‘ಇಂಡಿಯಾ ಮೈತ್ರಿ ತೊರೆಯದಿದ್ದರೆ ಕೇಜ್ರಿವಾಲ್ ಬಂಧನ’ | ಬಿಜೆಪಿಯಿಂದ ಬೆದರಿಕೆ ಎಂದ ಎಎಪಿ

ನವದೆಹಲಿ: ತಕ್ಷಣವೆ ಇಂಡಿಯಾ ಮೈತ್ರಿ ಕೂಟವನ್ನು ತೊರೆಯುವಂತೆ ಎಎಪಿ ನಾಯಕರಿಗೆ ಬಿಜೆಪಿ ಬೆದರಿಕೆ ಹಾಕುತ್ತಿದೆ ಎಂದು ಎಎಪಿಯ ಹಿರಿಯ ನಾಯಕಿ ಅತಿಶಿ ಗುರುವಾರ ಆರೋಪಿಸಿದ್ದು, “ಮೈತ್ರಿ ಕೂಟ ತೊರೆಯದಿದ್ದರೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಮುಂದಿನ ಕೆಲವು ದಿನಗಳಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಿದೆ” ಎಂದು ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅತಿಶಿ, “ಎಎಪಿ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಅಂತಿಮ ಹಂತಕ್ಕೆ ತಲುಪಿದ್ದು, ಇನ್ನೆರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ನಿಮಗೆಲ್ಲರಿಗೂ ತಿಳಿದಿದೆ. ಆದರೆ ಈ ಸುದ್ದಿ ಹೊರಬಿದ್ದಾಗಿನಿಂದ, ಎಎಪಿ ಶಾಸಕರಿಗೆ ಬಿಜೆಪಿಯಿಂದ ಸಂದೇಶಗಳು ಬರಲಾರಂಭಿಸಿದ್ದು, ಇಂಡಿಯಾ ಮೈತ್ರಿಯನ್ನು ತೊರೆಯುವಂತೆ ಬೆದರಿಕೆ ಹಾಕುತ್ತಿದ್ದಾರೆ…” ಎಂದು ಹೇಳಿದ್ದಾರೆ.

ಇದನ್ನೂ ಓದಿ:  ದೆಹಲಿ ಚಲೋ ಹೋರಾಟಕ್ಕೆ ವಿಷಯಾಧಾರಿತ ಬೆಂಬಲ ಘೋಷಿಸಿದ ಎಸ್‌ಕೆಎಂ; ಯುವ ರೈತನ ಹತ್ಯೆಗೆ ದೇಶವ್ಯಾಪಿ ಪ್ರತಿಭಟನೆಗೆ ಕರೆ

“ಎಎಪಿ ತಕ್ಷಣವೆ ಮೈತ್ರಿ ಕೂಟವನ್ನು ತೊರೆಯದಿದ್ದರೆ, ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸಿಬಿಐ ಶನಿವಾರ ಅಥವಾ ಸೋಮವಾರ ನೋಟಿಸ್ ನೀಡಲಿದೆ….” ಎಂದು ಅವರು ಹೇಳಿದ್ದಾರೆ.

ಬುಧವಾರ ಸಂಜೆಯಿಂದಲೇ ಪಠ್ಯ ಸಂದೇಶಗಳು ಮತ್ತು ಕರೆಗಳು ಕೂಡ ಬರಲಾರಂಭಿಸಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಎಎಪಿ ಸ್ಪರ್ಧಿಸಿದರೆ ಮುಂದಿನ ನಾಲ್ಕು ದಿನಗಳಲ್ಲಿ ಸಿಬಿಐ ಮತ್ತು ಇಡಿ ಕರ್ಜಿವಾಲ್ ಅವರನ್ನು ಬಂಧಿಸಲಿದೆ ಎಂದು ಎಎಪಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅತಿಶಿ ಹೇಳಿದ್ದಾರೆ.

“ಇದು ಪ್ರಜಾಪ್ರಭುತ್ವ… ಯಾವುದೇ ಪಕ್ಷಕ್ಕೆ ಮೈತ್ರಿ ಮಾಡಿಕೊಳ್ಳುವ ಮತ್ತು ಚುನಾವಣೆಯಲ್ಲಿ ಹೋರಾಡುವ ಹಕ್ಕಿದೆ… ನೀವು ಎಎಪಿ ಮತ್ತು ಅರವಿಂದ್ ಕೆರ್ಜಿವಾಲ್ ಅವರನ್ನು (ನಮಗೆ) ಬೆದರಿಕೆ ಹಾಕುವ ಮತ್ತು ಬಂಧಿಸುವ ಮೂಲಕ ಹೆದರಿಸಬಹುದು ಎಂದು ನೀವು ಭಾವಿಸಿದರೆ, ನೀವು ದೊಡ್ಡ ತಪ್ಪು ಮಾಡುತ್ತಿದ್ದೀರಿ… ಎಎಪಿ ಮತ್ತು ಅರವಿಂದ್ ಕೆರ್ಜಿವಾಲ್ ನಿಮ್ಮ ಬೆದರಿಕೆಗಳಿಗೆ ಹೆದರುವುದಿಲ್ಲ… ನೀವು ಎಲ್ಲಾ ಮಂತ್ರಿಗಳು ಮತ್ತು ಶಾಸಕರನ್ನು ಬಂಧಿಸಿದರೂ, ಹೊಸ ಎಎಪಿ ಕಾರ್ಯಕರ್ತರು ಅಧಿಕಾರ ವಹಿಸಿಕೊಳ್ಳುತ್ತಾರೆ. ಅವರು ಜನರು, ಪ್ರಜಾಪ್ರಭುತ್ವ ಮತ್ತು ದೇಶಕ್ಕಾಗಿ ನಿಲ್ಲುತ್ತಾರೆ…” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 40% ಕಮಿಷನ್ ತನಿಖೆ ವಿಳಂಬ | ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ

ಸಂದೇಶ ಎಲ್ಲಿಂದ ಬರುತ್ತದೆ ಎಂದು ಆಧಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಅವರು ಈ ಸಂದೇಶಗಳನ್ನು ಕೆಲವೊಮ್ಮೆ ಸಂಬಂಧಿಕರು ಅಥವಾ ಪಕ್ಷದ ಕಾರ್ಯಕರ್ತರ ಮೂಲಕ ಕಳುಹಿಸುತ್ತಾರೆ… ನಾವು ಎಲ್ಲಾ ಸಮಯದಲ್ಲಿ ರೆಕಾರ್ಡ್‌ ಮಾಡಲಾಗುವುದಿಲ್ಲ…  ಜಾಗಿಂಗ್, ವಾಕಿಂಗ್ ಅಥವಾ ಒಂದು ಕಪ್ ಕಾಫಿ ಕುಡಿಯುವ ವೇಳೆ ರೆಕಾರ್ಡರ್ ಅನ್ನು ಕೈಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ … ನಾವು ಸಾರ್ವಜನಿಕ ಪ್ರತಿನಿಧಿಗಳಾಗಿದ್ದು, ಪಕ್ಷದ ಕಚೇರಿಯಿಂದ ಕ್ಯಾಂಪ್ ಆಫೀಸ್ವರೆಗೆ ದಿನವಿಡೀ ವಿವಿಧ ಜನರನ್ನು ಭೇಟಿಯಾಗುತ್ತೇವೆ…. ಈ ವೇಳೆ ನಾವು ಟೇಪ್ ರೆಕಾರ್ಡರ್ನೊಂದಿಗೆ ಕುಳಿತುಕೊಳ್ಳಲು ಸಾಧ್ಯವಿಲ್ಲ… ಆದ್ದರಿಂದ, ಸಾಕ್ಷ್ಯವನ್ನು ನೀಡುವ ಈ ಪ್ರಶ್ನೆಗೆ ಅರ್ಥವಿಲ್ಲ…” ಎಂದು ಹೇಳಿದ್ದಾರೆ.

ಅತಿಶಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು, “ಎಎಪಿ ಮತ್ತು ಕಾಂಗ್ರೆಸ್ ಮತ್ತು ಅವರ ಮೈತ್ರಿ ಎರಡೂ ಈಗಾಗಲೇ ಸೋತ ಪಕ್ಷಗಳು… ಈಗಾಗಲೇ ಸೋತಿರುವ ಅವರ ಮೈತ್ರಿಗೆ ಬಿಜೆಪಿ ಹೆದರುವುದಿಲ್ಲ.ನಮ್ಮ ಪಕ್ಷವು ಚುನಾವಣೆಯಲ್ಲಿ ಹೋರಾಡುತ್ತದೆ ಮತ್ತು ದೆಹಲಿಯ ನೂರಕ್ಕೆ ನೂರು ಸ್ಥಾನ ನಾವು ಪಡೆಯುತ್ತದೆ ಎಂದು ತಿಳಿದಿದೆ. ಎಎಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಒಬ್ಬರನ್ನೊಬ್ಬರು ನಂಬುವುದಿಲ್ಲ, ಆದರೆ ನಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ…” ಎಂದು ಹೇಳೀದ್ದಾರೆ.

“ಎಎಪಿ-ಕಾಂಗ್ರೆಸ್ ಮೈತ್ರಿಯ ಬಗ್ಗೆಗಿನ ವಿಚಾರ ಬಿಜೆಪಿಯ ಕಳವಳ ವ್ಯಕ್ತಪಡಿಸುವ ಕೊನೆಯ ವಿಷಯ… ಅರವಿಂದ್ ಕೆಜ್ರಿವಾಲ್ ಮತ್ತು ಕಾಂಗ್ರೆಸ್ ಸಾರ್ವಜನಿಕ ಹಣವನ್ನು ಲೂಟಿ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಸಿಬಿಐ ಮತ್ತು ಇಡಿ ಅವರ ಕೆಲಸವನ್ನು ಮಾಡುತ್ತಿದೆ…” ಎಂದು ವೀರೇಂದ್ರ ಸಚ್‌ದೇವ ಹೇಳಿದ್ದಾರೆ.

ವಿಡಿಯೊ ನೋಡಿ: ಮೋದಿ ನೇತೃತ್ವ ಸರ್ಕಾರದ ದೊಡ್ಡ ಭ್ರಷ್ಟಾಚಾರ : ಚುನಾವಣಾ ಬಾಂಡ್ ಹಗರಣ Janashakthi Media

Donate Janashakthi Media

Leave a Reply

Your email address will not be published. Required fields are marked *