ತೆಲಂಗಾಣ | ಕೆಸಿಆರ್, ಓವೈಸಿ ಪ್ರಧಾನಿಯ ಮೋದಿಯ ಕೈಗೊಂಬೆ – ಹೋರ್ಡಿಂಗ್‌ ಸ್ಥಾಪಿಸಿದ ಕಾಂಗ್ರೆಸ್

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆ ಚಟುವಟಿಕೆಗಳು ಬಿರುಸುಗೊಂಡಿದ್ದು, ಶನಿವಾರ ಸಂಜೆ ಪ್ರಧಾನಿ ಮೋದಿ ರ‍್ಯಾಲಿಗೂ ಮುನ್ನ ಕಾಂಗ್ರೆಸ್ ಹೋರ್ಡಿಂಗ್ ಯುದ್ಧಕ್ಕೆ ಮುಂದಾಗಿದೆ. ರಾಜ್ಯದ ಆಡಳಿತರೂಢ ಬಿಆರ್‌ಎಸ್‌ ಮತ್ತು ಎಐಎಂಐಎಂ ಪಕ್ಷಗಳು ಬಿಜೆಪಿಯ ಕೈಗೊಂಬೆಗಳು ಎಂದು ಬಿಂಬಿಸಿ ಕಾಂಗ್ರೆಸ್ ಪಕ್ಷವೂ ನಗರದಲ್ಲಿ ಹೋರ್ಡಿಂಗ್‌ಗಳನ್ನು ಹಾಕಿದೆ. ಒವೈಸಿ

ಬಿಆರ್‌ಎಸ್‌ ಅಧ್ಯಕ್ಷ, ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮತ್ತು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಅವರನ್ನು ಪ್ರಧಾನಿ ಮೋದಿ ಕೈಗೊಂಬೆಯಾಗಿ ಆಡಿಸುತ್ತಿರುವ ಚಿತ್ರಗಳಿರುವ ಹೋರ್ಡಿಂಗ್‌ಗಳನ್ನು ಕಾಂಗ್ರೆಸ್ HITEC ಸಿಟಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪ್ಯಾಲೆಸ್ತೀನ್ | ಗಾಝಾ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ನವಜಾತ ಶಿಶು ಸಾವು

ಬಿಆರ್‌ಎಸ್ ಮತ್ತು ಎಂಐಎಂ ಬಿಜೆಪಿಯೊಂದಿಗೆ ಕೆಲಸ ಮಾಡುತ್ತಿವೆ ಎಂದು ಕಾಂಗ್ರೆಸ್ ನಾಯಕರು ನಿರಂತರ ಆರೋಪ ಮಾಡುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ರ‍್ಯಾಲಿಗೆ ಮುಂಚಿತವಾಗಿ ಕಾಂಗ್ರೆಸ್ ಇದನ್ನು ಹಾಕಿದೆ. ಸಂಜೆ ಸಿಕಂದರಾಬಾದ್‌ನ ಪರೇಡ್ ಮೈದಾನದಲ್ಲಿ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ತೆಲಂಗಾಣದಲ್ಲಿ ಕಳೆದ ಕೆಲವು ವಾರಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣ ಮಾಡಿದ ಎಲ್ಲಾ ರ‍್ಯಾಲಿಗಳಲ್ಲಿ ಬಿಆರ್‌ಎಸ್ ಮತ್ತು ಎಂಐಎಂ ಪಕ್ಷಗಳು ಬಿಜೆಪಿಯ ಬಿ ಮತ್ತು ಸಿ ತಂಡಗಳಾಗಿವೆ ಎಂದು ಆರೋಪಿಸಿದ್ದರು.

119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30 ರಂದು ಚುನಾವಣೆ ನಿಗದಿಯಾಗಿದೆ. ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯುವ ಗುರಿ ಹೊಂದಿರುವ ಬಿಆರ್‌ಎಸ್ ಕಾಂಗ್ರೆಸ್‌ನೊಂದಿಗೆ ನೇರ ಹಣಾಹಣಿಯಲ್ಲಿದೆ. ಬಿಆರ್‌ಎಸ್‌ನ ಮೈತ್ರಿ ಪಕ್ಷವಾದ ಒವೈಸಿ ಅವರ ಎಂಐಎಂ ಹೈದರಾಬಾದ್‌ನಲ್ಲಿ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ರಾಜ್ಯದ ಉಳಿದ ಭಾಗಗಳಲ್ಲಿ ಆಡಳಿತ ಪಕ್ಷವನ್ನು ಬೆಂಬಲಿಸುತ್ತಿದೆ.

ವಿಡಿಯೊ ನೋಡಿ: ದುಡಿಯುವ ಜನರ ಮಹಾಧರಣಿ ನವೆಂಬರ್ 26 ರಿಂದ 28 Janashakthi Media

Donate Janashakthi Media

Leave a Reply

Your email address will not be published. Required fields are marked *