ಉಡುಪಿ :ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇಂದು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಹಣದಿಂದ ಖಾಸಗಿ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ವಿರೋಧಿಸಿ ಸಿಐಟಿಯು ಸಂಯೋಜಿತ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ದಿಡೀರ್ ಧರಣಿ ನಡೆಸಿದರು.
ಧರಣಿಯನ್ನು ಉದ್ದೇಶಿಸಿ ಸಂಘದ ಅಧ್ಯಕ್ಷ ಸುರೇಶ್ ಕಲ್ಲಾಗರ ಮಾತನಾಡಿ, ಕಳೆದ ವರ್ಷ ಕಟ್ಟಡ ಕಾರ್ಮಿಕರ ವೈದ್ಯಕೀಯ ತಪಾಸಣೆ ನಡೆಸಿದೆ ಬಹುತೇಕ ಮಂದಿಗೆ ಇದರಿಂದ ಪ್ರಯೋಜನ ಆಗಿಲ್ಲ ಕೆಲವು ಮಂದಿಗೆ 6-7 ತಿಂಗಳ ನಂತರ ವರದಿ ಬಂದಿದೆ.ಇಂದಿಗೂ ಕಟ್ಟಡ ಕಾರ್ಮಿಕರು ಗಂಭೀರ ಕಾಯಿಲೆಗಳಿಂದ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದರೆ ಸಾವಿರಾರೂ ರೂಪಾಯಿಗಳ ಬಿಲ್ ಗಳಿಗೆ ರೂ,700-800 ಮಂಜೂರು ಮಾಡುತ್ತಿದೆ.ಒಬ್ಬ ಕಟ್ಟಡ ಕಾರ್ಮಿಕನ ಇಲಿ ಜ್ವರಕ್ಕೆ ಖಾಸಗಿ ಆಸ್ಪತ್ರೆ ರೂ 7ಲಕ್ಷ ಹಣ ವಸೂಲಿ ಮಾಡಿದೆ ಆದರೆ ಮಂಡಳಿ ಅವನ ಅರ್ಜಿ ಕ್ಲೈಮ್ ಮಾಡದೇ ತಿರಸ್ಕರಿಸಿ ಆದೇಶ ನೀಡಿದೆ ಎಂದು ಆರೋಪಿಸಿದರು.
ಕಾಯಿಲೆ ಮಾತ್ರ ಕಂಡುಹಿಡಿಯುವ ತಪಾಸಣೆಗೆ ಅದರ ವೆಚ್ಚ ಭರಿಸಲು ಮಂಡಳಿ ನಾನಾ ಅಡ್ಡಿಗಳನ್ನು ಮಾಡುತ್ತಿದೆ ಆದುದರಿಂದ ಕಟ್ಟಡ ಕಾರ್ಮಿಕರ ವೈದ್ಯಕೀಯ ವೆಚ್ಚ ಹೆಚ್ಚಳ ಮಾಡಿ ಎಂದು ಕಾರ್ಮಿಕ ಸಂಘಟನೆಗಳು ಮಂಡಳಿಗೆ ಹಲವಾರು ಬಾರಿ ಮನವಿ ಮಾಡಿ ಹೋರಾಟ ನಡೆಸಿದರೂ ಜಾರಿ ಮಾಡಿಲ್ಲ. ಆದರೆ ಖಾಸಗಿ ಆಸ್ಪತ್ರೆಗಳಿಗೆ ತಪಾಸಣೆ ಹೆಸರಿನಲ್ಲಿ ಸುಮಾರು 600 ಕೋಟಿ ನೀಡಿರುವುದು ಸರಿಯಲ್ಲ ಹೀಗಾಗಿ ನಮ್ಮ ಸಂಘವು ಜಿಲ್ಲೆಯ ಎಲ್ಲಾ ಕಾರ್ಮಿಕರು ಆರೋಗ್ಯ ತಪಾಸಣೆ ಬಹಿಷ್ಕರಿಸಲು ಕರೆ ನೀಡಿದ್ದೇವೆ ಎಂದು ಹೇಳಿದರು.
ಸಂಘದ ಕರೆಗೆ ಕಟ್ಟಡ ಕಾರ್ಮಿಕರು ಉತ್ತಮ ಪ್ರತಿಕ್ರಿಯೆ ನೀಡಿದ ಪರಿಣಾಮ ಒಬ್ಬರೂ ತಪಾಸಣೆ ಮಾಡಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ. ಆಸ್ಪತ್ರೆ ಸಿಬ್ಬಂದಿಗಳು ಮಧ್ಯಾಹ್ನ ನಂತರ ಸಭಾಂಗಣಕ್ಕೆ ಬೀಗ ಹಾಕಿ ಸಂಜೆ ವರೆಗೂ ಬರಲಿಲ್ಲ.
ದಿಢೀರ್ ಪ್ರತಿಭಟನೆಯಲ್ಲಿ
ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ, ಗುಜ್ಜಾಡಿ ಘಟಕದ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಕಾರ್ಯದರ್ಶಿ ಸಂತೋಷ್ , ತಿಮ್ಮಪ್ಪ , ಶೀನಪ್ಪ,ಕುಂದಾಪುರ ಸಂಘದ ಗೌರವ ಅಧ್ಯಕ್ಷ ಚಿಕ್ಕ ಮೊಗವೀರ, ಕಾರ್ಯದರ್ಶಿ ಅರುಣ್ ಕುಮಾರ್, ಉಪಾಧ್ಯಕ್ಷ ಚಂದ್ರಶೇಖರ ವಿ ಗುಜ್ಜಾಡಿ ಗ್ರಾಮದ ಕಾರ್ಮಿಕರು ಇದ್ದರು.