ಅಕ್ಷರ ಚಪ್ಪರ ತಂಡದಿಂದ ರಾಜ್ಯೋತ್ಸವ ಆಚರಣೆ

ಬೆಂಗಳೂರು : ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ, ಬೆಂಗಳೂರಿನ ಜಯನಗರ 1ನೇ ಬ್ಲಾಕಿನಲ್ಲಿರುವ ರಾಣಿ ಸರಳಾದೇವಿ ಕಾಲೇಜಿನಲ್ಲಿ “ಕನ್ನಡವೆಂದರೆ ಬರಿ ನುಡಿಯಲ್ಲ” ಕಾರ್ಯಕ್ರಮವನ್ನು ನವೆಂಬರ್ 28 ರಂದು ಆಯೋಜಿಸಿತ್ತು.

ಐಎಎಸ್ ಅಧಿಕಾರಿ ಮಹಮ್ಮದ್ ರಫಿಯವರು ‘ಕುವೆಂಪುರವರ’ ‘ವಿಶ್ವಮಾನವ ಸಂದೇಶ’ವನ್ನು ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ಓದು ಮನುಜರಲ್ಲಿ ಅರಿವು ಮೂಡಿಸುತ್ತದೆ. ಕನ್ನಡ ಪುಸ್ತಕಗಳನ್ನು ಓದುವ ಮೂಲಕ ಕನ್ನಡ ಸಾಹಿತ್ಯ ಹಾಗೂ ಭಾಷೆಯನ್ನು ಉಳಿಸುವ ಮತ್ತು ಬೆಳಸುವ ಜವಾಬ್ದಾರಿ ಎಲ್ಲರ ಮೇಲಿದೆ. ಯುವ ಜನತೆ ಹೆಚ್ಚು ಹೆಚ್ಚು ಪುಸ್ತಕ ಅಧ್ಯಯನದಲ್ಲಿ ತೊಡಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾರಾಯಣ ತಿರುಮಲಾಪುರ ಅವರು ಮಾತನಾಡಿ ಪ್ರತಿಯೊಬ್ಬರಲ್ಲೂ ಕನ್ನಡ ಪ್ರೀತಿ ಹೆಚ್ಚಾಗಬೇಕು. ಕನ್ನಡ ಪುಸ್ತಕಗಳನ್ನು ಓದಬೇಕು, ಇತರ ಭಾಷೆಗಳನ್ನು ಗೌರವಿಸೋಣ, ಆದರೆ ಕನ್ನಡವನ್ನು ಬೆಳಸುವ, ಪೋಷಿಸುವ ಹೊಣೆಗಾರಿಕೆಯನ್ನು ನಾವು ಮರೆಯಬಾರದು ಎಂದರು.

ಈ ಕಾರ್ಯಕ್ರಮದಲ್ಲಿ “ಕನ್ನಡ ಪುಸ್ತಕಗಳು ಗಾಲಿಗಳ ಮೇಲೆ” ಎಂಬ ವಿನೂತನ ಅಭಿಯಾನಕ್ಕೆ ಆಟೋ ಚಾಲಕಿಯಾದ ಸೌಮ್ಯ ಅವರು ಚಾಲನೆ ನೀಡಿದರು. ಈ ಸಮಯದಲ್ಲಿ ನಟರಾದ ಶೋಭರಾಜ್,  ಮಹಮ್ಮದ್ ರಫಿ, ನವಿ ಕನ್ನಡತಿ, ಮಂದಗೆರೆ ರಾಮಕುಮಾರ್ ಮತ್ತು ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಗಲಿದ ನಟ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ನೆನಪಿಗಾಗಿ ‘ಅಪ್ಪು ಅಪ್ಪುಗೆ’ ಕಾರ್ಯಕ್ರಮ ನಡೆಸಿ, ಗೀತನಮನ, ನುಡಿನಮನ ಹಾಗೂ ಕಾವ್ಯ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪುನೀತ್ ರವರ ಹಿರಿಯ ಸಹೋದರಿ, ಲಕ್ಷ್ಮಿ ಗೋವಿಂದರಾಜ್ ಹಾಗೂ ಭಾವನವರಾದ ನಿರ್ಮಾಪಕ ಗೋವಿಂದರಾಜು ಅವರು ನುಡಿ ನಮನ ಸಲ್ಲಿಸಿದರು. ಇದೇ ಕಾರ್ಯಕ್ರಮದಲ್ಲಿ ವಿಶೇಷ ಕವಿ ಸಮಯವನ್ನು ಆಯೋಜಿಸಲಾಗಿದ್ದು, ಸ್ಥಳದಲ್ಲೇ ಕಾವ್ಯರಚನೆಯಲ್ಲಿ ಹನ್ನೊಂದು ಕವಿಗಳು ಭಾಗವಹಿಸಿ, ಜನಮನ ಸೂರೆಗೊಂಡರು.

Donate Janashakthi Media

Leave a Reply

Your email address will not be published. Required fields are marked *