ಎರಡು ವರ್ಷಗಳ ಕಾಲ ಬಂಧನದಲ್ಲಿದ್ದ ಕಾಶ್ಮೀರಿ ಪತ್ರಕರ್ತ ಫಹಾದ್ ಶಾ ಮರಳಿ ಮನೆಗೆ!

ಶ್ರೀನಗರ: ಸುಮಾರು ಎರಡು ವರ್ಷಗಳ ಕಾಲ ಜೈಲಿನಲ್ಲೆ ಕಾಲ ಕಳೆದ ಕಾಶ್ಮೀರಿ ಪತ್ರಕರ್ತ ಫಹಾದ್ ಶಾ ಅವರು ನವೆಂಬರ್ 23 ರ ಗುರುವಾರ ಮನೆಗೆ ಮರಳಿದ್ದಾರೆ. ಭಯೋತ್ಪಾದನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಅವರಿಗೆ ಜಮ್ಮು ಕಾಶ್ಮೀರ ಹೈಕೋರ್ಟ್ ಕಳೆದ ವಾರ ಜಾಮೀನು ನೀಡಿತ್ತು. 2011 ರಲ್ಲಿ ತಮ್ಮ ಸುದ್ದಿವಾಹಿನಿಯಾದ ದಿ ಕಾಶ್ಮೀರ್ ವಾಲಾದಲ್ಲಿ ಲೇಖನವನ್ನು ಪ್ರಕಟಿಸಿದ್ದಕ್ಕಾಗಿ ಭಯೋತ್ಪಾದನೆ ಆರೋಪದ ಮೇಲೆ ಫಹಾದ್ ಅವರನ್ನು ಜಮ್ಮು ಕಾಶ್ಮೀರ ಪೊಲೀಸ್ ರಾಜ್ಯ ತನಿಖಾ ಸಂಸ್ಥೆ ಬಂಧಿಸಿತ್ತು. ಅದಾಗ್ಯೂ, ಈ ವರ್ಷದ ಆರಂಭದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅವರ ವೆಬ್‌ಸೈಟ್‌ ಅನ್ನು ನಿಷೇಧಿಸಲಾಯಿತು.

ವಿವಾದಾತ್ಮಕ ಲೇಖನದ ಪ್ರಕಟಿಸಿರುವುದನ್ನು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದೊಂದಿಗೆ ಸಮೀಕರಿಸುವ ಸಂದರ್ಭದ ವೇಳೆ ಫಹಾದ್ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)-1967 ರ ಅಡಿಯಲ್ಲಿ ದಾಖಲಿಸಲಾದ ದೇಶದ ವಿರುದ್ಧ ಭಯೋತ್ಪಾದಕ ಪಿತೂರಿ ಮತ್ತು ಯುದ್ಧದ ಆರೋಪಗಳನ್ನು ಹೈಕೋರ್ಟ್ ತಳ್ಳಿಹಾಕಿತು.

ಇದನ್ನೂ ಓದಿ: ಜಾತಿ ಗಣತಿ ಮೂಲ ವರದಿ ನಾಪತ್ತೆ ವಿವಾದ | ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹೇಳಿದ್ದೇನು?

11 ವರ್ಷಗಳ ಹಿಂದಿನ ಲೇಖನಕ್ಕಾಗಿ ಫಹದ್ ವಿರುದ್ಧ ಭಯೋತ್ಪಾದನೆಯ ಆರೋಪಗಳನ್ನು ಹೊರಿಸಿರುವುದು “ಸಂವಿಧಾನದ 19 ನೇ ವಿಧಿಯಲ್ಲಿ ಪ್ರತಿಪಾದಿಸಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲೇಂಘನೆ” ಎಂದು ಹೈಕೋರ್ಟ್ ವಿಭಾಗೀಯ ಪೀಠವು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ (ಸಿಪಿಜೆ), ಫಹಾದ್ ಷಾ ಅವರ ಬಿಡುಗಡೆಯನ್ನು ಸ್ವಾಗತಿಸುವುದಾಗಿ ಹೇಳಿದೆ. ಜೊತೆಗೆ ಕಾಶ್ಮೀರ ವಾಲಾ ಮೇಲಿನ ನಿಷೇಧವನ್ನು ತೆಗೆದುಹಾಕುವಂತೆ ಅಧಿಕಾರಿಗಳನ್ನು ಅದು ಒತ್ತಾಯಿಸಿದೆ.

