜಾ ಪ್ರಭುತ್ವ, ಭಾರತದ ಒಕ್ಕೂಟದ ಸ್ವರೂಪದ ಮೇಲೆ ಅಂದರೆ ಭಾರತ ಸ್ವಾತಂತ್ರ್ಯ ಪಡೆದ ಕನಸಿನ ಮೇಲೆ ನಡೆದ ದಾಳಿಯಾಗಿದೆ. ಅಂದರೆ ಇದು ಎಲ್ಲಾ ಪ್ರಜೆಗಳ ಮೇಲೆ ನಡೆಸಿದ ದಾಳಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕೇಂದ್ರ ಸರ್ಕಾರ ಭಾರತದ ಆಹಾರ ಭದ್ರತೆ ಮೇಲೂ ದಾಳಿ ನಡೆಸುತ್ತಿದೆ. ಕೇಂದ್ರ ಸರ್ಕಾರ ನೇಮಿಸಿದ್ದ ಶಾಂತರಾಂ ಕಮಿಟಿಯು ಈಗ ಆಹಾರ ಭದ್ರತೆಯ ಕಾನೂನು ಮುಖಾಂತರ ಶೇಕಡಾ 67 ರಷ್ಟು ನೀಡಲಾಗುತ್ತಿದ್ದ ಆಹಾರ ಪಡಿತರವನ್ನು ಶೇಕಡ 40ಕ್ಕೆ ಇಳಿಸಬೇಕು ಎಂದು ಶಿಫಾರುಸ್ಸು ಮಾಡಿದೆ. ಹಾಗಾಗಿಯೇ ಕೃಷಿಯ ಕತ್ತು ಹಿಸುಕುವ ಈ ಕಾನೂನುಗಳು ಬಂದಿವೆ. ಬಡತನದ, ಹಸಿವಿನ, ಅಪೌಷ್ಠಿಕತೆಯ, ರಕ್ತಹೀನತೆಯ ಅಭಿವೃದ್ದಿ ಮಾಡಿದ್ದು ಸಾಕು, ನಿಲ್ಲಿಸಿ ಎಂದು ಹೇಳಬೇಕು. ಬೆಲೆ ಏರಿಕೆಗೆ ಕಾರಣವಾಗುವ, ಕೃಷಿ ಆಧಾರ ಕಿತ್ತು ಗ್ರಾಮೀಣ ಸಮುದಾಯ ಬೇರುಕಿತ್ತುಕೊಂಡು ನಗರಕ್ಕೆ ಜೋತು ಬೀಳುವ, ಸ್ಲಂ ಹೆಚ್ಚು ಮಾಡುವ ಸ್ಲಂ ಭಾರತ ನಮಗೆ ಬೇಡ ಎಂದು ಹೇಳಬೇಕು. ಆದರೆ ಮೋದಿ-ಶಾ ರವರು ಕೇಳಿಸಿಕೊಳ್ಳುತ್ತಿಲ್ಲ. ತಮ್ಮ ಭ್ರಮೆ ಮತ್ತು ಸುಳ್ಳುಗಳಲ್ಲಿ ತಾವೇ ಹೂತು ಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು

ಇಂದಿನ ಪ್ರತಿಭಟನೆ ನೇತೃತ್ವವನ್ನು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಅಧ್ಯಕ್ಷರಾದ ನೂರ್ ಶ್ರೀಧರ್ , ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮಾರ್ ಸಮತಳ ,ಕರ್ನಾಟಕ ರಾಜ್ಯ ರೈತ ಸಂಘ ದ ಕಾರ್ಯಾಧ್ಯಕ್ಷ ಜಿಎಂ ವೀರಸಂಗಯ್ಯ , ಕಾರ್ಯದರ್ಶಿ ಗೋಪಾಲ್ , ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಹಕಾರ್ಯದರ್ಶಿ ಪಿ ಆರ್ ಸೂರ್ಯನಾರಾಯಣ, ರಾಜ್ಯ ಸಮಿತಿ ಸದಸ್ಯ ಟಿ.ಯಶವಂತ , AIUTUC ರಾಜ್ಯ ಮುಖಂಡ ಕೆ.ವಿ.ಭಟ್ , ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಸಮಾಜವಾದಿ ಸಭಾದ ಆಲಿಬಾಬಾ ಮುಂತಾದವರು ವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *