ಕಟ್ಟಡ ನಿರ್ಮಾಣದ ವೇಳೆ ಗೋಡೆ ಅಗೆಯುತ್ತಿರುವಾಗ ಗೋಡೆ ಕುಸಿದ ಕಟ್ಟಡ ಕಾರ್ಮಿಕನೋರ್ವ ಗಾಯಗೊಂಡಿರುವ ಘಟನೆ ನಡೆದಿದೆ. ಕಟ್ಟಡ
ನೆಟ್ಕಲ್ಲಪ್ಪ ವೃತ್ತದ ಮಲ್ಲಿಕಾರ್ಜುನ ರಸ್ತೆಯಲ್ಲಿರುವ ಕಟ್ಟಡ ಕಾಮಗಾರಿ ಕೆಲಸ ಕಳೆದೊಂದು ತಿಂಗಳಿಂದ ನಡೆಯುತ್ತಿತ್ತು. ನಿತ್ಯದಂತೆ ಕೆಲಸ ನಡೆದಿತ್ತು, ಸಂಜೆಯ ವೇಳೆಗೆ ಗೋಡೆ ಏಕಾ ಏಕಿ ಕುಸಿದು ನಾಲ್ವರು ಕಾರ್ಮಿಕರು ಮಣ್ಣಿನಲ್ಲಿ ಸಿಲುಕಿದರು. ತಕ್ಷಣವೇ ಜೊತೆಗಿದ್ದವರು ಸಹಾಯ ಮಾಡಿದ್ದರಿಂದ ಗಂಭೀರ ಗಾಯಗಳಾಗದಿದ್ದರೂ ಕಾಲಿಗೆ ಹಾಗೂ ಬೆನ್ನಿಗೆ ಏಟುಗಳು ಬಿದ್ದಿವೆ. ಶರಣಪ್ಪ ಎಂಬ ಕಟ್ಟಡ ಕಾರ್ಮಿಕ ತೆಗ್ಗುಗುಂಡಿಗೆ ಬಿದ್ದ ಪರಿಣಾಮ ಅವರನ್ನು ರಕ್ಷಿಸಲು ಸ್ವಲ್ಪ ಸಮಯ ಬೇಕಾಯಿತು ಎಂದು ಜೊತೆಗಿದ್ದ ಕಟ್ಟಡ ಕಾರ್ಮಿಕರು ಜನಶಕ್ತಿ ಮೀಡಿಯಾಗೆ ತಿಳಿಸಿದ್ದಾರೆ. ಕಟ್ಟಡ
ಇದನ್ನೂ ಓದಿ : ಹಾಸನ| ಮೈಕ್ರೋ ಫೈನಾನ್ಸ್ ಹಾಕಿದ್ದ ಬೀಗ ಒಡೆದ ರೈತ ಸಂಘ
ಈ ಕಟ್ಟಡವು ಕಮಲ್ ಜೈನ್ ಎನ್ನುವವರಿಗೆ ಸೇರಿದ್ದು ಅವರು ಗಾಂಧೀ ಬಜಾರಿನಲ್ಲಿ ಡ್ರೈ ಪ್ರುಟ್ಸ್ ವ್ಯಾಪಾರಿಯಾಗಿದ್ದಾರೆ. ತಕ್ಷಣವೇ ಪೊಲೀಸರು ಹಾಗೂ ಅಗ್ನಿ ಶಾಮಕದಳದವರು ಆಗಮಿಸಿದ್ದರಿಂದ ದೊಡ್ಡ ದುರುಂತ ತಪ್ಪಿದೆ. ಕಟ್ಟಡ ಮಾಲೀಕ ಕಮಲ್ ಜೈನ್ ಹಾಗೂ ಇಂಜನೀಯರ್ ನಿರ್ಲಕ್ಷ್ ಈ ಘಟನೆಗೆ ಕಾರಣವಾಗಿದ್ದು ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಸಿಐಟಿಯು ಸಂಯೋಜಿತ ಕರ್ನಾಟ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷರಾದ ಕೆ.ಎಸ್.ಲಕ್ಷ್ಮೀ ಹೇಳಿದ್ದಾರೆ. ಕಾರ್ಮಿಕನ ಸಂಪೂರ್ಣ ವೈದ್ಯಕೀಯ ವೆಚ್ಚಗಳನ್ನು ಭರಿಸಬೇಕು, ಆರೈಕೆಯ ಅವಧಿಯ ಕುಟುಂಬ ನಿರ್ವಹಣೆ ಮತ್ತು ಚಿಕಿತ್ಸಾವೆಚ್ಚಗಳನ್ನು ಭರಿಸಬೇಕು, ವೈದ್ಯಕೀಯ ವರದಿಗಳನ್ನು ಆಧರಿಸಿ ಪರಿಹಾರ ಕ್ರಮಗಳಿಗೆ ಮುಂದಾಗಬೇಕು ಎಂದು ಒತ್ತಾಯಿಸಲಾಗಿದೆ. ಈ ವೇಳೆ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷರಾದ ಮೀನಾಕ್ಷಿ ಬಾಳಿ ಇದ್ದರು. ಕಟ್ಟಡ
ಸ್ಥಳಕ್ಕೆ ಜಯನಗರ ವಲಯದ ಸಹಾಯಕ ಪೊಲೀಸ್ ಆಯುಕ್ತರಾದ ನಾರಾಯಣಸ್ವಾಮಿಯವರು ಭೇಟಿ ನೀಡಿದರು. ಭಾರತಿ ನರ್ಸಿಂಗ್ ಹೋಮ್‌ಗೆ ದಾಖಲಿಸಿಲಾಗಿದೆ, ಕಟ್ಟಡ ಮಾಲೀಕ ಹಾಗೂ ಇಂಜನೀಯರ್ ಕ್ರಮ ಜರುಗಿಸುವುದಾಗಿ ಜನಶಕ್ತಿ ಮೀಡಿಯಾಗೆ ತಿಳಿಸಿದರು.