ನಟಿ ರನ್ಯಾ ರಾವ್ ವಿರುದ್ಧದ CID ತನಿಖಾ ಆದೇಶ ಹಿಂಪಡೆದ ಕರ್ನಾಟಕ ಸರ್ಕಾರ

ಬೆಂಗಳೂರು: ನಟಿ ರಾನ್ಯಾ ರಾವ್ ಹೆಸರು ಕೇಳಿ ಬಂದಿದ್ದ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರವು CID ತನಿಖೆಗೆ ನೀಡಿದ್ದ ಆದೇಶವನ್ನು ಹಿಂಪಡೆದು, ಈ ನಿರ್ಧಾರ ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದನ್ನು ಓದಿ:ಹಕ್ಕಿಜ್ವರದ ಭೀತಿ ಎಫೆಕ್ಟ್ : ರಾಯಚೂರಿನಲ್ಲಿ ಮೀನುಗಳ ಭರ್ಜರಿ ಮಾರಾಟ

ಪ್ರಾರಂಭದಲ್ಲಿ, ಚಿನ್ನದ ಕಳ್ಳಸಾಗಣೆಯ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು CIDಗೆ ವಹಿಸಲು ಸರ್ಕಾರ ತೀರ್ಮಾನಿಸಿತ್ತು. ಇದರಿಂದ, ರನ್ಯಾ ರಾವ್ ಸೇರಿದಂತೆ ಕೆಲ ಪ್ರಭಾವಿ ವ್ಯಕ್ತಿಗಳ ಹೆಸರುಗಳು ತನಿಖೆಗೆ ಒಳಪಡುವ ಸಾಧ್ಯತೆ ಇತ್ತು. ಆದರೆ ಸರ್ಕಾರದ ನೂತನ ಆದೇಶದ ಪ್ರಕಾರ, ಈ ಪ್ರಕರಣವನ್ನು CIDನಿಂದ ಹಿಂತೆಗೆದುಕೊಳ್ಳಲಾಗಿದೆ.

ಈ ನಿರ್ಧಾರವನ್ನು ವಿರೋಧಪಕ್ಷಗಳು ತೀವ್ರವಾಗಿ ವಿರೋಧಿಸಿದ್ದು, ಸರ್ಕಾರವು ಪ್ರಭಾವಿಗಳ ವಿರುದ್ಧ ತನಿಖೆ ನಡೆಯದಂತೆ ತಡೆಯಲು ಈ ಕ್ರಮ ತೆಗೆದುಕೊಂಡಿದೆ ಎಂಬ ಆರೋಪವನ್ನು ಮಾಡಿವೆ  ಸರ್ಕಾರವು ಈ ನಿರ್ಧಾರವನ್ನು ಸಮರ್ಥಿಸಿಕೊಂಡು, ಪ್ರಕರಣವನ್ನು ಮುಂಚಿನ ತನಿಖಾ ತಂಡಗಳ ಮೂಲಕವೇ ಮುಂದುವರಿಸುವ ಸಾಧ್ಯತೆ ಇದೆ ಎಂದು ಹೇಳಿದೆ.

ಸದ್ಯ, ಈ ಪ್ರಕರಣದ ಮುಂದಿನ ಹಂತಗಳು ಏನೆಂದು ಗಮನ ಸೆಳೆಯುತ್ತಿದೆ. ಈ ಬೆಳವಣಿಗೆ ಚಲನಚಿತ್ರ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ.

ಇದನ್ನು ಓದಿ:ಕೊಪ್ಪಳ| ಕೆಎಸ್ಆರ್‌ಟಿಸಿ ಬಸ್ ಪಲ್ಟಿ; 15 ಮಂದಿಗೆ ಗಾಯ

Donate Janashakthi Media

Leave a Reply

Your email address will not be published. Required fields are marked *