ಇದು ಕಾಶ್ಮೀರಿ ಜನರ ಸಮಸ್ಯೆಯಷ್ಟೇ ಅಲ್ಲ,ಇಡೀ ದೇಶದ ಸಮಸ್ಯೆ : ತಾರಿಗಾಮಿ

ಸಂದರ್ಶಕರು:ಕಳಪ್ಪಿರನ್
(ಕನ್ನಡಕ್ಕೆ: ಸಿ. ಸಿದ್ದಯ್ಯ)

ಪ್ರತಿ ರಾಜ್ಯಕ್ಕೆ ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಒಂದೊಂದಾಗಿ ಕಸಿದು ಕೊಳ್ಳುತ್ತಿದೆ.  ಇದು ಎಲ್ಲ ರಾಜ್ಯಗಳಲ್ಲೂ ನಡೆಯುತ್ತಿದೆ. ಇಂದು ಸ್ವತಂತ್ರ ಪತ್ರಿಕಾ ಮಾಧ್ಯಮ ಎಲ್ಲಿದೆ? ಸ್ವಾಯತ್ತ ಚುನಾವಣಾ ಆಯೋಗ ಇಂದು ಎಲ್ಲಿದೆ? ಹೀಗೆ ಪ್ರತಿಯೊಂದು ವ್ಯವಸ್ಥೆಯೂ ಅವರು ಶಿಥಿಲವಾಗುತ್ತಿದೆ. ಹಾಗಾಗಿ ಇದು ಕಾಶ್ಮೀರಿ ಜನರ ಸಮಸ್ಯೆ ಅಲ್ಲ. ಇಡೀ ದೇಶದ ಸಮಸ್ಯೆ ಎನ್ನುತ್ತಾರೆ ಜಮ್ಮು ಮತ್ತು ಕಾಶ್ಮೀರದ ಒಬ್ಬ ಹಿರಿಯ ಮುಖಂಡ ಮುಹಮ್ಮದ್ ಯೂಸುಫ್ ತಾರಿಗಾಮಿ. 

ಮುಹಮ್ಮದ್‌ ಯೂಸುಫ್ ತಿರಿಗಾಮಿ ಅವರೊಡನೆ ಒಂದು ಸಂದರ್ಶನ

ಪ್ರಶ್ನೆ: 370 ನೇ ವಿಧಿಯನ್ನು ರದ್ದುಗೊಳಿಸಿ ಐದು ವರ್ಷಗಳು ಕಳೆದಿವೆ.

ಕಾಶ್ಮೀರದ ಜನರು ಈಗ ಇದರ ಬಗ್ಗೆ ಏನೆನ್ನುತ್ತಾರೆ?  

#ಇದು ನಿಜಕ್ಕೂ ಇಡೀ ಕಾಶ್ಮೀರದ ಜನತೆಗೆ ದೊಡ್ಡ ಆಘಾತವಾಗಿದೆ. ಒಕ್ಕೂಟ ಸರ್ಕಾರದ ಈ ಕ್ರಮಗಳು ನಮ್ಮ ಆತ್ಮವಿಶ್ವಾಸವನ್ನು ಸಂಪೂರ್ಣವಾಗಿ ಛಿದ್ರಗೊಳಿಸಿವೆ. ಇಂತಹ ಘಟನೆ ನಡೆಯುತ್ತದೆ ಎಂದು ನಾವ್ಯಾರೂ ನಿರೀಕ್ಷಿಸಿರಲಿಲ್ಲ. ಭಾರತದ ಪ್ರತಿಯೊಂದು ರಾಜ್ಯವೂ ವಿಶಿಷ್ಟವಾಗಿದೆ. ತಮಿಳು ಪ್ರಾಚೀನ ಶ್ರೀಮಂತ ಭಾಷೆ. ಅದಕ್ಕೊಂದು ವಿಶಿಷ್ಟವಾದ ಆಲೋಚನಾ ಪರಂಪರೆ, ವಿಶಿಷ್ಟವಾದ ಜೀವನ ವಿಧಾನವಿದೆ. ತಮಿಳುನಾಡು ಭಾಷೆ ಮತ್ತು ಜನಾಂಗೀಯ ಗುರುತನ್ನು ಹೊಂದಿರುವಂತೆ, ಕಾಶ್ಮೀರಿಗಳು ತಮ್ಮದೇ ಆದ ಗುರುತನ್ನು ಹೊಂದಿದ್ದಾರೆಂದು ಪರಿಗಣಿಸುತ್ತಾರೆ. ಇದು ಭಾರತದ ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತದೆ. ಅದಕ್ಕಾಗಿಯೇ ಸಂವಿಧಾನವು ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ವ್ಯಾಖ್ಯಾನಿಸುತ್ತದೆ.ನಮಗೆ ಹತ್ತಿರವಿರುವ ಹಿಮಾಚಲ ಪ್ರದೇಶದಲ್ಲಿ ಸಂವಿಧಾನದ 371ನೇ ಪರಿಚ್ಛೇದದ ಅಡಿಯಲ್ಲಿ ವಿದೇಶಿಗರು ಅಲ್ಲಿ ಭೂಮಿ ಖರೀದಿಸುವಂತಿಲ್ಲ ಎಂಬ ಕಾನೂನು ರಕ್ಷಣೆ ಇದೆ. ಈ ಕಾನೂನು ರಕ್ಷಣೆಯು ಈಶಾನ್ಯ ರಾಜ್ಯಗಳಾದ್ಯಂತ ಇನ್ನೂ ಜಾರಿಯಲ್ಲಿದೆ. ಭಾರತದ ಸಂವಿಧಾನದಲ್ಲಿ ಇಂತಹ ಷರತ್ತುಗಳನ್ನು ಸೇರಿಸಲು ಕಾರಣವೆಂದರೆ ಪ್ರತಿ ವಿಭಾಗದ ಜನರ ಭಿನ್ನತೆಯನ್ನು ರಕ್ಷಿಸುವ ಸಂವಿಧಾನ ಸಭೆಯ ಉನ್ನತ ಉದ್ದೇಶವಾಗಿದೆ. ಕಾಶ್ಮೀರವು ಇವುಗಳಿಗಿಂತ ಹೆಚ್ಚು ವಿಶಿಷ್ಟವಾಗಿದೆ. 1927 ರಲ್ಲಿ, ಕಾಶ್ಮೀರ ಪ್ರತ್ಯೇಕ ರಾಜ್ಯವಾಗಿದ್ದಾಗ, ಭಾರತ ಮತ್ತು ಪಾಕಿಸ್ತಾನದ ಎರಡು ರಾಷ್ಟ್ರಗಳ ಪರಿಕಲ್ಪನೆಯ ಮೊದಲು ಕಾಶ್ಮೀರವನ್ನು ಆಳಿದ ಹಿಂದೂ ರಾಜ ಹರಿ ಸಿಂಗ್, ಕಾಶ್ಮೀರದ ವಿಶಿಷ್ಟತೆಯನ್ನು ರಕ್ಷಿಸಲು, ಕಾಶ್ಮೀರದ ಹೊರಗಿನ ಜನರು ಕಾಶ್ಮೀರದಲ್ಲಿ ಭೂಮಿ ಖರೀದಿಸುವುದನ್ನು ನಿಷೇಧಿಸುವ ಕಾನೂನನ್ನು ಹೊರಡಿಸಿದರು. ಜೊತೆಗೆ, ಕಾಶ್ಮೀರಿಗಳ ಗುರುತನ್ನು ರಕ್ಷಿಸಲು ಕಾಶ್ಮೀರಕ್ಕೆ ವಿಶಿಷ್ಟವಾದ ಅನೇಕ ಕಾನೂನುಗಳಿದ್ದವು.1947 ರಲ್ಲಿ ಕಾಶ್ಮೀರವನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದಾಗ, ಕಾಶ್ಮೀರದ ಸ್ವಾತಂತ್ರ್ಯವನ್ನು ಸಂರಕ್ಷಿಸಲಾಗುವುದು ಎಂಬ ಭರವಸೆಯೊಂದಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಯಿತು. ಕಾಶ್ಮೀರಿ

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಎನ್ನುವುದು ಯಾರೋ ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಹುಟ್ಟಿಕೊಂಡ ವಿಷಯವಲ್ಲ. ಇಡೀ ಸಂವಿಧಾನ ಸಭೆಯು ಚರ್ಚಿಸಿ ಸರ್ವಾನುಮತದಿಂದ ಒಪ್ಪಿಗೆ ನೀಡಿದ ವಿಷಯವಾಗಿತ್ತು. ಈಗ ಎಲ್ಲರೂ ನೆಹರೂ ಅವರನ್ನು ದೂಷಿಸುತ್ತಾರೆ. ವಿಶೇಷ ಸ್ಥಾನಮಾನದ ಚರ್ಚೆಯಲ್ಲಿ ನೆಹರೂ ಮಾತನಾಡಲಿಲ್ಲ. ಅವರು ವಿದೇಶದಲ್ಲಿದ್ದರು. ಗೃಹ ಸಚಿವ ವಲ್ಲಭಭಾಯಿ ಪಟೇಲ್ ನೇತೃತ್ವದ ಭಾರತದ ಕೇಂದ್ರ ಸಚಿವಾಲಯ ಇದನ್ನು ಚರ್ಚಿಸಿ ಅನುಮೋದನೆ ನೀಡಿತು. ಸಚಿವಾಲಯದಲ್ಲಿ ಹಿಂದೂ ಕಾರ್ಯಕರ್ತ ಶ್ಯಾಮ್ ಪ್ರಸಾದ್ ಮುಖರ್ಜಿ ಕೂಡ ಸೇರಿದ್ದರು. ಆಗ ಅವರು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿರಲಿಲ್ಲ. ಅಲ್ಲದೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಬದಲಿಗೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಸ್ವಾಗತಿಸಿದರು.ಆದರೆ ಇಂದು ನೀವು ವಿಧಿ 370 ರ ವಿರುದ್ಧ ಮಾತನಾಡಿದರೆ ಅದು ದೇಶ-ವಿರೋಧಿ ಎಂದು ಅವರು ಹೇಳುತ್ತಾರೆ. ಆದರೆ 1947 ರಲ್ಲಿ ಅದೇ ಷರತ್ತು ರಾಷ್ಟ್ರೀಯ ಏಕತೆಯ ಸಂಕೇತವಾಗಿ ಮತ್ತು ದೇಶಭಕ್ತಿಯ ಕಾಯಿದೆಯಾಗಿ ಕಂಡುಬಂದಿತು. ಇದು ಎರಡು ರಾಷ್ಟ್ರಗಳನ್ನು ಸಂಪರ್ಕಿಸುವ ಸೇತುವೆ ಎಂದು ಪರಿಗಣಿಸಲಾಗಿದೆ. ಇಂದು ಇತಿಹಾಸವನ್ನು ತಿರುಚಿ ಸುಳ್ಳನ್ನು ಹಬ್ಬಿಸುತ್ತಿದ್ದಾರೆ. ಅವರು ಭಾರತದ ಜನರನ್ನು ಗೊಂದಲಗೊಳಿಸುತ್ತಿದ್ದಾರೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವು ಭಾರತದ ಸಂವಿಧಾನ ಸಭೆಯ ಮಗುವಾಗಿದೆ. 2019ರಲ್ಲಿ, ಅವರು ಭಾರತ ರಾಷ್ಟ್ರಕ್ಕೆ ಜನಿಸಿದ ಮಗುವಿನ ಕತ್ತ್ನು ಕ್ರೂರವಾಗಿ ಕೊಂದರು.

ಪ್ರಶ್ನೆ: ಕಾಶ್ಮೀರದ ಸ್ಥಾನಮಾನವನ್ನು ಇಡೀ ದೇಶದ ಸಮಸ್ಯೆ ಎಂದು ಕಿತ್ತುಕೊಳ್ಳಲಾಗಿದೆ 

ಎಂದು ವಿರೋಧ ಪಕ್ಷಗಳು ಹೇಳುತ್ತವೆ!

#ಆಗಸ್ಟ್ 5,2019 ರಂದು ಸಂಸತ್ತಿನಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಾನೂನುಬಾಹಿರವಾಗಿ ರದ್ದುಗೊಳಿಸಿದ ನಂತರ, ಅವರು ಮೊದಲು ಕಾಶ್ಮೀರದಾದ್ಯಂತ ಎಲ್ಲಾ ಮೊಬೈಲ್ ಮತ್ತು ದೂರವಾಣಿ ಸಂಪರ್ಕಗಳನ್ನು ಕಡಿತಗೊಳಿಸಿದರು. ಅವರು ಇಂಟರ್ನೆಟ್ ಅನ್ನು ಸಂಪೂರ್ಣವಾಗಿ ನಿಷೇಧಿಸಿದರು. ಕಾಶ್ಮೀರದಲ್ಲಿ ರೋಗಿಯೂ ತನ್ನ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗದಂತಹ ವಾತಾವರಣವನ್ನು ಸೃಷ್ಟಿಸಿದರು. ಆಸ್ಪತ್ರೆಯಲ್ಲಿರುವ ಯಾವುದೇ ರೋಗಿಗಳು ತಮ್ಮ ಮನೆಯನ್ನು ಸಂಪರ್ಕಿಸಲು ಸಾಧ್ಯವಾಗದ ವಾತಾವರಣವನ್ನು ಅವರು ನಿರ್ಮಿಸಿದರು. ಅವರು ಬಹುತೇಕ ಇಡೀ ಕಾಶ್ಮೀರವನ್ನು ಬಯಲು ಕಾರಾಗೃಹವನ್ನಾಗಿ ಮಾಡಿದರು. ಅವರು ನಮ್ಮೆಲ್ಲರನ್ನು ಮಿಲಿಟರಿ ಮುತ್ತಿಗೆಗೆ ಒಳಪಡಿಸಿದರು ಮತ್ತು ನಮ್ಮ ಹಿತಾಸಕ್ತಿಗಳ ಬಗ್ಗೆ ಸಂಸತ್ತಿಗೆ ನಾಚಿಕೆಯಿಲ್ಲದೆ ಸುಳ್ಳು ಹೇಳಿದರು.
ಅವರು ನಮ್ಮ ವಾದಗಳ ಎಲ್ಲಾ ಬಾಗಿಲುಗಳನ್ನು ಮುಚ್ಚಿದ್ದರು. ಆಗ ಇಲ್ಲಿ ವಿಧಾನಸಭೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಭಾರತೀಯ ರಾಷ್ಟ್ರೀಯ ಸರ್ಕಾರವು ನಮ್ಮ ಬಗ್ಗೆ ಏನು ಮಾತನಾಡುತ್ತಿದೆ ಎಂದು ಕೇಳಲು ಅವರು ನಮಗೆ ಯಾವುದೇ ಅವಕಾಶವನ್ನು ನೀಡಲಿಲ್ಲ. ಅವರು ನಮಗೆ ಒಂದೇ ಒಂದು
ಪ್ರಜಾಸತ್ತಾತ್ಮಕ ಹಕ್ಕನ್ನು ನೀಡಲು ನಿರಾಕರಿಸಿದರು ಮತ್ತು ತಮ್ಮನ್ನು ತಾವು ವಿಶ್ವದ ಶ್ರೇಷ್ಠ ಪ್ರಜಾಪ್ರಭುತ್ವ ದೇಶವೆಂದು ಕರೆದುಕೊಂಡರು. ಇದು ಕಾಶ್ಮೀರದ ಜನರ ಹಕ್ಕುಚ್ಯುತಿ ಎಂದು ನಾನು ಭಾವಿಸುವುದಿಲ್ಲ. ಇದು ಭಾರತ ಗಣರಾಜ್ಯಕ್ಕೆ ಮಾಡಿದ ಅವಮಾನ ಎಂದು ನಾನು ಭಾವಿಸುತ್ತೇನೆ. ಇದನ್ನು ಭಾರತದ
ಜನರು ಅರಿತುಕೊಳ್ಳಬೇಕು.

ಸೆಪ್ಟೆಂಬರ್ 2019 ರಲ್ಲಿ, ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ನ್ಯಾಯಾಲಯದ ಅನುಮತಿಯ ಮೂಲಕ ನನ್ನನ್ನು ಭೇಟಿ 

ಮಾಡಿದರು ಮತ್ತು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದರು. ನಾನು ಅಂದು ಹೇಳಿದ್ದನ್ನು ಈಗ ಹೇಳುತ್ತೇನೆ, ಇದು ಭಾರತೀಯ ಸಂವಿಧಾನದ
ಮೇಲೆ ದಾಳಿ ಮಾಡುವ ಯೋಜನೆಯ ಮೊದಲ ಹೆಜ್ಜೆ, ಭಾರತೀಯ ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ದಾಳಿ ಮಾಡಿ ನಾಶಮಾಡುವ
ಮೊದಲ ಹೆಜ್ಜೆ. ಈಗ ಆಗುತ್ತಿರುವುದು ಅದೇ. ಪ್ರತಿ ರಾಜ್ಯಕ್ಕೆ ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ
ಒಂದೊಂದಾಗಿ ಕಸಿದುಕೊಳ್ಳುತ್ತಿದೆ. ತಮಿಳುನಾಡಿನಲ್ಲಿಯೂ ಅವರು ರಾಜ್ಯಪಾಲ ರವಿಯೊಂದಿಗೆ ಚುನಾಯಿತ ರಾಜ್ಯ ಸರ್ಕಾರವನ್ನು ನಿಷ್ಕ್ರಿಯಗೊಳಿಸಲು
ಪ್ರಯತ್ನಿಸುತ್ತಾರೆ. ಇದು ಎಲ್ಲ ರಾಜ್ಯಗಳಲ್ಲೂ ನಡೆಯುತ್ತಿದೆ. ಇಂದು ಸ್ವತಂತ್ರ ಪತ್ರಿಕಾ ಮಾಧ್ಯಮ ಎಲ್ಲಿದೆ? ಸ್ವಾಯತ್ತ ಚುನಾವಣಾ ಆಯೋಗ ಇಂದು ಎಲ್ಲಿದೆ? ಹೀಗೆ ಪ್ರತಿಯೊಂದು ವ್ಯವಸ್ಥೆಯೂ ಶಿಥಿಲವಾಗುತ್ತಿದೆ. ಹಾಗಾಗಿ ಇದು ಕಾಶ್ಮೀರಿ ಜನರ ಸಮಸ್ಯೆ ಅಲ್ಲ. ಇಡೀ ದೇಶದ ಸಮಸ್ಯೆ.

ಇದನ್ನೂ ಓದಿ:ಹಿಂಡೆನ್‌ಬರ್ಗ್ ನಂತರ ಒಸಿಸಿಆರ್‌ಪಿ ವರದಿ

ಪ್ರಶ್ನೆ: ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಿದ್ದು ಹೇಗೆ?

#ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಕಾಶ್ಮೀರ ಭಾರತಕ್ಕೆ ಸೇರಿರಲಿಲ್ಲ. ಬ್ರಿಟಿಷರ ಆಳ್ವಿಕೆಯಲ್ಲಿಯೂ ಇರಲಿಲ್ಲ. ಇದು ಬಹಳ ಕಾಲ ಪ್ರತ್ಯೇಕ ಗಣರಾಜ್ಯವಾಗಿ
ಉಳಿಯಿತು. ಭಾರತದ ಸ್ವಾತಂತ್ರ್ಯದ ಸಮಯದಲ್ಲಿ, ಕಾಶ್ಮೀರವು ಪ್ರತ್ಯೇಕ ಪ್ರದೇಶವಾಗಿತ್ತು, ಕಾಶ್ಮೀರದ ಅಂದಿನ ರಾಜ ಹರಿಸಿಂಗ್ ತನ್ನ ಗಡಿಯಾದ ಭಾರತ ಮತ್ತು ಪಾಕಿಸ್ತಾನದ ಎರಡು ಹೊಸ ದೇಶಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಅದಕ್ಕಾಗಿಯೇ 26 ಅಕ್ಟೋಬರ್ 1947 ರವರೆಗೆ ಕಾಶ್ಮೀರವು
ವಿಲೀನವಾಗದೆ ಪ್ರತ್ಯೇಕ ರಾಜ್ಯವಾಗಿ ಉಳಿಯಿತು. ಕಾಶ್ಮೀರವು ತನ್ನ ಗಡಿಯನ್ನು ಹೆಚ್ಚಾಗಿ ಪಾಕಿಸ್ತಾನದೊಂದಿಗೆ ಹಂಚಿಕೊಂಡಿದೆ. ಅದೇ ರೀತಿ ಕಾಶ್ಮೀರದ ಜನಸಂಖ್ಯೆಯ ಬಹುಪಾಲು ಮುಸ್ಲಿಮರು. ಹಾಗಾಗಿ ಜಿನ್ನಾ ಕಾಶ್ಮೀರ ತನಗೆ ಸೇರಬೇಕು ಎಂದು ವಿವಿಧರೀತಿಯಲ್ಲಿ ಬಲವಾಗಿ ಒತ್ತಾಯಿಸಿದರು. ಪರಿಣಾಮವಾಗಿ
ಬಿಕ್ಕಟ್ಟಿನಲ್ಲಿ, ಕಾಶ್ಮೀರದ ರಾಜ ಭಾರತವನ್ನು ಸೇರಲು ನಿರ್ಧರಿಸಿದನು. ಅವನು ಸ್ವಂತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. ಅದಕ್ಕೆ ಹಲವು
ಕಾರಣಗಳಿದ್ದವು. ಶೇಖ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಪ್ರಮುಖ ಕಾರಣವಾಗಿತ್ತು. ಕಾಶ್ಮೀರದಲ್ಲಿ ಶೇಖ್ ಅಬ್ದುಲ್ಲಾ ಅವರ ಸರ್ಕಾರದ ರಚನೆಯಲ್ಲಿ, ಕಮ್ಯುನಿಸ್ಟರು ಮಹತ್ವದ ಪಾತ್ರ ವಹಿಸಿದರು.

ಪ್ರಶ್ನೆ: ಕಾಶ್ಮೀರ ಪ್ರಜಾಪ್ರಭುತ್ವ, ಭಾರತದ ವಿಲೀನ, ವಿಶೇಷ ಸ್ಥಾನಮಾನದಲ್ಲಿ ಕಮ್ಯುನಿಸ್ಟರ ಪಾತ್ರವೇನು?

#ಕಾಶ್ಮೀರವು ರಾಜ ಸಂಸ್ಥಾನವಾಗಿದ್ದ ಅವಧಿಯಲ್ಲಿ,ಕಾಶ್ಮೀರದ ಕಮ್ಯುನಿಸ್ಟ್ ಪಕ್ಷವು ಏಕಾಂಗಿಯಾಗಿ ಕಾರ್ಯನಿರ್ವಹಿಸಲಿಲ್ಲ.ಎಲ್ಲರೂ ಶೇಖ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿಯ ಒಟ್ಟಿಗೆ ಕೆಲಸ ಮಾಡಿದರು. ಅವರ ಸಂಪುಟದಲ್ಲಿ ಕಮ್ಯುನಿಸ್ಟ್ ಬೆಂಬಲಿಗರೂ ಕೆಲಸ ಮಾಡಿದ್ದರು.ಸಂಸ್ಥಾನವಾಗಿದ್ದ ಅವಧಿಯಲ್ಲಿ,  1931 ರಲ್ಲಿ, ಶೇಖ್ ಅಬ್ದುಲ್ಲಾ ಅವರು ಕೇವಲ ಮುಸ್ಲಿಮರೊಂದಿಗೆ ರಾಜನ ವಿರುದ್ಧ ಜನರ ಮೊದಲ ಸಮ್ಮೇಳನವನ್ನು ನಡೆಸಿದರು. ಏಕೆಂದರೆ ಸಾಮಾನ್ಯ ಬಡ ಮತ್ತು ಸರಳ ಜನರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು. ಶೇಖ್ ಅಬ್ದುಲ್ಲಾ ಸ್ವಭಾವತಃ ಪ್ರಗತಿಪರರಾಗಿದ್ದರು. ಹಾಗಾಗಿ ಕಮ್ಯುನಿಸ್ಟರು ಅವರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ ನಂತರ, ಸಮ್ಮೇಳನಗಳು ಜಾತ್ಯತೀತ ಸಮ್ಮೇಳನಗಳಾಗಿ ವಿಕಸನಗೊಂಡವು. ನ್ಯಾಷನಲ್ ಕಾನ್ಫರೆನ್ಸ್ ಪಕ್ಷವೂ ಜಾತ್ಯತೀತ ಸಂಘಟನೆಯಾಗಿ ಹೊರಹೊಮ್ಮಿತು. ಪಂಜಾಬ್‌ನ ಒಡನಾಡಿಗಳು ಬಾಬಾ ಪ್ಯಾರೆ ಲಾಲ್ ಬೇಡಿ ಮತ್ತು ಅವರ ಪತ್ನಿ ಫ್ರಿಡಾ ಕೆಲಸ ಮಾಡಲು ಶ್ರೀನಗರಕ್ಕೆ ವೈಯಕ್ತಿಕವಾಗಿ ಬಂದರು. ಅವರು ಶೇಖ್ ಅಬ್ದುಲ್ಲಾ ಅವರೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಮತ್ತು ಅವರ ಸಹೋದ್ಯೋಗಿಗಳು ಒಟ್ಟಾಗಿ ಕಾಶ್ಮೀರ ರಾಜಕೀಯದ ಹೆಗ್ಗುರುತು ಆದ ದಾಖಲೆಯನ್ನು ತಯಾರಿಸಿದರು. ಅದನ್ನುಅವರು “ನಯಾ ಕಾಶ್ಮೀರ” ಅಂದರೆ ಹೊಸ ಕಾಶ್ಮೀರ ಎಂದು ಹೆಸರಿಸಿದರು.

ಇದನ್ನು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ವೇದಿಕೆಯಾಗಿ ಸಿದ್ಧಪಡಿಸಲಾಗಿತ್ತು.ಆದಸ್ತಾವೇಜನ್ನು ಪಕ್ಷದ ರಾಷ್ಟ್ರೀಯಸಮ್ಮೇಳನದಲ್ಲಿ ಮಂಡಿಸಿ ಚರ್ಚಿಸಲಾಯಿತು ಮತ್ತು ಅನುಷ್ಠಾನಕ್ಕೆ ಅಂಗೀಕರಿಸಲಾಯಿತು. ಆ ದಾಖಲೆ ಇಂದಿಗೂ ಸಾಕ್ಷಿಯಾಗಿದೆ. ಶ್ರೀನಗರಕ್ಕೆ ಬರುವವರು ನೋಡಲೇಬೇಕಾದ ಒಂದು ಸ್ಥಳದಹೆಸರು “ಲಾಲ್ ಚೌಕ್”.‘ಲಾಲ್’ ಎಂದರೆ ಕೆಂಪು, ‘ಚೌಕ್’ ಎಂದರೆ ಚೌಕ. ರಷ್ಯಾದಲ್ಲಿ ಕೆಂಪು ಚೌಕದಂತೆ ಕಾಶ್ಮೀರದಲ್ಲಿ ಕೆಂಪು ಚೌಕವನ್ನು ಸೃಷ್ಟಿಸಿದರು. ಈ ಸ್ಥಳಕ್ಕೆ ಹೆಸರು ನೀಡಿದವರು ಶೇಖ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ. ಕಾರಣ ಆ ಪಕ್ಷದಲ್ಲಿ ಆಗ ಕಮ್ಯುನಿಸ್ಟರು, ಸಮಾಜವಾದಿಗಳು ಇದ್ದರು. ನ್ಯಾಷನಲ್  ಕನ್ಫರೆನ್ಸ್ ಸ್ವತಃ ಜಾತ್ಯತೀತ ,ಪ್ರಗತಿಪರ ಪಕ್ಷವಾಗಿತ್ತು. ಆ ಹಿನ್ನೆಲೆಯಲ್ಲಿ ಭಾರತದೊಂದಿಗೆ ಕಾಶ್ಮೀರ ಒಪ್ಪಂದವಾಯಿತು. ಒಪ್ಪಂದದ ಪ್ರಕಾರ, ಕಾಶ್ಮೀರಕ್ಕೆ ವಿದೇಶಾಂಗ ವ್ಯವಹಾರಗಳು, ಮಿಲಿಟರಿ ಮತ್ತು ದೂರ ಸಂಪರ್ಕವನ್ನು ಹೊರತುಪಡಿಸಿ ಸ್ವಯಂ ನಿರ್ಣಯದೊಂದಿಗೆ ವಿಶೇಷ ಸ್ಥಾನಮಾನವನ್ನು ರಚಿಸಲಾಗಿದೆ. ಹೀಗೆ ಕಾಶ್ಮೀರ ರಾಜಕಾರಣದ ಆರಂಭದಿಂದಲೂ ಕಮ್ಯುನಿಸ್ಟರು ಮಹತ್ವದ ಪಾತ್ರ ವಹಿಸಿದ್ದಾರೆ.

ಪ್ರಶ್ನೆ: ಕಾಶ್ಮೀರದಲ್ಲಿ ಭೂ ಸುಧಾರಣೆಗಳ ಬಗ್ಗೆ?

#1948 ರಲ್ಲಿ, ಕಾಶ್ಮೀರವು ಭೂಸುಧಾರಣೆಯನ್ನು ಜಾರಿಗೆ ತಂದ ಮತ್ತು ಬಡ ರೈತರಿಗೆ ಭೂಮಿಯನ್ನು ವಿತರಿಸಿದ ಮೊದಲ ಭಾರತೀಯ ರಾಜ್ಯವಾಗಿದೆ. ಆ
ಸಮಯದಲ್ಲಿ ಶೇಖ್ ಅಬ್ದುಲ್ಲಾ ಅವರ ರಾಜಕೀಯ ಸಲಹೆಗಾರರಾಗಿದ್ದ ಕಮ್ಯುನಿಸ್ಟರು ಅದರಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದರು. ಕಾಶ್ಮೀರದ ಹೊಸ
ಸರ್ಕಾರದ ಭೂಸುಧಾರಣೆಯಿಂದಾಗಿ ತಮ್ಮ ಭೂಮಿಯನ್ನು ಕಳೆದುಕೊಂಡ ದೊಡ್ಡ ಭೂಮಾಲೀಕರು ಕಾಶ್ಮೀರದಲ್ಲಿ ಹಿಂದೂ ಶಕ್ತಿಗಳನ್ನು ಬೆಂಬಲಿಸಿದರು.ಇದರ ಮುಂದುವರಿಕೆ ಎಂಬಂತೆ ಮೊದಲಿಗೆ ಅಲ್ಲಿ ದ್ವೇಷದ ರಾಜಕಾರಣ ಬಿತ್ತಲಾಯಿತು.

ಪ್ರಶ್ನೆ: ಭಾರತದಲ್ಲಿ ಮೊದಲು ಭೂಸುಧಾರಣೆಮಾಡಿದ ಕಾಶ್ಮೀರದಲ್ಲಿನ ಭೂಮಿ ಇಂದು ಯಾರ ಕೈಯಲ್ಲಿದೆ?

#370 ನೇ ವಿಧಿಯನ್ನು ರದ್ದುಗೊಳಿಸುವುದರ ಜೊತೆಗೆ, ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ ಕಾರ್ಪೊರೇಟ್‌ಗಳಿಗೆ ಅನುಕೂಲವಾಗುವಂತೆ ಭೂಸಂಬಂಧಿತ
ಕಾನೂನುಗಳನ್ನು ತಿದ್ದುಪಡಿ ಮಾಡಿದೆ.  370ನೇ ವಿಧಿಯ ರದ್ಧತಿಯ ವಿರುದ್ಧ ಸಿಪಿಐ(ಎಂ) ಸೇರಿದಂತೆ ಹಲವರು ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಆದರೆ, ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲು ಅನುಕೂಲವಾಗುವಂತೆ ತಂದಿರುವ ಈ ಕಾನೂನಿನ ವಿರುದ್ಧ ಸಿಪಿಐ(ಎಂ) ಮಾತ್ರ ಸುಪ್ರಿಂಕೋರ್ಟಿನಲ್ಲಿ ದಾಖಲಿಸಿರುವುದು ಗಮನಾರ್ಹ. ಈ ಪ್ರಕರಣ ಈಗ ಸುಪ್ರಿಂಕೋರ್ಟಿನಲ್ಲಿದೆ. ಅದನ್ನುರಾಜ್ಯಪಾಲರ ಮೂಲಕ ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಪಕ್ಷದ ಕಾನೂನು ಹೋರಾಟ ಮುಂದುವರಿದಿದೆ. ಅದರ ಹೊರತಾಗಿಯೂ, 2020ರ ನಂತರ ಕಾಶ್ಮೀರದ ಜನರೊಂದಿಗೆ ಯಾವುದೇ ಚರ್ಚೆಯನ್ನು ನಡೆಸದೆಯೇ ಕೇಂದ್ರ ಸರ್ಕಾರವು ಕಾಶ್ಮೀರ ಮರುಸಂಘಟನೆ ಕಾಯಿದೆ ಮತ್ತು ಅಭಿವೃದ್ಧಿ ಯೋಜನೆಗಳ ಕಾಯಿದೆಯಂತಹ ಅನೇಕ ಕಾನೂನುಗಳನ್ನು ಪ್ರಕಟಿಸುವುದನ್ನು ಮುಂದುವರೆಸಿದೆ. ಕಾಶ್ಮೀರದೊಳಗೆ ಇದರ ವಿರುದ್ಧದ ದನಿಗಳು ಬಲವಾಗಿವೆ. ಆದರೆ ಅವರು ತಮ್ಮ ಸಂಪೂರ್ಣ ಸರ್ಕಾರಿ ಯಂತ್ರದೊಂದಿಗೆ ಕಾಶ್ಮೀರದ ಜನರಮೇಲೆ ದಬ್ಬಾಳಿಕೆ ಮಾಡುವುದನ್ನು ಮುಂದುವರೆಸಿದ್ದಾರೆ. ಅದು ಬಿಜೆಪಿಯ ಸ್ವಭಾವ. ಅದು ಆರ್‌ಎಸ್‌ಎಸ್‌ನ ಸ್ವಭಾವ. ಇದರ ವಿರುದ್ಧ ಕಾಶ್ಮೀರದ ಜನರು ಹೋರಾಡುತ್ತಿದ್ದಾರೆ. ಸಿಪಿಐ(ಎಂ) ಅವರ ಜತೆ ನಿಲ್ಲುತ್ತದೆ.

ಪ್ರಶ್ನೆ: ಗಾಂಧಿ ಕಂಡ ಕಾಶ್ಮೀರಕ್ಕೂ ಈಗಿನ ಆಡಳಿತಗಾರರು ಕಂಡ ಕಾಶ್ಮೀರಕ್ಕೂ ಇರುವ ವ್ಯತ್ಯಾಸಗಳೇನು?

# ಭಾರತ ಸ್ವತಂತ್ರವಾದಾಗ, ದೇಶದ ಈಶಾನ್ಯ ಮತ್ತು ವಾಯುವ್ಯ ಭಾಗಗಳಲ್ಲಿ ಅಶಾಂತಿ ಉಂಟಾಗಿತ್ತು.ಆಗ ಗಾಂಧೀಜಿ ಭಾರತದಲ್ಲಿ ತಮಗೆ ಬೇಕಾದ ರಾಜ್ಯ ಕಾಶ್ಮೀರ ಎಂದರು. ಮುಸ್ಲಿಂ ಬಹುಸಂಖ್ಯಾತರ ಮಧ್ಯೆ ಅಲ್ಪಸಂಖ್ಯಾತ ಹಿಂದೂಗಳು ಸುರಕ್ಷಿತವಾಗಿದ್ದ ರಾಜ್ಯ ಮತ್ತು ವಿಭಜನೆಯ ಸಮಯದಲ್ಲಿ ಒಂದೇ ಒಂದು ಗಲಭೆ ನಡೆಯದ ನಾಡು ಎಂಬ ಕಾರಣಕ್ಕೆ ಕಾಶ್ಮೀರವನ್ನು ಭಾರತೀಯ ಏಕತೆಯ ಸಂಕೇತವಾಗಿ ಗಾಂಧಿ ಕಂಡರು. ಆದರೆ ಇಂದು ಏಳು ಕಾಶ್ಮೀರಿಗಳಿಗೆ ಒಬ್ಬ ಸೇನಾ ಯೋಧ ಎಂಬ ಅನುಪಾತವಿದ್ದು, ಈಗಿನ ಆಡಳಿತಗಾರರು ಇಡೀ ಕಾಶ್ಮೀರಕ್ಕೆ ಸೇನಾ ಮುತ್ತಿಗೆ ಹಾಕಿ, ಇಡೀ ಕಾಶ್ಮೀರಿ ಜನರನ್ನು ಅನುಮಾನದಿಂದ ನೋಡುವ ದೃಷ್ಟಿಕೋನ ಹೊಂದಿದ್ದಾರೆ. ಪ್ರಸ್ತುತ ಸರಕಾರವು ನಮ್ಮ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಪ್ರತ್ಯೇಕತಾವಾದದ ಪ್ರತೀಕವನ್ನಾಗಿಸಲು ಪ್ರಯತ್ನಿಸುತ್ತಿದೆ.

ಪ್ರಶ್ನೆ: ಕಾಶ್ಮೀರವು ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯವಾಗಿದೆ. ಕಾಶ್ಮೀರದ ಶಿಕ್ಷಣದ ಸ್ಥಿತಿ ಈಗ ಹೇಗಿದೆ?

# ಕೇಂದ್ರ ಸರ್ಕಾರವು ಇಡೀ ದೇಶಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿದೆ. ಇದರ ಪರಿಣಾಮ ಕಾಶ್ಮೀರದ ಮೇಲೂ ಆಗುವ ಸಾಧ್ಯತೆ ಇದೆ. ಹೊಸ ಶಿಕ್ಷಣ ನೀತಿಯ ಮೂಲಭೂತ ಸಮಸ್ಯೆ ಎಂದರೆ ಅದು ಶಿಕ್ಷಣವನ್ನು ಸಂಪೂರ್ಣವಾಗಿ ವ್ಯಾಪಾರೀಕರಣಗೊಳಿಸುತ್ತದೆ. ದೊಡ್ಡ ಕಾರ್ಪೊರೇಟ್‌ಗಳು ಶಿಕ್ಷಣವನ್ನು ಖಾಸಗಿಯವರಿಗೆ ವಹಿಸಲು ಹೊರಟಿದ್ದಾರೆ. ಶಿಕ್ಷಣವು ಸೇವೆಯಿಂದ ವ್ಯಾಪಾರದ ವಾತಾವರಣಕ್ಕೆ ಚಲಿಸುತ್ತಿದೆ. ಇದರೊಂದಿಗೆ ತಮ್ಮ ರಾಜಕೀಯ ಸಿದ್ದಾಂತಗಳ ಮೂಲಕ ಶಿಕ್ಷಣವನ್ನು ಕಾವಿಮಯ ಮಾಡುವ ಧೋರಣೆ ಪ್ರಬಲವಾಗಿದೆ. ಅವರು ಪಠ್ಯಕ್ರಮದಲ್ಲಿ ವಿಜ್ಞಾನ ವಿರೋಧಿ ವಿಷಯಗಳನ್ನು ಸೇರಿಸಲು
ಯೋಜಿಸುತ್ತಿದ್ದಾರೆ. ಅವರು ಐತಿಹಾಸಿಕ ವಿರೂಪಗಳನ್ನು ಹೇರಲು ಬಯಸುತ್ತಾರೆ. ಶಿಕ್ಷಣ ವಿದ್ಯಾರ್ಥಿಯನ್ನು ಒಂದು ಹೆಜ್ಜೆ ಮುಂದೆ ಯೋಚಿಸುವಂತೆ ಮಾಡಬೇಕು. ವಿದ್ಯಾರ್ಥಿಗಳಲ್ಲಿ ಕಲ್ಪನೆಯನ್ನು ಮೂಡಿಸಬೇಕು. ಆದರೆ ಹೊಸ ಶಿಕ್ಷಣ ನೀತಿಯ ಸಾರದಲ್ಲಿ ಇವುಗಳಿಗೆ ಸ್ಥಾನವಿಲ್ಲ. ಶಿಕ್ಷಣವನ್ನು ವಿಜ್ಞಾನದಿಂದ ದೂರವಿಟ್ಟು ಮತೀಯ ಚಿಂತನೆಯತ್ತ ಸಾಗುವ ಕೆಲಸ ಮಾಡುತ್ತಿದೆ, ಒಟ್ಟಾರೆಯಾಗಿ ಬೌದ್ಧಿಕ ಪ್ರಪಂಚದಿಂದ ನಮ್ಮನ್ನು ಹಿಂದಕ್ಕೆತಳ್ಳುತ್ತಿದೆ. ಶಿಕ್ಷಣ ಮಾರುಕಟ್ಟೆಯಲ್ಲಿ ಹಣಗಳಿಸಲಾಗುತ್ತಿದೆ. ಮತ್ತು ಈ ದೇಶಕ್ಕೆ ಅಥವಾ ಅದರ ಜನರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡದ ವಿಷಯಆಗುತ್ತಿದೆ.
ಆ ಅಪಾಯ ಕಾಶ್ಮೀರದ ಮಕ್ಕಳಲ್ಲೂ ಇದೆ.

ಪ್ರಶ್ನೆ: ಭಾರತ ಹಿಂದೂ ಆಗುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

# ಕಾಶ್ಮೀರದಲ್ಲಿ ಮೂರು ಪ್ರತ್ಯೇಕ ಪ್ರದೇಶಗಳಿವೆ. ಕಾಶ್ಮೀರಿ ಮತ್ತು ಡೋಗ್ರಿಯಂತಹ ವಿವಿಧ ಭಾಷೆಗಳನ್ನು ಇಲ್ಲಿ ಮಾತನಾಡುತ್ತಾರೆ. ನಮ್ಮ ಸರ್ಕಾರಿ
ದಾಖಲೆಗಳಲ್ಲಿ ಉರ್ದು ಇಡೀ ಕಾಶ್ಮೀರದ ಸಂಪರ್ಕ ಭಾಷೆಯಾಗಿದೆ. ಅವರು ಹಿಂದಿಯನ್ನು ಉತ್ತೇಜಿಸಲು ಉರ್ದುವನ್ನು ಡೌನ್‌ಗ್ರೇಡ್ ಮಾಡುತ್ತಾರೆ. ನಾವು ಹಿಂದಿ ವಿರೋಧಿಗಳಲ್ಲ. ಆದರೆ ಒಂದು ರಾಜ್ಯದ ಇಚ್ಛೆಗೆ ವಿರುದ್ಧವಾಗಿ ಅಲ್ಲಿ ಹಿಂದಿ ಹೇರಿಕೆಯನ್ನು ನಾವು ವಿರೋಧಿಸುತ್ತೇವೆ. ಈ ದೇಶದಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಬಂಗಾಳಿ ಮುಂತಾದ ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಪ್ರತಿಯೊಂದೂ ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿದೆ. ಭಾಷೆ ಪ್ರತಿಯೊಬ್ಬರ ಸಂವಹನ ಸಾಧನವಾಗಿದೆ. ಹಾಗಾಗಿ ಪ್ರತಿಯೊಬ್ಬರ ಭಾಷೆಯನ್ನು ಗೌರವಿಸಬೇಕು. ನಾವು ಕಾಶ್ಮೀರಿ ಮಾತನಾಡುವುದರಿಂದ ನಿಮ್ಮ ಸಮಸ್ಯೆ ಏನು? ನೀವು ತಮಿಳು ಮಾತನಾಡುವುದರಿಂದ ನನಗೇನು ಸಮಸ್ಯೆ? ನಾವು ಒಟ್ಟಿಗೆ ಇದ್ದೇವೇ ಎಂಬುದು ಮುಖ್ಯ. ಈ ದೇಶದ ಯಾವುದೇ ಪ್ರದೇಶವು ಇನ್ನೊಂದರಂತೆ ಇಲ್ಲ. ಇಲ್ಲಿಯ ಆಹಾರ ಕೂಡ ಯಾವತ್ತೂ ಒಂದೇ ರೀತಿ ಇರಲಿಲ್ಲ. ಏಕೆ ಇಲ್ಲಿ ಹವಾಮಾನ ಕೂಡ ಒಂದೇ ಆಗಿಲ್ಲ. ತಮಿಳುನಾಡಿನ ಹವಾಮಾನವು ಕಾಶ್ಮೀರ ಅಥವಾ ಲಡಾಖ್‌ನಲ್ಲಿಲ್ಲ. ಹೀಗಿರುವಾಗ ಇಡೀ ದೇಶಕ್ಕೆ ಒಂದೇ ಭಾಷೆ ಬರುವುದಾದರೂ ಹೇಗೆ? ಬಹುತ್ವ ನಮ್ಮ ದೇಶದ ಶಕ್ತಿಯೇ ಹೊರತು ನಮ್ಮ ದೌರ್ಬಲ್ಯವಲ್ಲ.

ಪ್ರಶ್ನೆ: ಕಾಶ್ಮೀರ ಫೈಲ್ಸ್ ಚಿತ್ರಕಥೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?

# ನನ್ನ ಪ್ರಕಾರ ಈ ಸಿನಿಮಾ ಒಂದು ಪಕ್ಷಪಾತಿ ಸಿನಿಮಾ. ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣದ ಕ್ರಿಯಾ ಯೋಜನೆಗಳಲ್ಲಿ ಇದೂ ಒಂದು.

ಪ್ರಶ್ನೆ: ಕಾಶ್ಮೀರದ ವಿಶಿಷ್ಟ ಸಂಸ್ಕೃತಿ ಏನು ಎಂದು ನೀವು ಹೇಳುತ್ತೀರಿ?

# ಕಾಶ್ಮೀರದ ವಿಶಿಷ್ಟತೆ – ಕಾಶ್ಮೀರಿಗಳ ಸಹಿಷ್ಣುತೆ. ಇದು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಆದರೆ ಇದು ಕಾಶ್ಮೀರದ ಜನರ ಸ್ವಭಾವ. ಎರಡು ಭಿನ್ನ
ಧರ್ಮದ ಪ್ರತಿನಿಧಿಗಳಾದ ಲಾಲ್ ದೆದ್‌ ಮತ್ತು ಶೇಖ್‍ ನೂರುದ್ದೀನ್  ರ ಬಾಂಧವ್ಯದ ನೆಲವಿದು. ಇದು ಕಾಶ್ಮೀರದ ಸುದೀರ್ಘ ಪರಂಪರೆ. ಕಾಶ್ಮೀರಿಗಳು ಧಾರ್ಮಿಕ ಮೂಲಭೂತವಾದಿಗಳನ್ನು ನಿರ್ಲಕ್ಷಿಸಿ ಸಾಮರಸ್ಯ ಮತ್ತು ಸಹಿಷ್ಣುತೆಯಿಂದ ಒಟ್ಟಿಗೆ ಬದುಕುವ ಜನರು.

ಇದನ್ನೂ ಓದಿ:ರಾಮಮಂದಿರ ಉದ್ಘಾಟನೆ ಬಳಿಕ ಗೋಧ್ರಾ ರೀತಿಯ ಘಟನೆ ಸಂಭವಿಸಬಹುದು: ಉದ್ಧವ್ ಠಾಕ್ರೆ ಎಚ್ಚರಿಕೆ

ಪ್ರಶ್ನೆ: ಅಂದು ಆಸಿಫಾ ಬಾನೊ ಹತ್ಯೆ ಮತ್ತು ಇಂದಿನ ಭಾರತೀಯ ಸಂದರ್ಭ – ನಿಮ್ಮ ಅಭಿಪ್ರಾಯವೇನು?