ಇದನ್ನೂ ಓದಿ: ತೆಲಂಗಾಣ | ಕಾಂಗ್ರೆಸ್‌ಗೆ ಕೇವಲ 20 ಸ್ಥಾನ ಎಂದ ಕೆಸಿಆರ್; 80 ಕ್ಕಿಂತ ಹೆಚ್ಚು ಎಂದ ಕಾಂಗ್ರೆಸ್‌ ಅಧ್ಯಕ್ಷ

“ಕಾಶ್ಮೀರಿ ಪತ್ರಕರ್ತ ಫಹಾದ್ ಶಾ ಭಯೋತ್ಪಾದನೆ ಆರೋಪದ ಮೇಲೆ ಸುಮಾರು ಎರಡು ವರ್ಷಗಳ ಬಂಧನದ ನಂತರ ಗುರುವಾರ ಮನೆಗೆ ಮರಳಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದನ್ನು ಸಿಪಿಜೆ ಸ್ವಾಗತಿಸುತ್ತದೆ. ಶಾ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಡಬೇಕು ಮತ್ತು ಅವರ ಪ್ರಕಾಶನ ದಿ ಕಾಶ್ಮೀರ್ ವಾಲಾ ಮೇಲೆ ನಿಷೇಧವನ್ನು ಹಿಂಪಡೆಯಬೇಕು” ಎಂದು ಸಿಪಿಜೆ ಏಷಿಯಾ ಹೇಳಿದೆ.

“ದಿ ಕಾಶ್ಮೀರ್ ವಾಲಾ ಅವರ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ಭಾರತ ಸರ್ಕಾರದ ಅನಿಯಂತ್ರಿತ ನಿಷೇಧವು ಈ ಪ್ರದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಹೊಸ ಹಿನ್ನಡೆಯಾಗಿದೆ. ಭಾರತ ಸರ್ಕಾರವು ತಾನು ಪ್ರಜಾಪ್ರಭುತ್ವ ಎಂದು ಗಂಭೀರವಾಗಿ ಪರಿಗಣಿಸುವುದಿದ್ದರೆ, ಅದು ತಕ್ಷಣವೇ ಕಾಶ್ಮೀರ ವಾಲಾ ಅವರ ವೆಬ್‌ಸೈಟ್ ಮತ್ತು ಖಾತೆಗಳನ್ನು ಮರುಸ್ಥಾಪಿಸಬೇಕು. ಕಾಶ್ಮೀರದಲ್ಲಿ ಪತ್ರಕರ್ತರ ಮೇಲೆ ನಡೆಸುತ್ತುರುವ ಕಿರುಕುಳ ಮತ್ತು ಬಂಧನವನ್ನು ಕೊನೆಗೊಳಿಸಬೇಕು” ಎಂದು ಕೌಲಾಲಂಪುರ್‌ನಲ್ಲಿ ಸಿಪಿಜೆಯ ಏಷ್ಯಾ ಪ್ರೋಗ್ರಾಂ ಸಂಯೋಜಕ ಬೆಹ್ ಲಿಹ್ ಯಿ ಒತ್ತಾಯಿಸಿದ್ದಾರೆ.

ವಿಡಿಯೊ ನೋಡಿ: ರಾಜ್ಯದಲ್ಲಿ ಸರ್ಕಾರ ಬದಲಾಗಿದೆ, ನಿಲುವುಗಳಲ್ಲಿ ಬದಲಾವಣೆ ಇಲ್ಲ – ಬಿ.ಸುರೇಶ್‌ Janashakthi Media

Donate Janashakthi Media

Leave a Reply

Your email address will not be published. Required fields are marked *