ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ದಾಳಿ : ಗಡಿ ಸಂಬಂಧದಲ್ಲಿ ಹೆಚ್ಚಾಗುತ್ತಿದೆ ಬಿರುಕು

ಬೆಂಗಳೂರು : ಕರ್ನಾಟಕ ಹಾಗೂ ಮಹಾರಾಷ್ಟ್ರದೊಂದಿಗೆ ಗಡಿಭಾಗವನ್ನು ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡಿಗರು ಹಾಗೂ ಮರಾಠಿಗರ ನಡುವೆ ಗಲಾಟೆ ಆರಂಭವಾಗಿದೆ.

ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಸಂಬಂಧದ ಬಿರುಕು ಹೆಚ್ಚಾಗುತ್ತಿದ್ದು, ಶಿವಸೇನಾ ಕಾರ್ಯಕರ್ತರು ಗಡಿ ಭಾಗದಲ್ಲಿ ಕರ್ನಾಟಕದ ಬಸ್‌ಗಳು ಹಾಗೂ ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಾಗೆಯೇ ಅಂಗಡಿಗಳನ್ನು ಸಹ ಧ್ವಂಸಗೊಳಿಸಿದ್ದಾರೆ. ಕನ್ನಡ ನಾಮಫಲಕಗಳಿಗೆ ಹರಿದು ಹಾಕಿ ಬೆಂಕಿ ಹೆಚ್ಚುತ್ತಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ಈ ಗಲಾಟೆಗಳಿಗೆ ಕಾರಣ ಏನು? ಕನ್ನಡ ಬಾವುಟಕ್ಕೆ ಬೆಂಕಿ, ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮೂರ್ತಿಗೆ ಮಸಿ ಎರಚಿದ್ದು ಹಾಗೂ ಶುಕ್ರವಾರ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ, ಪ್ರತಿಭಟನೆ, ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸ ಪ್ರಕರಣದ ವರೆಗೆ ಸಾಲು ಸಾಲು ಘಟನೆಗಳು ಪ್ರತೀಕಾರವಾಗಿ ನಡೆಯುತ್ತಿವೆ. ಅದರಲ್ಲೂ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ನಡೆಯುತ್ತಿರುವಾಗ, ಕರ್ನಾಟಕದ ರಾಜಕಾರಣಿಗಳು ಬೆಳಗಾವಿಯಲ್ಲಿ ಬೀಡುಬಿಟ್ಟಿರುವಾಗಲೇ ಹೀಗಾಗುವುದು ಹೆಚ್ಚು ಎಂಬುದು ಗಮನಾರ್ಹ.

ಈ ಸರಣಿ ಘಟನೆಗಳು ಆರಂಭ ಆದದ್ದು ಡಿಸೆಂಬರ್ 13ನೇ ತಾರೀಖಿನಿಂದ. ಮಹಾರಾಷ್ಟ್ರ ಏಕೀಕರಣ ಸಮಿತಿಯು ಬೆಳಗಾವಿಯನ್ನು ಮಹಾರಾಷ್ಟ್ರದಿಂದ ಸೇರ್ಪಡೆ ಮಾಡಬೇಕು ಎಂದು ಅಧಿವೇಶನ ನಡೆಯುವ ಸ್ಥಳದ ಹೊರ ಆವರಣದಲ್ಲಿ ಡಿಸೆಂಬರ್ 13ರಂದು ಪ್ರತಿಭಟನೆ ಕೈಗೊಂಡಿತ್ತು. ಜೊತೆಗೆ ಕನ್ನಡಪರ ಹೋರಾಟಗಾರರು ಮಹಾರಾಷ್ಟ್ರ ಏಕೀಕರಣ ಸಮಿತಿಯ ದೀಪಕ್ ದಲ್ವಿ ಎಂಬವರ ಮೇಲೆ ಮಸಿ ಎರಚಿತ್ತು. ಈ ಘಟನೆಯ ಬಳಿಕ ಆರೋಪಿಗಳನ್ನು ಬಂಧಿಸಲಾಗಿದ್ದರೂ ಘರ್ಷಣೆ ಅಲ್ಲಿಗೆ ನಿಲ್ಲಲಿಲ್ಲ.

ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬೆಂಬಲ ಸೂಚಿಸಿ ಮಹಾರಾಷ್ಟ್ರದ ಕೊಲ್ಹಾಪುರ್ ಎಂಬಲ್ಲಿ ಮಂಗಳವಾರ (ಡಿಸೆಂಬರ್ 14) ರಂದು ಕನ್ನಡ ಬಾವುಟವನ್ನು ಸುಡಲಾಗಿತ್ತು. ಇದಾಗಿ ಒಂದು ದಿನದ ಬಳಿಕ ಅಂದರೆ ಡಿಸೆಂಬರ್ 15 ರಂದು ಬೆಂಗಳೂರಿನಲ್ಲಿ ಶಿವಾಜಿ ಮಾಹಾರಾಜರ ಪ್ರತಿಮೆಗೆ ಮಸಿ ಬಳಿಯಲಾಗಿತ್ತು. ವ್ಯಕ್ತಿ ಒಬ್ಬ ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಎರಚುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಘಟನೆಗಳಿಗೆ ಪ್ರತಿಯಾಗಿ ನಿನ್ನೆ (ಡಿಸೆಂಬರ್ 17) ರಾತ್ರಿ ಮತ್ತೆ ಬೆಳಗಾವಿಯಲ್ಲಿ ಮರಾಠಿಗರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಹಿಂಸಾಚಾರ, ದುಷ್ಕೃತ್ಯಕ್ಕೂ ಕಾರಣವಾಗಿದೆ.

ಸಧ್ಯ ಬೆಳಗಾವಿಯಲ್ಲಿ ಬಿಗುವಿನ ವಾತಾವರ ನಿರ್ಮಾಣವಾಗಿದ್ದು, ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಕ್ಷಣ ಕ್ಷಣದ ಮಾಹಿತಿಯನ್ನು ಗುಪ್ತದಳದಿಂದ ಪಡೆಯುವ ಗೃಹ ಇಲಾಖೆ ಕಳೆದೊಂದು ವಾರದಿಂದ ವಿಫಲವಾಗುತ್ತಿದೆ. ಸಾಲು ಸಾಲು ದೊಂಬಿ, ಗಲಾಟೆಗಳು ನಡೆಯುತ್ತಿದೆ. ಕನ್ನಡಿಗರ ಮೇಲೆ ದಾಳಿಗಳು ಹೆಚ್ಚಾಗುತ್ತಿವೆ. ಆದರೆ ಸರಕಾರ ಕೃತ್ಯ ಎಸಿಗಿದವರು ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ ಬಂಧಿಸುವ ಕೆಲಸ ಮಾಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *