ಕರ್ನಾಟಕ ಕಬ್ಬು ಬೆಳೆಗಾರರ ಸಮ್ಮೇಳನ: ಹಲವು ನಿರ್ಣಯಗಳ ಅಂಗೀಕಾರ

ಕರ್ನಾಟಕ ಕಬ್ಬು 2013 ರ ಕಾಯ್ದೆ ರದ್ದು ಪಡಿಸಿ, ಎಸ್.ಎ.ಪಿ ಪುನರ್ ಸ್ಥಾಪಿಸಲು ಆಗ್ರಹ
ಕಲಬುರಗಿ: ಕಲ್ಬುರ್ಗಿ ನಗರದ ಯಾತ್ರಿಕ ಹೊಟೇಲ್ ನಲ್ಲಿ ನಡೆದ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮ್ಮೇಳನದಲ್ಲಿ 13 ನಿರ್ಣಯಗಳನ್ನು ಅಂಗೀಕಾರ ಮಾಡಿ, ಅವುಗಳ ಜಾರಿಗಾಗಿ ಸರಕಾರಕ್ಕೆ ಒತ್ತಾಯಿಸಲಾಯಿತು.

ರೈತ ವಿರೋಧಿ ಸಹಕಾರಿ ಹಾಗೂ ಸಾರ್ವಜನಿಕರಂಗದ ಸಕ್ಕರೆ ಕಾರ್ಖಾನೆಗಳ ವಿರೋಧಿ ರಂಗರಾಜನ್ ಸಮಿತಿ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಸಕ್ಕರೆ ರಂಗವನ್ನು ಅನಿಯಮಿತ ಎಸ್.ಎ.ಪಿ ರದ್ದತಿಗಾಗಿ ತಂದಿರುವ ಕರ್ನಾಟಕ ಕಬ್ಬು( ಖರೀದಿ ಹಾಗೂ ಪೂರೈಕೆ ನಿಯಂತ್ರಣ) ಕಾಯ್ದೆ 2013 ರದ್ದುಗೊಳಿಸಬೇಕು. ಹಾಗೂ 2013ಕ್ಕಿಂತ ಮುಂಚೆ ಇದ್ದ ರಾಜ್ಯ ಸಲಹಾ ಬೆಲೆ(ಎಸ್.ಎ.ಪಿ)ನ್ನು ಪುನರ್ ಸ್ಥಾಪಿಸಬೇಕು.

ಕಬ್ಬು ಬೆಳಗಾರರ ಬೇಡಿಕೆಗಳ ಕುರಿತಂತೆ ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟಿಸಲು ನಿರ್ಣಾಯಿಸಲಾಯಿತು. 9.5 ಇಳುವರಿ ಆಧಾರದಲ್ಲಿ 5500 ಎಫ್ ಆರ್ ಪಿ ನಿಗದಿಪಡಿಸಲು ಒತ್ತಾಯಿಸಲಾಯಿತು.

ಇದನ್ನೂ ಓದಿ: ಕಾರ್ಕಳ-ಧರ್ಮಸ್ಥಳ ಹೆದ್ದಾರಿಯಲ್ಲಿ ಅಪಘಾತ: ನಾಲ್ವರು ಸ್ಥಳದಲ್ಲೇ ಮೃತ

ಕೇಂದ್ರದ ರೈತ ವಿರೋಧಿ 2024ರ ಸಕ್ಕರೆ ನಿಯಂತ್ರಣ ಮಂಡಳಿ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಲಾಯಿತು. ರಾಜ್ಯ ಸರ್ಕಾರ ಹರಿಯಾಣ ಪಂಜಾಬ್ ಮಾದರಿಯಲ್ಲಿ ಪ್ರತಿ ಟನ್ ಗೆ 900 ರೂಪಾಯಿಗಳ ಎಸ್ ಎ ಪಿ ನಿಗದಿಪಡಿಸಬೇಕು. ರೆವಿನ್ಯೂ ಶೇರಿಂಗ್ ಫಾರ್ಮುಲವನ್ನು ರದ್ದುಪಡಿಸಬೇಕು. ತೂಕವನ್ನು ಪರೀಕ್ಷಿಸಲು ಕಬ್ಬು ಬೆಳೆಗಾರರ ಮುಖಂಡರ ಒಳಗೊಂಡ ಸಮಿತಿ ರಚಿಸಬೇಕು. ಮತ್ತು ಮಾಹಿತಿ ನೀಡದೆ ಭೇಟಿ ನೀಡಿ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು. ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶದಲ್ಲಿ ಶೇಕಡ 50ರಷ್ಟು ಪಾಲು ಕಬ್ಬು ಬೆಳೆಗಾರರಿಗೆ ನೀಡಬೇಕು. ಸಕ್ಕರೆ ಇಳುವರಿ ಘೋಷಣೆಯಲ್ಲಿ ಕಾರ್ಖಾನೆ ಅವರು ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆ ತೋರಿಸುತ್ತಿದ್ದಾರೆ ಇದರ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು ಎಂದು ಸರಕಾರಕ್ಕೆ ಆಗ್ರಹಿಸಲಾಯಿತು.

ಸಹಕಾರಿ ಮತ್ತು ಸಾರ್ವಜನಿಕ ಕಾರ್ಖಾನೆಗಳ ಪುನಾಶ್ಚೇತನ ಕೇಂದ್ರ ಸಕ್ಕರೆ ಅಭಿವೃದ್ಧಿ ಮಂಡಳಿಯಿಂದ ಬಡ್ಡಿ ರಹಿತ ಸಾಲ ನೀಡಬೇಕು. ಹಾಗೂ 30. 40 ವರ್ಷಗಳಿಗೆ ಗುತ್ತಿಗೆ ನೀಡುವುದಾಗಲಿ ಅಥವಾ ಮಾರಾಟ ಮಾಡುವ ಪ್ರವೃತ್ತಿಯನ್ನು ಕೈಬಿಡಬೇಕು .

ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಹಣಪಾವತಿ ಮಾಡಬೇಕು ಇಲ್ಲವಾದರೆ ಶೇಕಡ 15ರಷ್ಟು ಬಡ್ಡಿ ಸೇರಿಸಿ ಹಣವನ್ನು ಕೊಡಬೇಕು. ಇಲ್ಲವಾದರೆ ಕಾರ್ಖಾನೆ ಆಡಳಿತ ಮಂಡಳಿಯ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರ ಆಸ್ತಿಯನ್ನು ಮುಟ್ಟಿಗೋಲು ಹಾಕಿಕೊಳ್ಳಬೇಕು.

ತಮಿಳುನಾಡಿನ ಕಬ್ಬು ಬೆಳೆಗಾರರ ಸಂಘ ತಮಿಳುನಾಡಿನಲ್ಲಿ ಬೈಂಡಿಂಗ್ ವೇಸ್ಟೇಜ್ ಅನ್ನು ಹೆಚ್ಚಾಗಿ ಕಡಿತ ಮಾಡಿದ್ದರ ವಿರುದ್ಧ ತಮಿಳುನಾಡಿನ ಕಬ್ಬು ಬೆಳೆಗಾರರ ಸಂಘ ಹೋರಾಟವನ್ನು ನಡೆಸಿ 1966 3A ಸೆಕ್ಷನ್ ಅಡಿಯಲ್ಲಿ ಹೈಕೋರ್ಟ್ ನಲ್ಲಿ ಪ್ರಕರಣವನ್ನು ದಾಖಲಿಸಿ 150 ಕೋಟಿ ಹಣವನ್ನು ರೈತರಿಗೆ ಕೊಡಿಸಿರುವ ತಮಿಳುನಾಡು ಕಬ್ಬು ಬೆಳೆಗಾರ ಸಂಘಕ್ಕೆ ಕರ್ನಾಟಕ ಕಬ್ಬು ಬೆಳೆಗಾರರ ಸಂಘದಿಂದ ಅಭಿನಂದನೆ ಸಲ್ಲಿಸಯಿತು.

ಕರ್ನಾಟಕ ಕಬ್ಬು( ಖರೀದಿ ಮತ್ತು ಸರಬರಾಜು ನಿಯಂತ್ರಣ) ಅಧಿನಿಯಮ 2013 ಹಾಗೂ ತಿದ್ದುಪಡಿ ಅಧಿನಿಯಮ 2014ರ ಪ್ರಕಾರ 2022.23 ನೆ ಸಾಲಿನಲ್ಲಿ ಎಥನಾಲ್ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳು 150 ರೂಪಾಯಿ ಹಾಗೂ ಎಥನಾಲ್ ಉತ್ಪಾದಿಸದ ಇರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ 100 ರೂಪಾಯಿ ಹೆಚ್ಚುವರಿಯಾಗಿ ನೀಡಬೇಕೆಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಅನ್ವಯ ತಕ್ಷಣ ರೈತರಿಗೆ ಹಣ ಪಾವತಿ ಮಾಡಿಸಬೇಕು. ಅದರಂತೆ ಪ್ರತಿವರ್ಷಗಳ ಬಾಕಿ ಹಣ ನೀಡಬೇಕು. ಎಂದು ಸಮ್ಮೇಳನದಲ್ಲಿ ಈ ಎಲ್ಲಾ ನಿರ್ಣಯಗಳನ್ನು ಅಂಗೀಕಾರ ಮಾಡಿ ಅವುಗಳ ಜಾರಿಗಾಗಿ ಸರಕಾರಕ್ಕೆ ಒತ್ತಾಯಿಸಲಾಯಿತು.

ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ.

ಜಿ.ನಾಗರಾಜ್(ರಾಜ್ಯಾಧ್ಯಕ್ಷ), ಎನ್.ಎಲ್.ಭರತ್ ರಾಜ್(ರಾಜ್ಯ ಪ್ರಧಾನ ಕಾರ್ಯದರ್ಶಿ), ಚಂದ್ರ ಗೌಡ ಕಲ್ಲನಗೌಡ ಪಾಟೀಲ್ ಬೆಳಗಾವಿ, ಶರಣಬಸಪ್ಪ ಮಮಶೆಟ್ಟಿ ಕಲಬುರಗಿ, ನ್ಯಾಮಗೌಡ ಬಾಗಲಕೋಟೆ, ಕುಳ್ಳೇಗೌಡ ಮಂಡ್ಯ(ಉಪಾಧ್ಯಕ್ಷರು), ಬೀಮರಾಯ ಪೂಜಾರಿ. ವಿಜಯಪುರ, ಶ್ರೀಮಂತ ಬೀರೆದಾರ ಕಲಬುರಗಿ, ಚಂದ್ರಶೇಖರ ಸಂಗಪ್ಪ ಕೊಪ್ಪಳ, ಸಿದ್ದರಾಮ ದಣ್ಣೂರ ಕಲಬುರಗಿ (ಸಹಕಾರ್ಯದರ್ಶಿಗಳು). ಕೊಟ್ಟಿಗೆ ಮಲ್ಲಿಕಾರ್ಜುನ ವಿಜಯನಗರ, ಶುಕೂರ್ ಮಂಡ್ಯ, ಶ್ರೀನಿವಾಸ್ ಮಂಡ್ಯ, ಅವಿನಾಶ ಸಾರಥಿ ಬಾಗಲಕೋಟೆ, ಮಲ್ಲಿಕಾರ್ಜುನ ಸಾವುಕಾರ್ ವಿಜಯನಗರ, ಅಣ್ಣರಾಯ ಈಳಿಗೇರ ವಿಜಯಪುರ, ಗೋಪಾಲ ಶಿವಗದ್ದಿಗೆ ವಿಜಯಪುರ,  ನಿಂಗಣ್ಣ ವಡಿಗೇರಿ ಯಾದಗಿರಿ,  ಚನ್ನಪ್ಪ ಆನೆಗುಂದಿ ಯಾದಗಿರಿ, ಶಿವಮೋಗಪ್ಪ ಕಲಬುರಗಿ. ಪ್ರಕಾಶ ಜಾನಿ ಕಲಬುರಗಿ, ರಾಮಚಂದ್ರಪ್ಪ ಬೀದರ್ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಕಾರ್ಯದರ್ಶಿ ಎನ್.ಎಲ್ ಭರತ್ ರಾಜ್ ವರದಿ ಮಂಡಿಸಿದರು.

ಅಖಿಲ ಭಾರತ ಕಬ್ಬು ಬೆಳೆಗಾರ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಿ.ರವೀಂದ್ರನ್, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಟಿ.ಯಶವಂತ, ಶರಣಬಸಪ್ಪ ಮಮಶೆಟ್ಟಿ, ಅಣ್ಣರಾಯ ಈಳಿಗೇರ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಮ್.ಬಿ ಸಜ್ಜನ್, ಗೌರಮ್ಮ ಪಾಟೀಲ್, ಸುಧಾಮ್ ಧನ್ನಿ, ಭೀಮಶೆಟ್ಟಿ ಎಂಪಳ್ಳಿ ಇದ್ದರು. ಡಾ.ಸಾಯಿಬಣ್ಣಗುಡುಬಾ ನಿರೂಪಿಸಿದರು. ಶ್ರಿಮಂತ ಬೀರದಾರ ಸ್ವಾಗತಿಸಿದರು. ಸಿದ್ದು ದಣ್ಣೂರು ವಂದಿಸಿದರು. ರಾಯಪ್ಪ ಹುರಮುಂಜಿ, ಕಾಶೀನಾಥ ಬಂಡಿ ಕ್ರಾಂತಿಗೀತೆ ಹಾಡಿದರು.

ಇದನ್ನೂ ನೋಡಿ: ಮುಡಾ ಹಗರಣ : ಸಿದ್ದರಾಮಯ್ಯ ಸರ್ಕಾರವನ್ನು ಉರುಳಿಸುವ ಪಿತೂರಿ Janashakthi Media

Donate Janashakthi Media

Leave a Reply

Your email address will not be published. Required fields are marked *