8 ವರ್ಷದ ಆಸಿಫಾ ಎಂಬ ಬಾಲಕಿಯ  ಮೇಲೆ ದೇವಸ್ಥಾನದಲ್ಲಿ ಅತ್ಯಾಚಾರವೆಸಗಿ ಕೊಲೆಮಾಡಿದ ಕ್ರೌರ್ಯವನ್ನು ಬೆಳಕಿಗೆ ತಂದಿದ್ದೇವೆ. ನಾವು ಜನರ ಮುಂದೆ ಅಪರಾಧಿಗಳನ್ನು ಬಹಿರಂಗಪಡಿಸಿದ್ದೇವೆ. ಅವರ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದೇವೆ. ಆದರೆ ಬಿಜೆಪಿ ಅಪರಾಧಿಗಳಿಗೆ ಬೆಂಬಲ ನೀಡಿದೆ. ಇಂದಿಗೂ ಮಣಿಪುರದಲ್ಲಿ ಅವರು ಅಂತಹ ಅಪರಾಧಿಗಳನ್ನು ರಕ್ಷಿಸುತ್ತಾರೆ. ದೇಶದ ಮತ್ತು ಮಣಿಪುರದ ಮಹಿಳೆಯರು ನಮ್ಮ ಸಹೋದರಿಯರು. ಈ ಆಧುನಿಕ ಯುಗದಲ್ಲಿ ಇಂತಹ ದೌರ್ಜನ್ಯಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ.

ಪ್ರಶ್ನೆ: ಕಾಶ್ಮೀರದ ಬಗ್ಗೆ ವದಂತಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

# ಮಾಧ್ಯಮಗಳು ಮತ್ತು ಸರ್ಕಾರಿ ಯಂತ್ರಗಳು ಕಾಶ್ಮೀರದ ಬಗ್ಗೆ ಏನು ಹೇಳುತ್ತವೆ ಎಂಬುದು ಇಲ್ಲಿನ ಪರಿಸ್ಥಿತಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.1947ರಲ್ಲಿ ಇದ್ದ ಮನಸ್ಥಿತಿಯಲ್ಲೇ ಈಗಲೂ ಇದ್ದೇವೆ. ಇದು ಭಾರತದ ಇತರ ರಾಜ್ಯಗಳ ಜನರು ಅರ್ಥಮಾಡಿಕೊಳ್ಳಬೇಕು.

ನಿಮಗೆ ಹೇಳುತ್ತಿರುವುದು ಕೇವಲ ತಪ್ಪು ಸುದ್ದಿ ಮತ್ತು ಮಾಹಿತಿ. ಇಡೀ ಭಾರತದ ಜನತೆಗೆ ನನ್ನ ಮನವಿ ಒಂದೇ. ನಮ್ಮನ್ನು ಪ್ರತ್ಯೇಕಿಸಬೇಡಿ. ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಕೇಳುತ್ತಿದ್ದೇವೆ. ನಾವು ಬೇರೆ ಏನನ್ನೂ ಕೇಳಲಿಲ್ಲ. ನಮ್ಮ ಐತಿಹಾಸಿಕ ರಾಜ್ಯವು ಈಗ ಕೇಂದ್ರಾಡಳಿತ ಪ್ರದೇಶಕ್ಕೆ ಕುಸಿದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದಂತೆ.

ಭಾರತದ ಯಾವುದೇ ರಾಜ್ಯಗಳನ್ನು ಅಸ್ಥಿರಗೊಳಿಸಲಾಗಿದೆಯೇ? ಅವರ ಒಪ್ಪಿಗೆಯಿಲ್ಲದೆ ಬೇರೆ ಯಾವುದೇ ರಾಜ್ಯ ಪ್ರತ್ಯೇಕವಾಗಿದೆಯೇ? ಈ ದೇಶದಲ್ಲಿ ಯಾವುದೇ ರಾಜ್ಯಗಳು ಸಂಪೂರ್ಣ ಮಿಲಿಟರಿ ದಿಗ್ಬಂಧನಕ್ಕೆ ಒಳಗಾಗಿವೆಯೇ, ಅವುಗಳಿಗೆ ಕನಿಷ್ಠ ಹಕ್ಕುಗಳನ್ನು ಸಹ ನೀಡದೆ, ಅವುಗಳನ್ನು ಕೇಳದೆಯೇ ಹೀಗೆ ಮಾಡಲಾಗಿದೆಯೇ? ಆರ್‌ಎಸ್‌ಎಸ್-ಬಿಜೆಪಿ ಇಡೀ ದೇಶವನ್ನು ಒಂದೇ ಪಕ್ಷ ಮತ್ತು ಏಕಾಧಿಕಾರದ ಅಡಿಯಲ್ಲಿ ತರಲು ಪ್ರಯತ್ನಿಸುತ್ತಿವೆ. ಅವರು ತಪ್ಪಿನ ಮೇಲೆ ತಪ್ಪು ಮಾಡುತ್ತಾರೆ. ಆದರೆ ಭಾರತವು ಭಾರತೀಯರಿಗಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾಷೆ, ಧರ್ಮ, ಜಾತಿ, ಬಣ್ಣಗಳ ಭೇದಗಳನ್ನು ದಾಟಿ ಭಾರತೀಯರಾಗಿ ಒಂದಾಗಿರುವ ಭಾರತೀಯರಿಗಾಗಿ. ಆದ್ದರಿಂದ ಭಾರತೀಯರೆಲ್ಲರೂ ನಮ್ಮ ಪರವಾಗಿ ಮಾತನಾಡಲು ಮುಂದೆ ಬರಬೇಕು. ಕಾಶ್ಮೀರಿಗಳಿಗೆ ತೊಂದರೆಯಾದಾಗ ಇತರರು ಮಾತನಾಡದಿದ್ದರೆ ನಾಳೆ ಇತರ ರಾಜ್ಯಗಳು ಮತ್ತೊಂದು ರಾಜ್ಯಕ್ಕೆ ತೊಂದರೆಯಾದಾಗ ಮೌನವಾಗಿರುತ್ತವೆ. ಇದು ಕಾಶ್ಮೀರಿಗಳಿಗೆ ನಷ್ಟ ಎಂದು ನಾವು ನೋಡುವುದಿಲ್ಲ. ನಾವು ಇದನ್ನು ಭಾರತೀಯ ಪ್ರಜಾಪ್ರಭುತ್ವದ ನಷ್ಟೆಂದೇ ನೋಡುತ್ತೇವೆ. ನಾವು ಈ ಯುದ್ಧವನ್ನು ಗೆಲ್ಲಬೇಕು. ನಾವು ಬದುಕಬೇಕು. ಭಾರತ ಸರ್ಕಾರ ಕಾನೂನಿನ ಪ್ರಕಾರ ನಡೆಯಬೇಕು. ಭಾರತೀಯ ಪ್ರಜಾಪ್ರಭುತ್ವ ಚಿರಾಯುವಾಗಲಿ.

ವಿಡಿಯೋ ನೋಡಿ:ನಿರುಪಯೋಗಿ ಸುರತ್ಕಲ್ ಟೋಲ್ ಬೂತ್ ತೆರವುಗೊಳಿಸಿ, ಮತ್ತೆ ಟೋಲ್ ಸಂಗ್ರಹದ ಭಂಡ ಧೈರ್ಯ ಬೇಡ..! Janashakthi Media

Donate Janashakthi Media

Leave a Reply

Your email address will not be published. Required fields are marked *