ಕವಿತಾಳ | ಕೇಂದ್ರ ಗೃಹ ಸಚಿವಾಲಯದ ವಾರ್ಷಿಕ ಪ್ರಶಸ್ತಿಗೆ ಕವಿತಾಳ ಪೊಲೀಸ್‌ ಠಾಣೆ

ಕವಿತಾಳ : ಕೇಂದ್ರ ಗೃಹ ಸಚಿವಾಲಯದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ  ಪ‍ಟ್ಟಣದ  ಕವಿತಾಳ ಪೊಲೀಸ್‌ ಠಾಣೆಯು  ಭಾಜನವಾಗಿದೆ. ದೇಶದ ಅತ್ಯುತ್ತಮ ಪೊಲೀಸ್‌ ಠಾಣೆಗಳ ಪಟ್ಟಿಯಲ್ಲಿ ಕವಿತಾಳ ಪೊಲೀಸ್‌ ಠಾಣೆಯು ತೃತೀಯ ಸ್ಥಾನ ಪಡೆದಿದೆ.

ಇದನ್ನೂ ಓದಿ : ನಕಲಿ ವೈದ್ಯ ನೇಮಿಸಿಕೊಳ್ಳುವ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ: ರಾಜ್ಯ ಸರ್ಕಾರ

ಮಹಿಳಾ ದೂರುದಾರರಿಂದ ದೂರು ಸ್ವೀಕೃತಿ, ಪ್ರಕರಣ ದಾಖಲು, ಸಾರ್ವಜನಿಕರಿಗೆ ಠಾಣಾಧಿಕಾರಿ ಮತ್ತು ಸಿಬ್ಬಂದಿ ಸ್ಪಂದನೆ, ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ತಡೆ, ಉತ್ತಮ ಪರಿಸರ, ಸ್ವಚ್ಛತೆ, ಮೂಲಸೌಲಭ್ಯ ಸೇರಿದಂತೆ ಜನಸ್ನೇಹಿ ವ್ಯವಸ್ಥೆ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದೆ.

ಪ್ರಾಥಮಿಕ ಹಂತದಲ್ಲಿ ಪ್ರಶಸ್ತಿಗೆ ಪರಿಗಣಿಸಲಾದ 78 ಪೊಲೀಸ್‌ ಠಾಣೆಗಳ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯ ಕವಿತಾಳ, ಬಳಗಾನೂರು ಮತ್ತು ಬಳ್ಳಾರಿ ಜಿಲ್ಲೆಯ ಸಿರಗೇರಿ ಠಾಣೆಗಳನ್ನು ಗುರುತಿಸಲಾಗಿತ್ತು. ಅಂತಿಮ ಪಟ್ಟಿಯಲ್ಲಿ ಕವಿತಾಳ ಠಾಣೆ ತೃತೀಯ ಸ್ಥಾನ ಪಡೆದಿದೆ.

ನ. 28ರಂದು ಛತ್ತೀಸಗಡದ ರಾಯಪುರದಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಆಯಾ ಠಾಣಾಧಿಕಾರಿಗಳಿಗೆ ಪ್ರಶಸ್ತಿ ವಿತರಿಸಲಿದ್ದು, ಕವಿತಾಳ ಠಾಣೆ ಎಸ್‌ಐ ಗುರುಚಂದ್ರ ಯಾದವ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಇದನ್ನೂ ನೋಡಿ : ಕಡಲೆಕಾಯಿ ಪರಿಷೆಗೆ ಶೃಂಗಾರಗೊಳ್ಳುತ್ತಿದೆ ಬಸವನಗುಡಿ |17 ರಿಂದ 21 | Janashakthi Media| #kadalekaiparishe

Donate Janashakthi Media

Leave a Reply

Your email address will not be published. Required fields are marked *